Tuesday, August 11, 2026
spot_img
More
    spot_img
    HomeLatest newsಖ್ಯಾತ ಯೂಟ್ಯೂಬರ್ ಜೊತೆ ಫೈನಲ್ ವೀಕ್ಷಿಸಿದ ಚಹಲ್: ಕಿಡಿಕಾರಿದ ಧನಶ್ರೀ ವರ್ಮಾ

    ಖ್ಯಾತ ಯೂಟ್ಯೂಬರ್ ಜೊತೆ ಫೈನಲ್ ವೀಕ್ಷಿಸಿದ ಚಹಲ್: ಕಿಡಿಕಾರಿದ ಧನಶ್ರೀ ವರ್ಮಾ

    ಬೆಂಗಳೂರು: ನಿನ್ನೆ ( ಮಾರ್ಚ್ 9 ) ದುಬೈನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಭಾರತ ನ್ಯೂಜಿಲೆಂಡ್ ವಿರುದ್ಧ 4 ವಿಕೆಟ್ ಗೆಲುವು ಸಾಧಿಸುವುದರ ಮೂಲಕ ಮೂರನೇ ಬಾರಿಗೆ ಟ್ರೋಫಿಯನ್ನು ಎತ್ತಿ ಹಿಡಿಯಿತು.

    Advertisement

    ಇನ್ನು ಈ ಹೈ ವೋಲ್ಟೇಜ್ ಪಂದ್ಯ ವೀಕ್ಷಿಸಲು ಮಾಜಿ ಕ್ರಿಕೆಟಿಗರು ಹಾಗೂ ಸಕ್ರಿಯ ಕ್ರಿಕೆಟಿಗರು ದುಬೈಗೆ ಆಗಮಿಸಿದ್ದರು. ಈ ಪೈಕಿ ಹೆಚ್ಚು ಸದ್ದು ಮಾಡಿದ್ದು ಯುಜ್ವೇಂದ್ರ ಚಹಲ್. ಹೌದು, ಅಂದದ ಹುಡುಗಿಯೊಬ್ಬಳ ಜೊತೆ ದುಬೈ ಕ್ರೀಡಾಂಗಣಕ್ಕೆ ಚಹಲ್ ಆಗಮಿಸಿದ್ದರು.

    ಪಂದ್ಯ ನಡೆಯುವ ವೇಳೆಯೇ ಯಾರೀ ಹುಡುಗಿ ಎಂದು ಕ್ರಿಕೆಟ್ ಪ್ರೇಮಿಗಳು ಹೊಸ ಪ್ರೇಯಸಿ ಇರಬಹುದಾ ಎಂದು ಅನುಮಾನ ಹೊರಹಾಕಿದರು. ಇನ್ನು ಚಹಲ್ ಹಾಗೂ ಧನಶ್ರೀ ವರ್ಮಾ ಡಿವೋರ್ಸ್ ಸುದ್ದಿ ಚಾಲ್ತಿಯಲ್ಲಿರುವಾಗಲೇ ಚಹಲ್ ಅವರ ಈ ನಡೆ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಚಹಲ್ ಯೌಟ್ಯೂಬರ್ ಆರ್‌ಜೆ ಮಾಹ್ವಷ್ ಜೊತೆ ಪಂದ್ಯ ವೀಕ್ಷಿಸಿದ್ದರು.

    ಇದೇ ವೇಳೆ ಧನಶ್ರೀ ವರ್ಮಾ ಅವರ ಹೆಸರೂ ಸಹ ಎಕ್ಸ್ ವೇದಿಕೆಯಲ್ಲಿ ದೊಡ್ಡ ಮಟ್ಟದಲ್ಲಿ ಕೇಳಿಬಂತು. ಐಶ್ವರ್ಯ ಬಂದ್ಲು ಎಂಬ ಮೀಮ್ ಮಾಡಿ ಅದರಲ್ಲಿ ಧನಶ್ರೀ ಅವರನ್ನು ಟ್ರೋಲ್ ಮಾಡಲಾಗಿತ್ತು.

    ಇಷ್ಟರ ಮಟ್ಟಿಗೆ ಟ್ರೋಲ್ ಆದ ಬೆನ್ನಲ್ಲೇ ಧನಶ್ರೀ ವರ್ಮಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸ್ಟೋರಿ ಒಂದನ್ನು ಹಂಚಿಕೊಂಡಿದ್ದು ‘ಮಹಿಳೆಯರನ್ನು ದೂರುವುದು ಯಾವಾಗಲೂ ರೂಢಿಯಲ್ಲಿರುವ ಅಂಶವಾಗಿಬಿಟ್ಟಿದೆ’ ಎಂಬ ಹೇಳಿಕೆಯನ್ನು ಶೇರ್ ಮಾಡಿ ತನ್ನ ವಿರುದ್ಧ ಮಾತನಾಡಿ ಟ್ರೋಲ್ ಮಾಡಿದವರ ವಿರುದ್ಧ ಕಿಡಿಕಾರಿದ್ದಾರೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading