ಮನೆ ಬಾಡಿಗೆ ಕುರಿತು ಸರ್ಕಾರ ಹೊಸ ನಿಯಮಗನ್ನು ಜಾರಿ ಮಾಡುತ್ತಲಿರುತ್ತದೆ. ಹಾಗೆಯೇ ಇದೀಗ ರಾಜ್ಯ ಸರ್ಕಾರ ಬಾಡಿಗೆ ಕಾಯ್ದೆಗೆ ಮಹತ್ವದ ತಿದ್ದುಪಡಿ ಮುಂದಾಗಿದೆ. ಹೊಸ ನಿಯಮದಂತೆ ಬಾಡಿಗೆದಾರರಿಗೆ, ಮನೆ ಮಾಲೀಕರಿಗೂ ಅನ್ವಯ ಆಗಲಿದೆ. ನಿಯಮ ಉಲ್ಲಂಘನೆಯಾದ್ರೆ, ಬೃಹತ್ ಮೊತ್ತದ ದಂಡ ಬೀಳಲಿದೆ.
ಕರ್ನಾಟಕ ಬಾಡಿಗೆ ಕಾಯ್ದೆ 1999ಕ್ಕೆ ತಿದ್ದುಪಡಿ ತರಲು ನಿರ್ಧರಿಸಿದೆ. ಬಾಡಿಗೆ ಮನೆಯನ್ನ ಮಾಲೀಕರ ಅನುಮತಿ ಇಲ್ಲದೆ, ಬೇರೆಯವರಿಗೆ ಬಾಡಿಗೆಗೆ ನೀಡಿದರೆ, ಈಗಿನ ದಂಡದ ಮೊತ್ತವನ್ನ 5,000-50,000 ರೂಪಾಯಿಗೆ ಹೆಚ್ಚಳ ಮಾಡಲು ರಾಜ್ಯ ಸರ್ಕಾರ ತೀರ್ಮಾನ ಮಾಡಿದೆ. 3,000-30,000 ರೂಪಾಯಿಗೆ ದಂಡ ಹೆಚ್ಚಳ ಆಗಲಿದೆ. ಜೈಲು ಶಿಕ್ಷೆ ಬದಲು ದಂಡದ ಮೊತ್ತ ಹೆಚ್ಚಳ ಮಾಡಲು ಸರ್ಕಾರ ನಿರ್ಧಾರ ಮಾಡಿದೆ.
ಈ ತಿದ್ದುಪಡಿಗೆ ಒಪ್ಪಿಗೆ ಸೂಚಿಸಿದೆ. ಶೀಘ್ರದಲ್ಲೇ ಇದನ್ನು ವಿಧಾನಸಭೆಯಲ್ಲಿ ಮಂಡನೆ ಮಾಡಲಾಗುವುದು ಅಂತಾ ಕಾನೂನು ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಬೆಂಗಳೂರಿನಂತಹ ನಗರಗಳಲ್ಲಿ ಬಾಡಿಗೆ ಮನೆಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಮನೆ ಮಾಲೀಕರು ಹಾಗೂ ಬಾಡಿಗೆದಾರರ ನಡುವಿನ ಜಗಳಗಳು ಸಹ ಹೆಚ್ಚಳ ಆಗುತ್ತಿರುವ ಹಿನ್ನೆಲೆ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


