Monday, November 2, 2026
spot_img
More
    spot_img
    HomeNational/ Internationalಟ್ರಂಪ್‌ ಅವರ ನಿರ್ಧಾರ ಭಾರತ ಹಾಗೂ ಅಮೆರಿಕದ ಸ್ನೇಹಮಯ ಸಂಬಂಧಕ್ಕೆ ದೊಡ್ಡ ಹಾನಿ- ಕ್ರಿಸ್ಟೋಫರ್ ಪಡಿಲ್ಲಾ

    ಟ್ರಂಪ್‌ ಅವರ ನಿರ್ಧಾರ ಭಾರತ ಹಾಗೂ ಅಮೆರಿಕದ ಸ್ನೇಹಮಯ ಸಂಬಂಧಕ್ಕೆ ದೊಡ್ಡ ಹಾನಿ- ಕ್ರಿಸ್ಟೋಫರ್ ಪಡಿಲ್ಲಾ

    ಟ್ರಂಪ್‌ ಅವರ ನಿರ್ಧಾರ ಭಾರತ ಹಾಗೂ ಅಮೆರಿಕದ ಸ್ನೇಹಮಯ ಸಂಬಂಧಕ್ಕೆ ದೊಡ್ಡ ಹಾನಿಯನ್ನು ಉಂಟುಮಾಡುವ ಅಪಾಯವಿದೆ ಎಂದು ಅಮೆರಿಕದ ಅಧಿಕಾರಿಗಳೇ ಎಚ್ಚರಿಕೆ ನೀಡಿದ್ದಾರೆ. ಜಾರ್ಜ್ ಡಬ್ಲ್ಯೂ. ಬುಷ್ ಆಡಳಿತದಲ್ಲಿ ಸೇವೆ ಸಲ್ಲಿಸಿದ್ದ ಮತ್ತು ಈಗ ಜಾಗತಿಕ ಸಲಹಾ ಸಂಸ್ಥೆಯಾದ ಬ್ರನ್ಸ್‌ವಿಕ್‌ನಲ್ಲಿ ಹಿರಿಯ ಸಲಹೆಗಾರರಾಗಿರುವ ಪಡಿಲ್ಲಾ, ಭಾರತದ ರಫ್ತಿನ ಮೇಲೆ ಯುಎಸ್‌ ಸುಂಕಗಳ ಸಂಭಾವ್ಯ ಪರಿಣಾಮದ ಕುರಿತು ಪಡಿಲ್ಲಾ ಮಾತನಾಡಿ, ಇದು ತುಂಬಾ ನೋವಿನಿಂದ ಕೂಡಿದೆ. ಆದರೆ ಭಾರತ ಈ ಹೊಡೆತದಿಂದ ಸುಮ್ಮನೆ ಕುಳಿತುಕೊಳ್ಳುವುದಿಲ್ಲ, ಭಾರತೀಯ ರಫ್ತುದಾರರು ಪರ್ಯಾಯ ಮಾರುಕಟ್ಟೆಗಳ ಕಡೆಗೆ ಗಮನ ಹರಿಸಬಹುದು ಎಂಬ ವಿಶ್ವಾಸವಿದೆ ಎಂದಿದ್ದಾರೆ.‌

    ಅಮೆರಿಕದ ಅಂತರರಾಷ್ಟ್ರೀಯ ವ್ಯಾಪಾರದ ವಾಣಿಜ್ಯ ಇಲಾಖೆಯ ಮಾಜಿ ಅಧೀನ ಕಾರ್ಯದರ್ಶಿ ಮತ್ತು ಹಿರಿಯ ವಿದೇಶಾಂಗ ನೀತಿ ತಜ್ಞ ಕ್ರಿಸ್ಟೋಫರ್ ಪಡಿಲ್ಲಾ, ನಡೆಯುತ್ತಿರುವ ವ್ಯಾಪಾರ ಉದ್ವಿಗ್ನತೆಗಳು ಭಾರತ-ಅಮೆರಿಕ ಸಂಬಂಧಕ್ಕೆ ದೀರ್ಘಾವಧಿಯ ಹಾನಿಯನ್ನುಂಟುಮಾಡುವ ಅಪಾಯವಿದೆ. ಸಣ್ಣ ಪುಟ್ಟ ಸಮಸ್ಯೆಗಳಿಗಾಗಿ ನಾವು ಇಂತಹ ದೊಡ್ಡ ಸಂಬಂಧವನ್ನೇ ಅಪಾಯಕ್ಕೆ ಸಿಲುಕಿಸುತ್ತಿದ್ದೇವೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

    ಅಮೆರಿಕ ಇಷ್ಟು ದೊಡ್ಡ ಮಟ್ಟದಲ್ಲಿ ಸುಂಕ ಹೇರಿರುವುದು ಭಾರತಕ್ಕೆ ದೀರ್ಘಕಾಲದವರೆಗೆ ನೆನಪಿಸುವಂತೆ ಮಾಡುವುದಂತೂ ಖಚಿತ. ಇದು ಭಾರತಕ್ಕೆ ಅಮೆರಿಕ ಒಂದು ವಿಶ್ವಾಸಾರ್ಹ ಪಾಲುದಾರ ಅಲ್ಲ ಎಂಬ ಭಾವನೆಗೆ ಕಾರಣವಾಗಲಿದೆ. ಈ ಅವಮಾನಗಳನ್ನು ಭಾರತ ಬೇಗನೆ ಮರೆತುಬಿಡುವುದು ಅಸಾಧ್ಯ. ಮಾತ್ರವಲ್ಲದೇ ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾದ ಭಾರತವನ್ನು ಸತ್ತ ಆರ್ಥಿಕತೆ ಎಂದು ಹೇಳುವುದು ಕೂಡಾ ದೊಡ್ಡ ಪರಿಣಾಕ್ಕೆ ಕಾರಣವಾಗಲಿದೆ ಎಂದಿದ್ದಾರೆ.

    ಟ್ರಂಪ್ ಹೊಸ ಇಂಟೆಲ್ ಸಿಇಒ ಲಿಪ್-ಬು ಟಾನ್ ಅವರ ತಕ್ಷಣದ ರಾಜೀನಾಮೆಗೆ ಒತ್ತಾಯ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search