ನವೆಂಬರ್ 2ರಂದು ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಐಸಿಸಿ ವನಿತೆಯರ ವಿಶ್ವಕಪ್ 2025ರ ಫೈನಲ್ ಪಂದ್ಯದಲ್ಲಿ ಭಾರತ ವನಿತೆಯರ ತಂಡ ದಕ್ಷಿಣ ಆಫ್ರಿಕಾ ವನಿತೆಯರ ತಂಡದ ವಿರುದ್ಧ 52 ರನ್‌ಗಳ ಭರ್ಜರಿ ಗೆಲುವನ್ನು ದಾಖಲಿಸುವ ಮೂಲಕ ತನ್ನ ಚೊಚ್ಚಲ ಐಸಿಸಿ ವಿಶ್ವಕಪ್ ಟ್ರೋಫಿಯನ್ನು ಎತ್ತಿಹಿಡಿಯಿತು.
ಈ ಮೂಲಕ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಕಪಿಲ್ ದೇವ್ ಹಾಗೂ ಎಂಎಸ್ ಧೋನಿ ಬಳಿಕ ಭಾರತಕ್ಕೆ ಐಸಿಸಿ ಏಕದಿನ ವಿಶ್ವಕಪ್ ತಂದಿಟ್ಟ ಮೂರನೇ ಕ್ಯಾಪ್ಟನ್ ಎಂಬ ಮಹಾ ದಾಖಲೆ ಬರೆದರು.
ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ 88 ಎಸೆತಕ್ಕೆ 89 ರನ್ ಬಾರಿಸುವ ಮೂಲಕ ತಂಡ ಫೈನಲ್ ತಲುಪುವಲ್ಲಿ ಮಹಾ ಕೊಡುಗೆ ನೀಡಿದ ಹರ್ಮನ್‌ಪ್ರೀತ್ ಕೌರ್ ಲೀಗ್ ಹಂತದಲ್ಲಿ ತಂಡ ಹ್ಯಾಟ್ರಿಕ್ ಸೋಲನ್ನು ಕಂಡ ಬಳಿಕ ತಮ್ಮ ಚಾಣಾಕ್ಷತನದ ನಾಯಕತ್ವದಿಂದ ತಂಡವನ್ನು ಮತ್ತೆ ಯಶಸ್ಸಿನ ಹಾದಿಗೆ ಬರುವಂತೆ ಮಾಡಿದ್ದರು.
ಹೀಗೆ ಟೂರ್ನಿಯಲ್ಲಿ ಯಶಸ್ವಿ ನಾಯಕಿಯಾಗಿ ಗೆದ್ದ ಹರ್ಮನ್‌ಪ್ರೀತ್ ಕೌರ್ ಕುರಿತು ಇದೀಗ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ವೊಂದು ವೈರಲ್ ಆಗಿದೆ. ಶಫಾಲಿ ವರ್ಮಾ ಫ್ಯಾನ್‌ಗರ್ಲ್ ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹರ್ಮನ್‌ಪ್ರೀತ್ ಕೌರ್ ಓರ್ವ ಸಲಿಂಗಕಾಮಿ ಎಂದು ಬರೆದುಕೊಳ್ಳಲಾಗಿದೆ.
ವಿಶ್ವಕಪ್ ಗೆದ್ದ ಬಳಿಕ ನುಪುರ್ ಕಶ್ಯಪ್ ಎಂಬವರ ಜತೆ ಟ್ರೋಫಿ ಹಿಡಿದು ಪೋಸ್ ಕೊಟ್ಟಿರುವ ಹರ್ಮನ್‌ಪ್ರೀತ್ ಫೋಟೊವನ್ನು ಹಂಚಿಕೊಳ್ಳಲಾಗಿದ್ದು, ಈಕೆ ಹರ್ಮನ್‌ಪ್ರೀತ್ ಕೌರ್ ಅವರ ಬೆಸ್ಟ್‌ಫ್ರೆಂಡ್ ಹಾಗೆಯೇ ಗರ್ಲ್‌ಫ್ರೆಂಡ್ ಹಾಗೂ ಪಾರ್ಟ್ನರ್ ಎಂದು ಬರೆದುಕೊಂಡಿದ್ದಾರೆ.
ಮುಂದುವರಿದು 2023ರ ಹುಟ್ಟುಹಬ್ಬದಂದು ನನ್ನ ಸಂಪೂರ್ಣ ಪ್ರಪಂಚ ನುಪುರ್ ಎಂದು ಹರ್ಮನ್ ಪೋಸ್ಟ್ ಹಂಚಿಕೊಂಡಿದ್ದರು. ಆದರೆ ಸಾಕಷ್ಟು ಟೀಕೆಗಳು ಬಂದ ಬೆನ್ನಲ್ಲೇ ಆ ಪೋಸ್ಟ್ ಅನ್ನು ತೆರವುಗೊಳಿಸಿದರು. ಅದಕ್ಕಾಗಿಯೇ ಈಗ ಅವರು ಹುಟ್ಟುಹಬ್ಬದ ಶುಭಾಶಯಗಳು ಬೆಸ್ಟ್‌ಫ್ರೆಂಡ್ ಎಂದು ಮಾತ್ರ ಬರೆದುಕೊಂಡಿದ್ದಾರೆ. ನುಪುರ್ 2008ಕ್ಕಿಂತ ಮುಂಚೆಯಿಂದಲೂ ಹರ್ಮನ್ ಜತೆಗಿದ್ದಾರೆ. ಸದ್ಯ ಅವರಿಬ್ಬರೂ ಲಿವಿಂಗ್ ಟುಗೆದರ್‌ನಲ್ಲಿದ್ದಾರೆ, ಅವರ ಆಸ್ತಿ, ಜೀವನ, ಸುಖ, ದುಃಖ ಎಲ್ಲವನ್ನೂ ಹಂಚಿಕೊಳ್ಳುತ್ತಿದ್ದಾರೆ. ಹರ್ಮನ್ ಖ್ಯಾತಿ ಪಡೆಯುವುದಕ್ಕಿಂತ ಮುಂಚೆಯಿಂದಲೂ ನುಪುರ್ ಅವರ ಜತೆ ಇದ್ದಾರೆ, ಅವರ ಬೆನ್ನೆಲುಬಾಗಿದ್ದಾರೆ. ನನಗೆ ಹೇಗೆ ಇದೆಲ್ಲ ಗೊತ್ತು ಎಂದು ಕೇಳಬೇಡಿ. 2018ರಿಂದ ನಾನು ಅವರನ್ನು ಫಾಲೋ ಮಾಡುತ್ತಿದ್ದೇನೆ, ಅದಕ್ಕಿಂತ ಮುಂಚೆ ಚಿಕ್ಕವಳಿದ್ದಾಗ ನನ್ನ ತಾಯಿಯ ಇನ್ಸ್ಟಾಗ್ರಾಮ್ ಖಾತೆಯಿಂದ ಅವರಿಬ್ಬರನ್ನು ಫಾಲೊ ಮಾಡುತ್ತಿದ್ದೇನೆ. ಆಗ ನಾನು ವಿದ್ಯಾರ್ಥಿಯಾಗಿದ್ದೆ. 2016ರಿಂದ ನಾನು ಅವರ ಎಲ್ಲ ಪೋಸ್ಟ್ ಹಾಗೂ ಸ್ಟೋರಿಗಳನ್ನು ನೋಡಿದ್ದೇನೆ ಎಂದು ಬರೆದುಕೊಳ್ಳಲಾಗಿದೆ.
ಕೊನೆಗೆ ನುಪುರ್‌ಗಾಗಿ ಈ ಸಾಲುಗಳು ಎಂದು ಬರೆದುಕೊಂಡಿರುವ ಬಳಕೆದಾರರು ನುಪುರ್ ಗೌರವಕ್ಕೆ ಅರ್ಹರು, ಹರ್ಮನ್ ಪಾಲಿಗೆ ಅದೃಷ್ಟವಂತೆ. ಕ್ರೀಡಾಂಗಣಗಳು ಖಾಲಿ ಹೊಡೆಯುತ್ತಿದ್ದ ಸಂದರ್ಭದಲ್ಲಿ ಹರ್ಮನ್‌ಗೆ ಬೆಂಬಲವಾಗಿ ನಿಂತವರು. ಆದರೆ ವಿರೋಧಿಗಳು ಹಾಗೂ ಸಲಿಂಗಕಾಮ ವಿರೋಧಿಗಳಿಂದಾಗಿ ಈಗ ಹರ್ಮನ್ ಮುಕ್ತವಾಗಿ ಆಕೆಯನ್ನು ಹೊಗಳಲು ಸಾಧ್ಯವಾಗುತ್ತಿಲ್ಲ. ಅವರನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ ಹಾಗೂ ಗೌರವಿಸಿ. ಪ್ರೀತಿ ಎಂದರೆ ಕೇವಲ ಕಾಮ ಒಂದೇ ಅಲ್ಲ, ಅದು ಎಲ್ಲದ್ದಕ್ಕಿಂತ ದೊಡ್ಡದು, ನುಪುರ್ ಕಶ್ಯಪ್ ಮೇಡಂ ನಿಮ್ಮೆಲ್ಲ ತ್ಯಾಗಕ್ಕೆ ಧನ್ಯವಾದಗಳು ಹಾಗೂ ಹುಟ್ಟುಹಬ್ಬದ ಶುಭಾಶಯಗಳು ಎಂದು ಉಲ್ಲೇಖಿಸಿದ್ದಾರೆ.
ಇನ್ನು ಹರ್ಮನ್‌ಪ್ರೀತ್ ಕೌರ್ ಸಲಿಂಗಕಾಮಿ ಎನ್ನುವುದಕ್ಕೆ ಎಲ್ಲಿಯೂ ಪುರಾವೆ ಇಲ್ಲ ಹಾಗೂ ಅವರೂ ಸಹ ಎಲ್ಲಿಯೂ ಮುಕ್ತವಾಗಿ ಹೇಳಿಕೊಂಡಿಲ್ಲ. ಆದರೆ ಶಫಾಲಿ ಫ್ಯಾನ್ ಗರ್ಲ್ ಎಂಬ ಖಾತೆಯಲ್ಲಿ ಹಂಚಿಕೊಂಡಿರುವ ಈ ಪೋಸ್ಟ್ ಸದ್ಯ ವಿವಾದ ಎಬ್ಬಿಸಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


