ಲೈಫ್ ಇನ್ಶೂರೆನ್ಸ್ ಕಾರ್ಪೊರೇಷನ್ (LIC)ಎಲ್ಐಸಿ, ಭಾರತದ ಅತಿದೊಡ್ಡ ಮತ್ತು ಪ್ರತಿಷ್ಠಿತ ಜೀವ ವಿಮಾ ಕಂಪನಿಗಳಲ್ಲಿ ಒಂದಾಗಿದ್ದು, ಆರ್ಥಿಕ ಸ್ವಾತಂತ್ರ್ಯವನ್ನು ಬಯಸುವ ಮಹಿಳೆಯರನ್ನು ಸಬಲೀಕರಣಗೊಳಿಸಲು ಮಹಿಳಾ ಕೆರಿಯರ್ ಏಜೆಂಟ್ ಯೋಜನೆಯನ್ನು ಪ್ರಾರಂಭಿಸಿದೆ.9 ಡಿಸೆಂಬರ್ 2024 ರಂದು, ಪ್ರಧಾನಮಂತ್ರಿ ನರೇಂದ್ರ ಮೋದಿಯವರು LIC ಬಿಮಾ ಸಖೀ ಯೋಜನೆ, ಜೀವ ವಿಮಾ ನಿಗಮ ಯೋಜನೆಗೆ ಚಾಲನೆ ನೀಡಿದರು. ಈ ಯೋಜನೆಯ ಭಾಗವಾಗಿ ಮೊದಲ ವರ್ಷದಲ್ಲಿ ಒಂದು ಲಕ್ಷ ಮಹಿಳೆಯರಿಗೆ ಉದ್ಯೋಗ ಸಿಗಲಿದೆ. ಈ ಕೆಲಸ ಪಡೆಯಲು10ನೇ ತರಗತಿ ಪಾಸ್ ಆಗಿರಬೇಕು. ಎಲ್ಐಸಿಯಲ್ಲಿ ಭೀಮಾ ಸಖಿಯಾಗಿ ಮೂರು ವರ್ಷಗಳ ತರಬೇತಿ ನೀಡಲಾಗುತ್ತದೆ. ತರಬೇತಿ ಅವಧಿಯಲ್ಲಿ ಪ್ರತಿ ತಿಂಗಳು ಸ್ಟೈಫಂಡ್ (Stayfund) ಕೂಡ ನೀಡಲಾಗುತ್ತದೆ.ಪ್ರತಿ ತಿಂಗಳು ಮಹಿಳೆಯರು 7,000 ರೂಪಾಯಿ ಆದಾಯಗಳಿಸಲು ಸಾಧ್ಯವಿದೆ.ಮಹಿಳೆಯರನ್ನು ಸ್ವಾವಲಂಬಿ ಮಾಡುವ ಸರ್ಕಾರದ ಯೋಜನೆ ಭಾಗವಾಗಿ ಈ ಯೋಜನೆಗೆ ಚಾಲನೆ ನೀಡಲಾಗಿದೆ.ಮುಂದಿನ ಮೂರು ವರ್ಷಗಳಲ್ಲಿ ಎರಡು ಲಕ್ಷ ಬೀಮಾ ಸಖಿಗಳನ್ನು ನೇಮಿಸುವ ಗುರಿ ಹೊಂದಿದೆ. 10ನೇ ತರಗತಿ ಪಾಸಾದ 14 ರಿಂದ 70 ವರ್ಷದೊಳಗಿನ ಮಹಿಳೆಯರು ಅರ್ಜಿ ಸಲ್ಲಿಸಬಹುದು.

LIC ಬಿಮಾ ಸಖಿ ಯೋಜನೆ ಎಂದರೇನು?
ಬಿಮಾ ಸಖಿ ಕಾರ್ಯಕ್ರಮವು ಮಹಿಳೆಯರಿಗಾಗಿ LIC ಯ ಒಂದು ವಿಶಿಷ್ಟ ಯೋಜನೆಆಗಿದೆ, ಇದನ್ನು ಆರ್ಥಿಕವಾಗಿ ಸಬಲೀಕರಣಗೊಳಿಸಲು ಪ್ರಾರಂಭಿಸಲಾಗಿದೆ. ಈ ಯೋಜನೆಯಡಿ, ಮಹಿಳೆಯರಿಗೆ ವಿಮಾ ಸಖಿ (ಮಹಿಳಾ ವೃತ್ತಿ ಏಜೆಂಟ್) ಆಗಿ ಕೆಲಸ ಮಾಡಲು ಅವಕಾಶವಿದೆ.
LIC ಬಿಮಾ ಸಖಿ ಯೋಜನೆ ಅರ್ಹತೆ
ಮಹಿಳೆಯರು 18 ರಿಂದ 70 ವರ್ಷದೊಳಗಿನವರಾಗಿರಬೇಕು.
ಮಹಿಳೆಯ ಕನಿಷ್ಠ ವಿದ್ಯಾರ್ಹತೆ 10ನೇ ತರಗತಿ ತೇರ್ಗಡೆಯಾಗಿರಬೇಕು.
ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಮಹಿಳೆಯರಿಗೆ ಆದ್ಯತೆ ನೀಡಲಾಗುವುದು
ಅರ್ಜಿ ಸಲ್ಲಿಸುವುದು ಹೇಗೆ?:
ಹತ್ತಿರದ ಎಲ್ಐಸಿ ಕಚೇರಿಗೆ ಹೋಗಿ ಅರ್ಜಿ ಸಲ್ಲಿಸಬಹುದು. ವಯಸ್ಸಿನ ದಾಖಲೆ, ವಿಳಾಸದ ದಾಖಲೆ, ಶೈಕ್ಷಣಿಕ ದಾಖಲೆಗಳನ್ನು ಒದಗಿಸಬೇಕು.
ಬಿಮಾ ಸಖಿ ಆಗಲು ಬೇಕಾದ ದಾಖಲೆಗಳು
ಇತ್ತೀಚಿನ ಪಾಸ್ಪೋರ್ಟ್ ಅಳತೆಯ ಛಾಯಾಚಿತ್ರಗಳು, ವಯಸ್ಸಿನ ಪ್ರಮಾಣಪತ್ರದ ಸ್ವಯಂ-ದೃಢೀಕರಿಸಿದ ಪೋಟೋಕಾಪಿ, ವಿಳಾಸ ಪ್ರಮಾಣಪತ್ರದ ಸ್ವಯಂ-ದೃಢೀಕರಿಸಿದ ಪೋಟೋಕಾಪಿ, ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್, ಶೈಕ್ಷಣಿಕ ಅರ್ಹತೆಯ ಪ್ರಮಾಣಪತ್ರದ ಸ್ವಯಂ-ದೃಢೀಕರಿಸಿದ ಫೋಟೊಕಾಪಿ ಮತ್ತು ಬ್ಯಾಂಕ್ ಖಾತೆ ವಿವರಗಳನ್ನು ಸಲ್ಲಿಸಬೇಕು
ಬಿಮಾ ಸಖಿ ಅರ್ಜಿ ಶುಲ್ಕ ಎಷ್ಟು?
ಈ ಯೋಜನೆಯಡಿ ಅರ್ಜಿ ಶುಲ್ಕ ರೂ 650, ಇದರಲ್ಲಿ ರೂ 150 ಎಲ್ಐಸಿ ಶುಲ್ಕ ಮತ್ತು ರೂ 500 (IRDAI) ಪರೀಕ್ಷಾ ಶುಲ್ಕವಾಗಿ ಒಳಗೊಂಡಿರುತ್ತದೆ.
LIC ಬಿಮಾ ಸಖಿ ಯೋಜನೆಗೆ ಎಷ್ಟು ಸ್ಟೈಫಂಡ್ ಮೊತ್ತ
1.ಮೊದಲ ವರ್ಷದಲ್ಲಿ, ನೀವು 24 ಜನರಿಗೆ ವಿಮೆ ಮಾಡಬೇಕು ಮತ್ತು ಕನಿಷ್ಠ 48,000 ರೂ (ಬೋನಸ್ ಕಮಿಷನ್ ಹೊರತುಪಡಿಸಿ) ಮೊದಲ ವರ್ಷದ ಕಮಿಷನ್ ಗಳಿಸಬೇಕು. ಮೊದಲ ವರ್ಷದಲ್ಲಿ, ನೀವು ಪ್ರತಿ ತಿಂಗಳು ರೂ 7,000 ಸ್ಟೈಫಂಡ್ ಪಡೆಯುತ್ತೀರಿ.
2.ಎರಡನೇ ವರ್ಷದಲ್ಲಿ ಸ್ಟೈಫಂಡ್ 6,000 ರೂ. ಆದಾಗ್ಯೂ, ಇದಕ್ಕಾಗಿ, ಮೊದಲ ವರ್ಷದಲ್ಲಿ ತೆಗೆದುಕೊಂಡ ಪಾಲಿಸಿಗಳಲ್ಲಿ ಕನಿಷ್ಠ 65 ಪ್ರತಿಶತದಷ್ಟು ಎರಡನೇ ವರ್ಷದ ಅಂತ್ಯದವರೆಗೆ ಸಕ್ರಿಯವಾಗಿರುವುದು ಅವಶ್ಯಕ.
3.ಮೂರನೇ ವರ್ಷದಲ್ಲಿ 5,000 ರೂ. ಇದಕ್ಕಾಗಿ, ಎರಡನೇ ವರ್ಷದಲ್ಲಿ ತೆಗೆದುಕೊಂಡ ಪಾಲಿಸಿಗಳಲ್ಲಿ ಕನಿಷ್ಠ 65 ಪ್ರತಿಶತದಷ್ಟು ಮೂರನೇ ವರ್ಷದ ಅಂತ್ಯದವರೆಗೆ ಸಕ್ರಿಯವಾಗಿರುವುದು ಅವಶ್ಯಕ.
ಈ ಕೆಲಸದಲ್ಲಿ ಏನು ಮಾಡ್ಬೇಕು?
ಎಲ್ಐಸಿ ಪಾಲಿಸಿಗಳನ್ನು ಮಾರಾಟ ಮಾಡಬೇಕಾಗುತ್ತದೆ. ಯಾವ ಪಾಲಿಸಿಯನ್ನು ಹೇಗೆ, ಯಾರು ತೆಗೆದುಕೊಳ್ಳಲು ಸೂಕ್ತ ಎಂದು ತಿಳಿಯುವುದು, ಪಾಲಿಸಿಗಳ ಬಗ್ಗೆ ವಿವರಿಸಲು ಬೇಕಾದ ಮಾರ್ಗದರ್ಶಿ ಎಲ್ಲವನ್ನೂ ಎಲ್ಐಸಿ ಸಂಸ್ಥೆ ತರಬೇತಿ ನೀಡುತ್ತದೆ. ಇದರಿಂದ ಜನರು ಪಾಲಿಸಿಗಳನ್ನು ತೆಗೆದುಕೊಳ್ಳಲು ಪ್ರೇರೇಪಿಸುವುದು ಸುಲಭವಾಗುತ್ತದೆ.
ಎಲ್ಐಸಿ ಬಿಮಾ ಸಖಿ ಯೋಜನೆ ಉದ್ದೇಶ
ಎಲ್ಐಸಿ ಬಿಮಾ ಸಖಿ ಮಹಿಳೆಯರಿಗೆ ವಿಮಾ ಏಜೆಂಟ್ಗಳಾಗಲು ಹೊಸ ಉದ್ಯೋಗಾವಕಾಶಗಳನ್ನು ಒದಗಿಸಲು , ಗ್ರಾಮೀಣ ಪ್ರದೇಶಗಳಲ್ಲಿ ವಿಮೆಯ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಜೀವನೋಪಾಯಕ್ಕಾಗಿ ಒಂದು ವರ್ಷದೊಳಗೆ 1,00,000 ಮಹಿಳೆಯರನ್ನು ಸೇರ್ಪಡೆಗೊಳಿಸುವ ಮೂಲಕ ಮಹಿಳೆಯರನ್ನು ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


