Tuesday, November 3, 2026
spot_img
More
    spot_img
    HomeEntertainmentದರ್ಶನ್ ‘ಡೆವಿಲ್’ ಬಿಡುಗಡೆ: ಸರ್ಕಾರಿ ರಜೆಗಾಗಿ ಮುಖ್ಯಮಂತ್ರಿಗಳಿಗೆ ಪತ್ರ!

    ದರ್ಶನ್ ‘ಡೆವಿಲ್’ ಬಿಡುಗಡೆ: ಸರ್ಕಾರಿ ರಜೆಗಾಗಿ ಮುಖ್ಯಮಂತ್ರಿಗಳಿಗೆ ಪತ್ರ!

    ನಟ ದರ್ಶನ್ ಅಭಿನಯದ ‘ಡೆವಿಲ್’ ಚಿತ್ರ ಡಿಸೆಂಬರ್ 11ರಂದು ಬಿಡುಗಡೆಯಾಗುತ್ತಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದು, ನೆಚ್ಚಿನ ನಟನ ಸಿನಿಮಾವನ್ನು ಬ್ಲಾಕ್ ಬಾಸ್ಟರ್ ಹಿಟ್ ಮಾಡಿಸಲು ಅಭಿಮಾನಿಗಳು ತಯಾರಾಗಿದ್ದಾರೆ.

    ಡಿಸೆಂಬರ್ 11ರ ಗುರುವಾರ ಬೆಳಗ್ಗೆ 6.30ಕ್ಕೆ ‘ಡೆವಿಲ್’ ಚಿತ್ರದ ಮೊದಲ ಪ್ರದರ್ಶನ ಆರಂಭವಾಗಲಿದೆ. ಅಭಿಮಾನಿಗಳು ದರ್ಶನ್ ಸಿನಿಮಾ ವೀಕ್ಷಣೆ ಮಾಡಲು ಕಾದು ಕುಳಿತಿದ್ದು, ಚಿತ್ರಕ್ಕೆ ಮುಂಗಡ ಟಿಕೆಟ್ ಬುಕ್ಕಿಂಗ್ ಈಗಾಗಲೇ ಆರಂಭವಾಗಿದೆ.

    ಸರ್ಕಾರಿ ರಜೆಗಾಗಿ ಪತ್ರ: ಡಿಸೆಂಬರ್ 11ರ ಗುರುವಾರ ‘ಡೆವಿಲ್’ ಚಿತ್ರ ಬಿಡುಗಡೆಯಾಗುವ ಕಾರಣಕ್ಕೆ ಅಂದು ಸರ್ಕಾರಿ ರಜೆಯನ್ನು ಘೋಷಣೆ ಮಾಡಬೇಕು ಎಂದು ವಿದ್ಯಾರ್ಥಿಯೊಬ್ಬ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರವನ್ನು ಬರೆದಿದ್ದಾನೆ. ಈ ಪತ್ರ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಸಿರಿ ಎಂಬ ಬೆಂಗಳೂರಿನ ಜೆ.ಪಿ.ನಗರ 7ನೇ ಹಂತದ ಸರ್ಕಾರಿ ಪ್ರಾಥಮಿಕ ಶಾಲೆಯ 6ನೇ ತರಗತಿ ವಿದ್ಯಾರ್ಥಿ ಈ ಪತ್ರವನ್ನು ಬರೆದಿದ್ದಾನೆ. ದರ್ಶನ್ ಅಭಿಮಾನಿಗಳು ಈ ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ.  ಪತ್ರ ಹೀಗಿದೆ.

    ಗೆ
    ಮುಖ್ಯ ಮಂತ್ರಿಗಳಿಗೆ
    ಕರ್ನಾಟಕ ಸರ್ಕಾರ ವಿಧಾನಸೌಧ
    ಬೆಂಗಳೂರು

    ಇಂದ
    ಸಿರಿ
    6ನೇ ತರಗತಿ ಸರ್ಕಾರಿ ಪ್ರಾಥಮಿಕ ಶಾಲೆ
    J.P. Nagar 7th Phase
    ಬೆಂಗಳೂರು-560062

    ಮಾನ್ಯರೆ,

    ವಿಷಯ… DEVIL movieಗೆ ರಜಾ ಕೋರಿ

    ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ D Bass ದರ್ಶನ್ ಅಭಿಮಾನಿಯಾದ ನಾನು ತಮ್ಮಲ್ಲಿ ಕೇಳಿ ಕೊಳ್ಳುವುದು ಏನೆಂದರೆ 11.12 2025 ರಂದು DEVIL ಚಿತ್ರವು ತೆರೆ ಕಾಣುತ್ತಿದೆ. ಆದ್ದರಿಂದ 11.12.2025ರಂದು ಸರ್ಕಾರಿ ರಜೆ ಘೋಷಿಸಬೇಕೆಂದು ತಮ್ಮಲ್ಲಿ ಕೋರಿಕೊಳ್ಳುತ್ತಿದ್ದೇನೆ.

    ವಂದನೆಗಳೊಂದಿಗೆ

    ಇಂತಿ ವಿದ್ಯಾರ್ಥಿ
    ಸಿರಿ

    Date: 6.11.2025
    Place: Bangalore

    ದರ್ಶನ್ ನಟನೆಯ ಬಹುನಿರೀಕ್ಷಿತ ಚಿತ್ರ ‘ಡೆವಿಲ್’. ಅವರ ‘ಸಾರಥಿ’ ಸಿನಿಮಾ ಬಿಡುಗಡೆಯಾದಾಗಲೂ ದರ್ಶನ್ ಜೈಲಿನಲ್ಲಿದ್ದರು, ಚಿತ್ರ ಹಿಟ್ ಆಗಿತ್ತು. ಈಗ ‘ಡೆವಿಲ್’ ಸಿನಿಮಾ ಬಿಡುಗಡೆಯಾಗುವಾಗಲೂ ಅವರು ಜೈಲಿನಲ್ಲಿದ್ದಾರೆ.

    ‘ಡೆವಿಲ್’ ಸಿನಿಮಾದ ಟ್ರೈಲರ್ ಡಿಸೆಂಬರ್ 5ರಂದು ಬಿಡುಗಡೆ ಆಗಿದೆ. ಸೂರ್ಯಂಗೆ ಹೆಚ್ಚು ಹೊತ್ತು ಗ್ರಹಣ ಹಿಡಿಯಲ್ಲ ಚಿನ್ನ ಐ ಯ್ಯಾಮ್ ಕಮಿಂಗ್ ಎಂಬ ದರ್ಶನ್ ಡೈಲಾಗ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

    ‘ಡೆವಿಲ್’ ಚಿತ್ರದ ಟ್ರೈಲರ್ ಕುತೂಹಲ ಮೂಡಿಸುವಂತಿದ್ದು, ದರ್ಶನ್ ಹಲವು ಅವತಾರಗಳಲ್ಲಿ ಕಾಣಿಸಿಕೊಂಡಿದ್ದಾರೆ. ನೆಚ್ಚಿನ ನಟ ಜೈಲಿನಲ್ಲಿದ್ದು, ಚಿತ್ರವನ್ನು ಸೂಪರ್ ಹಿಟ್ ಮಾಡಬೇಕು ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.

    ದರ್ಶನ್ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರುವಾಗ ಈ ಚಿತ್ರದ ಶೂಟಿಂಗ್ ನಡೆಯುತ್ತಿತ್ತು. ಹೈಕೋರ್ಟ್‌ನಿಂದ ಜಾಮೀನು ಪಡೆದು ಹೊರಬಂದ ಅವರು ಚಿತ್ರೀಕರಣ ಮುಗಿಸಿದ್ದರು. ಆದರೆ ಸುಪ್ರೀಂಕೋರ್ಟ್ ಜಾಮೀನು ರದ್ದು ಮಾಡಿದ ಕಾರಣ ಪುನಃ ಅವರು ಜೈಲು ಸೇರಿದ್ದು ಸದ್ಯ ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.

    ಡೆವಿಲ್ ಸಿನಿಮಾದ ನಿರ್ದೇಶಕರು ಮಿಲನಾ ಪ್ರಕಾಶ್, ರಚನಾ ರೈ, ಶರ್ಮಿಳಾ ಮಾಂಡ್ರೆ, ಅಚ್ಯುತ್ ಕುಮಾರ್, ಗಿಲ್ಲಿ ಸೇರಿದಂತೆ ಹಲವಾರು ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ಟ್ರೇಲರ್‌ ಸರೆಗಮ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಗೊಂಡು ವೈರಲ್ ಆಗಿದೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search