Monday, August 31, 2026
spot_img
More
    spot_img
    Homescrolling newsಐದು ವರ್ಷಗಳಿಂದ ಒಂದೇ ಒಂದು ರೂಪಾಯಿ ವೇತನ ಪಡೆಯದೆ ದುಡಿಯುತ್ತಿದ್ದಾನೆ ಈ ವ್ಯಕ್ತಿ!

    ಐದು ವರ್ಷಗಳಿಂದ ಒಂದೇ ಒಂದು ರೂಪಾಯಿ ವೇತನ ಪಡೆಯದೆ ದುಡಿಯುತ್ತಿದ್ದಾನೆ ಈ ವ್ಯಕ್ತಿ!

    ಈ ವ್ಯಕ್ತಿ ಬರೋಬ್ಬರಿ 5 ವರ್ಷಗಳಿಂದ ಒಂದೇ ಒಂದು ರೂಪಾಯಿ ವೇತನ ಪಡೆದಿಲ್ಲ, ಯಾವ ಭತ್ಯೆ ಕೂಡಾ ಪಡೆದಿಲ್ಲ. ಆದರೂ ವರ್ಷದಿಂದ ವರ್ಷಕ್ಕೆ ಈ ವ್ಯಕ್ತಿಯ ಆಸ್ತಿ ಬೆಳೆಯುತಲೇ ಇದೆ. ರಿಲಯನ್ಸ್ ಇಂಡಸ್ಟ್ರಿ ಗ್ರೂಪ್ ಚೇರ್ಮೆನ್ ಮುಕೇಶ್ ಅಂಬಾನಿ  ಕಳೆದ ನಾಲ್ಕು ವರ್ಷಗಳಿಂದ ಒಂದೇ ಒಂದು ರೂಪಾಯಿ ವೇತನ ಪಡೆದಿಲ್ಲ.ಕೋವಿಡ್ ವೇಳೆ ಮುಕೇಶ್ ಅಂಬಾನಿ ತಮ್ಮ ಕಂಪನಿಯಿಂದ ವೇತನ ಪಡೆಯುವುದನ್ನು ನಿಲ್ಲಿಸಿದ್ದರು. ಕಂಪನಿಯ ಉದ್ಯೋಗಿಗಳಿಗೆ ಯಾವುದೇ ರೀತಿಯಲ್ಲಿ ಆರ್ಥಿಕ ಸಮಸ್ಯೆ ಎದುರಾಗಬಾರದು ಎನ್ನುವ ನಿಟ್ಟಿನಲ್ಲಿ ಈ ನಿರ್ಧಾರಕ್ಕೆ ಬಂದಿದ್ದರು.  ನಂತರ ತಮ್ಮ ಈ ನಿಲುವನ್ನು ಇಂದಿಗೂ ಮುಂದುವರೆಸಿಕೊಂಡೇ ಬಂದಿದ್ದಾರೆ. 

    Advertisement

    ಕೋವಿಡ್‌ಗೂ ಮೊದಲು ಮುಕೇಶ್ ಅಂಬಾನಿ ಖಂಡಿತವಾಗಿಯೂ ತಮ್ಮ ಕಂಪನಿಯಿಂದ ವಾರ್ಷಿಕ ವೇತನ ಪಡೆಯುತ್ತಿದ್ದರು.  ಆಗ ಅವರು ವಾರ್ಷಿಕವಾಗಿ 15 ಕೋಟಿ ರೂಪಾಯಿ ವೇತನ ಪಡೆಯುತ್ತಿದ್ದರು. ಇನ್ನು ಮುಕೇಶ್ ಅಂಬಾನಿ ರಿಲಯನ್ಸ್ ಬೋರ್ಡ್‌ನಲ್ಲಿ ಹಲವು ಸದಸ್ಯರಿದ್ದಾರೆ. ಇಲ್ಲಿ ಹುದ್ದೆಗೆ ಅನುಸಾರವಾಗಿ ಅವರವ ವೇತನ ನಿಗದಿಯಾಗಿರುತ್ತದೆ. 2023ರಲ್ಲಿ ರಿಲಯನ್ಸ್ ಬೋರ್ಡ್ ಸದಸ್ಯರಾಗಿ ಇಶಾ ಅಂಬಾನಿ, ಅಕಾಶ್ ಅಂಬಾನಿ ಹಾಗೂ ಅನಂತ್ ಅಂಬಾನಿಯನ್ನು ಸೇರ್ಪಡೆಗೊಳಿಸಲಾಗಿತ್ತು. ಈ ವೇಳೆ ಇವರಿಗೆ ಯಾವುದೇ ವಾರ್ಷಿಕ ವೇತನ ಇರಲಿಲ್ಲ.

     ಮುಕೇಶ್ ಅಂಬಾನಿ ವೇತನ ಪಡೆಯುತ್ತಿಲ್ಲ ಸರಿ. ಆದರೂ  ಪ್ರತಿ ವರ್ಷ ಹೆಚ್ಚು ಕಡಿಮೆ 3,000 ಕೋಟಿ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ಕಳೆದ ವರ್ಷವೂ ಮುಖೇಶ್  3,600 ಕೋಟಿ ರೂಪಾಯಿ ಆದಾಯ ಗಳಿಸಿದ್ದಾರೆ. ಮುಕೇಶ್ ಅಂಬಾನಿ ಬರೋಬ್ಬರಿ 110 ಬಿಲಿಯನ್ ಅಮೆರಿಕನ್ ಡಾಲರ್ ಆಸ್ತಿ ಒಡೆಯ. ಹೀಗಾಗಿ ಅವರು ಡಿವಿಡೆಂಡ್ ಮೂಲಕ ಪ್ರತಿ ವರ್ಷ ಸಾವಿರಾರು ಕೋಟಿ ರೂಪಾಯಿ ಆದಾಯ ಪಡೆಯುತ್ತಿದ್ದಾರೆ. ರಿಲಯನ್ಸ್ ಕಂಪನಿಯ 1.61 ಕೋಟಿ ಷೇರುಗಳು ಮುಕೇಶ್ ಅಂಬಾನಿ ಹೆಸರಿನಲ್ಲಿದೆ. ಶೇಕಡಾ 5.50ರ ಬಡ್ಡಿದರ ಮೂಲಕ ಮುಕೇಶ್ ಅಂಬಾನಿ 8.85 ಕೋಟಿ ರೂಪಾಯಿ ಡಿವೆಡೆಂಟ್ ಮೊತ್ತ ಆದಾಯ ರೂಪಾಯದಲ್ಲಿ ಪಡೆಯುತ್ತಾರೆ. ಇನ್ನು ಅಂಬಾನಿ ಒಡೆತದನ ಪ್ರಮೋಟರ್ ಗ್ರೂಪ್ ಕಂಪನಿಯ ಬಹುತೇಕ ಷೇರು ಮುಕೇಶ್ ಅಂಬಾನಿ ಬಳಿಯೇ  ಇದೆ. ಹೀಗಾಗಿ 2024-25 ಸಾಲಿನಲ್ಲಿ ಡಿವಿಡೆಂಡ್ ರೂಪದಲ್ಲಿ 3655 ರೂಪಾಯಿ ಆದಾಯವನ್ನು ಮುಕೇಶ್ ಅಂಬಾನಿ ಗಳಿಸಿದ್ದಾರೆ. 

    ,ಟ್ರಂಪ್ ಹೊಸ ಇಂಟೆಲ್ ಸಿಇಒ ಲಿಪ್-ಬು ಟಾನ್ ಅವರ ತಕ್ಷಣದ ರಾಜೀನಾಮೆಗೆ ಒತ್ತಾಯ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading