ಬೆಳಗಾವಿ: ಬಿಪಿಎಲ್ ಪಡಿತರಚೀಟಿ ಪರಿಷ್ಕರಣೆ ಕುರಿತಂತೆ ಉಂಟಾಗಿರುವ ಗೊಂದಲಗಳ ಬಗ್ಗೆ ಪ್ರತಿಪಕ್ಷಗಳು ರಾಜ್ಯ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡ ಪ್ರಸಂಗ ವಿಧಾನಪರಿಷತ್ ನಲ್ಲಿ ಜರುಗಿತು.
ಸದಸ್ಯರಾದ ಸಿ.ಟಿ.ರವಿ, ಜವರಾಯಿಗೌಡ, ಟಿ.ಎ.ಶರವಣ, ಹನುಮಂತಪ್ಪ ರುದ್ರಪ್ಪ ನಿರಾಣಿ ಮತ್ತಿತರರು ಪ್ರಶ್ನೆ ಕೇಳಿದ್ದರು. ಜೆಡಿಎಸ್ ನ ಜವರಾಯಿಗೌಡ ಅವರು, ೪೦ ಲಕ್ಷ ನಕಲಿ ಕಾರ್ಡ್ ಪಡೆದುಕೊಂಡಿದ್ದಾರೆ ಎಂದು ಸಚಿವರೇ ಹೇಳಿದ್ದಾರೆ. ಅವರ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನೆ ಮಾಡಿದರು.
ಕಾಂಗ್ರೆಸ್ ನ ಡಿಸೋಜಾ ಮಾತನಾಡಿ ತೆರಿಗೆ ಕಟ್ಟದೇ ಇರುವವರು ಪಡಿತರಚೀಟಿ ಪಡೆದುಕೊಂಡರೆ ರ‍್ಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗುತ್ತದೆ. ಹಾಗಾದರೆ ಅವರ ಮೇಲೆ ಏಕೆ ಕ್ರಮ ತೆಗೆದುಕೊಂಡಿಲ್ಲ. ಇವರನ್ನು ರಕ್ಷಣೆ ಮಾಡುತ್ತಿರುವವರು ಯಾರು ಎಂದು ಪ್ರಶ್ನಿಸಿದರು.
ಬಿಜೆಪಿ ಸದಸ್ಯ ಸಿ.ಟಿ.ರವಿ ಮಾತನಾಡಿ, ಪ್ರತಿನಿತ್ಯ ಕಾಳ ಸಂತೆಯಲ್ಲಿ ಅಕ್ಕಿಮಾರಾಟವಾಗುತ್ತಿದೆ. ಅಕ್ಕಿ ಯಾರೂ ಕೊಡುತ್ತಾರೆ. ಎಲ್ಲಿಂದ ಹೋಗುತ್ತೆ..? ಇದನ್ನ ನಿಯಂತ್ರಿಸಲು ರ‍್ಕಾರದ ಕ್ರಮ ಏನು ಎಂದು ಪ್ರಶ್ನಿಸಿದರು.
ಜೆಡಿಎಸ್ ಸದಸ್ಯ ಟಿ.ಎ.ಶರವಣ ಮಾತನಾಡಿದ ಬಿಪಿಎಲ್ ಕಾರ್ಡ್ ಗೆ ಅರ್ಹರಿಗೆ ಪಡಿತರ ಕಾರ‍್ಡ್ ಕೊಟ್ಟ ಅಧಿಕಾರಿಗಳ ವಿರುದ್ಧ ಯಾವ ಕ್ರಮ ಆಗಿದೆ. ಅರ್ಹರು ಮತ್ತು ಅರ್ಹ ಮಾನದಂಡಗಳು ಏನು..? ಒಂದೊಂದು ಸಲ ಒಂದೊಂದು ಉತ್ತರ ಕೊಡುತ್ತಿದ್ದೀರಾ? ಒಂದೂವರೇ ಕೋಟಿ ಬಿಪಿಎಲ್ ಕಾರ್ಡ್ನ ಅಕ್ಕಿಯನ್ನು ಹೆಚ್ಚಿನ ಬೆಲೆಗೆ ಬೇರೆಡೆ ಮಾರಾಟ ಆಗುತ್ತದೆ ಇದಕ್ಕೆ ರ‍್ಕಾರದ ಕ್ರಮ ಏನು ಎಂದು ಪ್ರಶ್ನೆ ಮಾಡಿದರು.
ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವ ಕೆ.ಹೆಚ್.ಮುನಿಯಪ್ಪ, ಕುಟುಂಬದ ರ‍್ಷಿಕ ಆದಾಯ ೧,೨೦,೦೦೦ ಇರುವವರಿಗೆ ತೆರಿಗೆ ಪಾವತಿದಾರರಿಗೆ ಮತ್ತು ಸರ್ಕಾರಿ ನೌಕರರಿಗೆ ಹೊರೆತುಪಡಿಸಿ ಎಲ್ಲರಿಗೂ ಬಿಪಿಎಲ್ ಕಾರ್ಡ್ ನೀಡಿದ್ದೇವೆ. ಮೂರು ತಿಂಗಳು ಸಮಯ ಕೊಟ್ಟರೆ ಸಾಧ್ಯವಾಗುತ್ತದೆ. ೧೩ ಲಕ್ಷ ಕಾರ್ಡ್ಗಳನ್ನು ಪರಿಷ್ಕರಣೆ ಮಾಡಿದಾಗ ೩,೩೫,೦೦೦ ಅರ್ಹರು ಕಂಡುಬಂದಿದ್ದಾರೆ ಎಂದರು.
ಕೆಲವು ಬಿಪಿಎಲ್ ಕಾರ್ಡ್ದಾರರಿಗೆ ತೊಂದರೆ ಆಗಿದೆ. ಮೂರು ತಿಂಗಳು ಸಹಕಾರ ಕೊಟ್ಟರೆ ಸರಿಪಡಿಸುತ್ತೇವೆ. ರ‍್ಹರಿಗೆ ಪೆನಾಲಿಟಿ ಕೂಡ ಹಾಕಿದ್ದೀವಿ. ಹಣ ವಸೂಲಿ ಮಾಡುವವರ ವಿರುದ್ಧ ಲಿಖಿತ ಅರ್ಜಿ ಕೊಟ್ಟರೆ ಅಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ ಎಂದರು.
ಸಚಿವರ ಉತ್ತರಕ್ಕೆ ತೃಪ್ತರಾಗದ ಪ್ರತಿಪಕ್ಷಗಳ ಸದಸ್ಯರು, ರ‍್ದಾಕ್ಷಿಣ್ಯವಾಗಿ ಕ್ರಮ ವಹಿಸಿ. ಇದಕ್ಕೆ ನಮ್ಮ ಸಂರ‍್ಣ ಬೆಂಬಲ ನಿಮಗೆ ಇದೆ. ನೀವು ಯಾಕೆ ಹೆದರುತ್ತಿದ್ದೀರಾ? ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಿ ಎಂದು ಆಗ್ರಹಿಸಿದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


