Saturday, November 7, 2026
spot_img
More
    spot_img
    HomeSportsCricketಐಪಿಎಲ್‌: ರಾಜಸ್ಥಾನ್‌ ರಾಯಲ್ಸ್‌ಗೆ ತನ್ನ ಸ್ಟಾರ್‌ ಆಟಗಾರನನ್ನು ನೀಡಿ ಸಂಜು ಸ್ಯಾಮ್ಸನ್‌ ಪಡೆಯಲು ಸಿದ್ಧವಾದ ಚೆನ್ನೈ!

    ಐಪಿಎಲ್‌: ರಾಜಸ್ಥಾನ್‌ ರಾಯಲ್ಸ್‌ಗೆ ತನ್ನ ಸ್ಟಾರ್‌ ಆಟಗಾರನನ್ನು ನೀಡಿ ಸಂಜು ಸ್ಯಾಮ್ಸನ್‌ ಪಡೆಯಲು ಸಿದ್ಧವಾದ ಚೆನ್ನೈ!

    ಬೆಂಗಳೂರು: ಮುಂಬರುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌ 2026ಕ್ಕೂ ಮುನ್ನ ಮಿನಿ ಹರಾಜು ನಡೆಯಲಿದೆ. ಇದೇ ಡಿಸೆಂಬರ್‌ನ ಮಧ್ಯದಲ್ಲಿ ಈ ಮಿನಿ ಹರಾಜು ನಡೆಯಲಿದ್ದು, ಸದ್ಯ ಫ್ರಾಂಚೈಸಿಗಳು ಯಾವ ಆಟಗಾರರನ್ನು ಉಳಿಸಿಕೊಳ್ಳಬೇಕು, ಯಾವ ಆಟಗಾರರನ್ನು ಕೈಬಿಡಬೇಕು ಎಂಬ ಲೆಕ್ಕಾಚಾರದಲ್ಲಿವೆ.

    ಇನ್ನು ಫ್ರಾಂಚೈಸಿಗಳಿಗೆ ಹರಾಜಿಗೂ ಮುನ್ನ ಆಟಗಾರರನ್ನು ಟ್ರೇಡ್‌ ಮಾಡಿಕೊಳ್ಳುವ ಆಯ್ಕೆಯನ್ನು ನೀಡಲಾಗಿದ್ದು, ಚೆನ್ನೈ ಸೂಪರ್‌ ಕಿಂಗ್ಸ್‌ ಹಾಗೂ ರಾಜಸ್ಥಾನ್‌ ರಾಯಲ್ಸ್‌ ಫ್ರಾಂಚೈಸಿಗಳು ದೊಡ್ಡ ಟ್ರೇಡ್‌ ಒಂದರ ಮಾತುಕತೆಯಲ್ಲಿವೆ.

    ಹೌದು, ಕ್ರಿಕ್‌ಬಜ್‌ ವೆಬ್‌ತಾಣದ ವರದಿಯ ಪ್ರಕಾರ ಚೆನ್ನೈ ಸೂಪರ್‌ ಕಿಂಗ್ಸ್‌ ನಾಯಕತ್ವದ ಸಾಮರ್ಥ್ಯ ಇರುವ ಸಂಜು ಸ್ಯಾಮ್ಸನ್‌ರನ್ನು ತಂಡಕ್ಕೆ ಕರೆತರುವತ್ತ ಕಣ್ಣಿಟ್ಟಿದ್ದು, ಇದಕ್ಕಾಗಿ ತನ್ನ ಸ್ಟಾರ್‌ ಆಟಗಾರ ರವೀಂದ್ರ ಜಡೇಜಾರನ್ನು ಟ್ರೇಡ್‌ ಮಾಡುವ ಚಿಂತನೆಯಲ್ಲಿದೆ.

    ಸಂಜು ಸ್ಯಾಮ್ಸನ್‌ರನ್ನು ತಂಡಕ್ಕೆ ಕರೆತರುವುದಕ್ಕಾಗಿ ರವೀಂದ್ರ ಜಡೇಜಾ, ಮಹೀಶ ಪತಿರಾಣಾ ಅಥವಾ ಶಿವಮ್‌ ದುಬೆ ಈ ಮೂವರಲ್ಲಿ ಒಬ್ಬರನ್ನು ಮಾರಾಟ ಮಾಡಲು ಚೆನ್ನೈ ಸೂಪರ್‌ಕಿಂಗ್ಸ್‌ ಸಿದ್ಧವಿದೆ ಎಂದು ಹೇಳಲಾಗುತ್ತಿತ್ತು. ರಾಜಸ್ಥಾನ್‌ ರಾಯಲ್ಸ್‌ ರವೀಂದ್ರ ಜಡೇಜಾರನ್ನು ಪಡೆಯಲು ಸಿದ್ಧರಾಗಿದ್ದು, ಜಡೇಜಾ ಜತೆಗೆ ಮತ್ತೊಬ್ಬ ವಿದೇಶಿ ಆಟಗಾರನನ್ನೂ ಸಹ ನೀಡಬೇಕೆಂದು ಚೆನ್ನೈ ಸೂಪರ್‌ಕಿಂಗ್ಸ್‌ಗೆ ಷರತ್ತು ಹಾಕಿದೆ ಎಂದು ಹೇಳಲಾಗುತ್ತಿದೆ.

    ಒಟ್ಟಿನಲ್ಲಿ ಚೆನ್ನೈ ಸೂಪರ್‌ಕಿಂಗ್ಸ್‌ ರವೀಂದ್ರ ಜಡೇಜಾರನ್ನು ಬಿಟ್ಟುಕೊಡಲು ಸಿದ್ಧವಾಗಿದ್ದು, ಸಂಜು ಸ್ಯಾಮ್ಸನ್‌ ಮುಂಬರುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ತನ್ನ ನೆರೆ ರಾಜ್ಯದ ಜೆರ್ಸಿ ತೊಟ್ಟು ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಾಗಿದೆ.

    ಚೆನ್ನೈ ಸೂಪರ್‌ ಕಿಂಗ್ಸ್‌ ಈಗಾಗಲೇ ಮುಂಬರುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಎಂಎಸ್‌ ಧೋನಿ ಕಣಕ್ಕಿಳಿಯಲಿದ್ದಾರೆ ಎಂಬುದನ್ನು ಖಚಿತಪಡಿಸಿದೆ. ಆದರೆ ನಂತರದ ಟೂರ್ನಿಗಳಲ್ಲಿ ಧೋನಿ ಕಣಕ್ಕಿಳಿಯುವುದು ಅನುಮಾನ. ಹೀಗಾಗಿ ತಂಡದ ನಾಯಕತ್ವದ ಜವಾಬ್ದಾರಿ ಹೊತ್ತುಕೊಳ್ಳುವ ಆಟಗಾರನ ಅಗತ್ಯತೆ ಇದ್ದು, ಇದೇ ಕಾರಣಕ್ಕೆ ಸಂಜುಗಾಗಿ ಚೆನ್ನೈ ಬಲೆ ಬೀಸಿದೆ.

    ನಾನು ರುಕ್ಮಿಣಿ ವಸಂತ್‌ ಸ್ವಲ್ಪ ಹಣ ಬೇಕಿದೆ ಕಳುಹಿಸಿ; ಈ ರೀತಿ ಮೆಸೇಜ್‌ ನಿಮಗೂ ಬರಬಹುದು ಹುಷಾರ್!


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search