ಮಂಗಳೂರು: ಡಿಜಿಟಲ್ ಯುಗ ಆರಂಭವಾದಾಗಿನಿಂದ ಹಲವಾರು ವಿಭಿನ್ನ ವಂಚನೆ ಪ್ರಕರಣಗಳನ್ನು ನೋಡುತ್ತಾ ಬಂದಿದ್ದೇವೆ. ಇನ್ನು ಈ ಎಲ್ಲಾ ಪ್ರಕರಣಗಳಲ್ಲಿಯೂ ಸಂತ್ರಸ್ತರು ಕೇವಲ ಒಮ್ಮೆ ಮಾತ್ರ ಯಾಮಾರಿ ಹಣ ಕಳೆದುಕೊಂಡಿದ್ದರು.
ಆದರೆ ಈ ಪ್ರಕರಣದಲ್ಲಿ ಬರೋಬ್ಬರಿ 2 ವರ್ಷಗಳ ಕಾಲ ಸುದೀರ್ಘ ವಂಚನೆ ನಡೆದಿರುವುದು ಅಪರೂಪ ಹಾಗೂ ಆಶ್ಚರ್ಯಕರ. ಹೌದು, ಮಂಗಳೂರಿನ ಬಂಗ್ರಕುಳೂರು ಎಂಬಲ್ಲಿನ ರಿಯಲಯನ್ಸ್ ಪೆಟ್ರೋಲ್ ಬಂಕ್‌ನಲ್ಲಿ ಈ ಘಟನೆ ನಡೆದಿದ್ದು, ಮಾಲೀಕರು ನೀಡಿದ ದೂರಿನ ಮೇಲೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಕ್‌ನಲ್ಲಿ ಹಣಕಾಸು ವ್ಯವಹಾರದ ನಿರ್ವಹಣೆ ಮಾಡುತ್ತಿದ್ದ ಸಿಬ್ಬಂದಿ ಮೋಹನ್‌ದಾಸ್ ಎಂಬಾತ ಗ್ರಾಹಕರು ಪಾವತಿಸಲೆಂದು ಬಂಕ್‌ನಲ್ಲಿ ಇಟ್ಟಿದ್ದ ಆನ್‌ಲೈನ್ ಪೇಮೆಂಟ್ ಕ್ಯೂಆರ್ ಕೋಡ್ ಬದಲು ತನ್ನ ಕ್ಯೂಆರ್ ಕೋಡನ್ನು ಇಟ್ಟಿದ್ದು, ಗ್ರಾಹಕರು ಕಳುಹಿಸಿದ ಹಣವೆಲ್ಲಾ ಈತನ ಖಾತೆಗೆ ವರ್ಗಾವಣೆಯಾಗಿದೆ.
15 ವರ್ಷಗಳಿಂದ ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಮೋಹನ್‌ದಾಸ್ 10-03-2020 ರಿಂದ 31-07-2022ರವರೆಗೆ ಮಾಲೀಕರ ಕ್ಯೂಆರ್ ಕೋಡ್ ಬದಲು ತನ್ನ ಕ್ಯೂಆರ್ ಕೋಡ್ ಇಟ್ಟಿದ್ದು, ಬರೋಬ್ಬರಿ 58 ಲಕ್ಷ ರೂಪಾಯಿ ವಂಚಿಸಿದ್ದಾನೆ. ಇನ್ನು ಆರೋಪಿಯ ಕುತಂತ್ರ ಅರಿತ ರಿಲಯನ್ಸ್ ಕಂಪನಿ ಮ್ಯಾನೇಜರ್ ಸಂತೋಷ್ ಮ್ಯಾಥ್ಯೂ ದೂರು ನೀಡಿದ್ದು, ಆರೋಪಿಯನ್ನು ಬಂಧಿಸಿರುವ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


