ಬೆಳಗಾವಿ: ಸರ್ಕಾರ ನಮ್ಮ ಹೋರಾಟವನ್ನು ಹತ್ತಿಕ್ಕಲು ಪ್ರಯತ್ನಿಸಿದರೆ ಬರುವ ದಿನಗಳಲ್ಲಿ ಅದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಪಂಚಮಸಾಲಿ ಸಮುದಾಯದ ಜಯ ಮೃತ್ಯಂಜಯ ಸ್ವಾಮೀಜಿ ನೇರ ಎಚ್ಚರಿಕೆ ಕೊಟ್ಟಿದ್ದಾರೆ.
ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಅವರ ಸಣೆ ನಡೆಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಪಂಚಮಸಾಲಿ ಸಮುದಾಯಕ್ಕೆ ೨ ಎ ಮೀಸಲಾತಿ ನೀಡಬೇಕು ಎಂಬ ನಮ್ಮ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಹಾಗೊಂದು ವೇಳೆ ಹತ್ತೀಕ್ಕುವ ಪ್ರಯತ್ನ ಮಾಡಿದರೆ, ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಸ್ವಾಮೀಜಿ ಎಚ್ಚರಿಕೆ ಕೊಟ್ಟರು.
ಪಂಚಮಸಾಲಿ ೨ಂ ಮೀಸಲಾತಿಗಾಗಿ ಆಗ್ರಹಿಸಿ ನಾಳೆ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗಿದೆ. ಆದರೆ ಹೋರಾಟದಲ್ಲಿ ಟ್ರ‍್ಯಾಕ್ಟರ್, ಕ್ರೂಸರ್ ವಾಹನ ನಿಷೇಧ ಹೇರಿ ಬೆಳಗಾವಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಜಿಲ್ಲಾಧಿಕಾರಿ ನಿಷೇಧಾಜ್ಞೆ ವಾಪಸ್ ಪಡೆಯುತ್ತೇನೆ ಎಂದಿದ್ದಾರೆ, ನಮ್ಮ ಹೋರಾಟ ಹತ್ತಿಕ್ಕುವ ಯತ್ನ ಮಾಡಬಾರದು ಎಂದು ಮನವಿ ಮಾಡಿದರು.
ಶಾಸಕರು ಮತ್ತು ಜಿಲ್ಲಾಧಿಕಾರಿಗಳ ಸಭೆ ಮಾಡ್ತಿವಿ, ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನಮ್ಮ ಹೋರಾಟಕ್ಕೆ ಹೆದರಿಕೆ ಆಗಿದೆ. ನಮ್ಮ ಶಾಸಕರಿಗೆ ಆಮೀಷ ತೋರಿಸಿ ಹೋರಾಟ ಹತ್ತಿಕ್ಕುವ ಯತ್ನಕ್ಕೆ ಕೈ ಹಾಕಿದೆ ಎಂದು ಹೇಳಿದ ಬಸವಜಯ ಮೃತ್ಯುಂಜಯ ಶ್ರೀ, ನಮ್ಮ ಋಣವನ್ನು, ಕೃತಜ್ಞತೆಯನ್ನು ಸರ್ಕಾರ ಮರೆತಿದೆ. ವಾಹನ ಹಿಡಿದ್ರು, ಕಾಲ್ನಡಿಗೆಯ ಮೂಲಕ ಬಂದು ಸುವರ್ಣಸೌಧಕ್ಕೆ ಮುತ್ತಿಗೆ ಹಾಕೋದು ಖಚಿತ. ನಮ್ಮ ಸಮುದಾಯದ ಶಾಸಕರು ಬೆಂಗಳೂನಿಂದ ಬಂದ ಶಾಸಕರನ್ನು ಮನೆಗೆ ಕರೆದು ಚಾ ಕುಡಿಸಲಿ, ಅವರ ಸಚಿವರನ್ನು ಸ್ವಾಗತಿಸುವ ಪ್ಲೆಕ್ಸ್ ಹಾಕಿದ್ದಾರೆ. ಸಮಸ್ಯೆ ಬಗೆಹರಿಸಲು ಯತ್ನಿಸಬೇಕಿದ್ದವರೇ ಸಂತೋಷ ಪಡುತ್ತಿದ್ದಾರೆ ಎಂದು ಕಿಡಿಕಾರಿದರು.
2ಎ ಮೀಸಲಾತಿ ಆದೇಶ ಹೊರಡಿಸಿದರೆ, ಸಿಎಂ, ಡಿಸಿಎಂ ಇಬ್ಬರನ್ನು ಸನ್ಮಾನ ಮಾಡ್ತಿನಿ ಎಂದ ಬಸವಜಯ ಮೃತ್ಯುಂಜಯ ಶ್ರೀ, ತೆರೆ ಮರೆಯಲ್ಲಿ ಇದ್ದುಕೊಂಡು ಕೆಡಿಸುವ ಕೆಲವರು ಯತ್ನ ಮಾಡುತ್ತಿದ್ದಾರೆ. ಹೆಬ್ಬಾಳ್ಕರ್, ವಿನಯ್ ಕುಲಕರ್ಣಿ ಬೆಂಬಲಿಗರು ಬರ್ತಾರೆ. ಶಾಸಕರು ಬಹಿರಂಗವಾಗಿ ಸಮಾವೇಶದಲ್ಲಿ ಬಂದು ಭಾಗವಹಿಸಬೇಕು. ಹೋರಾಟವನ್ನು ಹತ್ತಿಕ್ಕಲು ಯತ್ನ ಮಾಡಿದ್ರೆ ನಿಮ್ಮೆಲ್ಲರ ಮೇಲೆ ಪಂಚಮಸಾಲಿಗಳು ಬೇಜಾರು ಅಗಲಿದ್ದಾರೆ. ಇದು ಉಗ್ರ ಹೋರಾಟಕ್ಕೆ ಕಾರಣವಾಗುತ್ತದೆ. ಸೌಧದ ಮುಂಭಾಗದಲ್ಲಿ ಉಪವಾಸ ಸತ್ಯಾಗ್ರಹ ಮಾಡ್ತಿವಿ. ಹೋರಾಟವನ್ನು ಹತ್ತಿಕ್ಕಲು ದುಸ್ಸಾಹಸಕ್ಕೆ ಸರ್ಕಾರ ಕೈ ಹಾಕಬಾರದು ಎಂದು ಹೇಳಿದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


