ಅಂಬಾಟಿ ರಾಯುಡು ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳ ನಡುವಿನ ಕಿತ್ತಾಟ ಚಾಂಪಿಯನ್ಸ್ ಟ್ರೋಫಿಯಲ್ಲೂ ಮುಂದುವರಿದಿದೆ.
ಫ್ರಾಂಚೈಸಿ ಕ್ರಿಕೆಟ್ ತಂಡವೊಂದರ ಅಭಿಮಾನಿಗಳನ್ನು ಕೆಣಕಿ ಬಳಿಕ ಟ್ರೋಲ್ ಮೆಟಿರಿಯಲ್ ಆದ ಸ್ಟಾರ್ ಕ್ರಿಕೆಟಿಗ ಯಾರಾದರೂ ಇದ್ದರೆ ಅದು ಅಂಬಾಟಿ ರಾಯುಡು ಮಾತ್ರ.
ಹೌದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಗುರಿಯನ್ನಾಗಿಸಿಕೊಂಡು ಟೀಕಿಸುವ ಗೀಳಿಗೆ ಬಿದ್ದ ರಾಯುಡು ಹಲವಾರು ಬಾರಿ ಮುಖಭಂಗ ಅನುಭವಿಸಿದ್ದಾರೆ. ಈ ಹಿಂದೊಮ್ಮೆ ಇದೇ ರೀತಿ ಬೇಡದ ಕಾಮೆಂಟ್ ಮಾಡಿ ಲೈವ್‌ನಲ್ಲಿಯೇ ದಿಗ್ಗಜ ಕ್ರಿಕೆಟಿಗ ಕೆವಿನ್ ಪೀಟರ್ಸನ್‌ರಿಂದ ಜೋಕರ್ ಎಂದು ಕರೆಸಿಕೊಂಡು ದೊಡ್ಡ ಮಟ್ಟದಲ್ಲಿ ತನ್ನ ಮಾನವನ್ನು ತಾನೇ ಹರಾಜು ಹಾಕಿಕೊಂಡಿದ್ದ ರಾಯುಡು ಈಗ ಮತ್ತೊಮ್ಮೆ ಆರ್‌ಸಿಬಿ ಅಭಿಮಾನಿಗಳನ್ನು ಕೆಣಕಿದ್ದಾರೆ.
ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದ ಕಾಮೆಂಟರಿ ಮಾಡುತ್ತಿದ್ದ ವೇಳೆ ಸಂಜಯ್ ಬಂಗಾರ್ ಕಳೆದ ನಾಲ್ಕು ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಆಫ್ ಪ್ರವೇಶಿಸಿತ್ತು ಎಂದು ಹೇಳಿದರು. ಇದಕ್ಕೆ ಉತ್ತರಿಸಿದ ರಾಯುಡು ಹಾಗಾದರೆ ಈ ಬಾರಿ ಆರ್‌ಸಿಬಿಗೆ ಕ್ವಾಲಿಫೈಯರ್ 2 ಖಚಿತ ಎಂದು ಪರೋಕ್ಷವಾಗಿ ಈ ಬಾರಿಯೂ ಆರ್‌ಸಿಬಿ ಟ್ರೋಫಿ ಗೆಲ್ಲುವುದಿಲ್ಲ ಎಂದಿದ್ದಾರೆ.
ಇದಕ್ಕೆ ಟಾಂಗ್ ನೀಡಿದ ಸಂಜಯ್ ಬಂಗರ್ ಆರ್‌ಸಿಬಿ ಅಭಿಮಾನಿಗಳು ನೋಡುತ್ತಿರುತ್ತಾರೆ ಜೋಪಾನ ಎಂದಿದ್ದಾರೆ. ಆದರೇನು? ನೀವು ಆರ್‌ಸಿಬಿ ಫ್ಯಾನ್ಸ್ ಹೆಸರು ಹೇಳಿ ನನ್ನನ್ನು ಹೆದರಿಸುತ್ತಿದ್ದೀರಾ? ಎಂದು ಆರ್‌ಸಿಬಿ ಫ್ಯಾನ್ಸ್ ಕಾಲೆಳೆದಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


