ನಿನ್ನೆ ( ಮಾರ್ಚ್ 9 ) ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಿನ ಫೈನಲ್ ಪಂದ್ಯದ ಮೂಲಕ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ಕ್ಕೆ ತೆರೆಬಿದ್ದಿದೆ.
ಪಂದ್ಯದಲ್ಲಿ 4 ವಿಕೆಟ್ಗಳ ಜಯ ಸಾಧಿಸಿದ ಭಾರತ ಮೂರನೇ ಬಾರಿಗೆ ಚಾಂಪಿಯನ್ಸ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ. ಈ ಗೆಲುವಿನೊಂದಿಗೆ ಭಾರತ ಅತಿಹೆಚ್ಚು ಬಾರಿ ಚಾಂಪಿಯನ್ಸ್ ಟ್ರೋಫಿ ಗೆದ್ದ ತಂಡ ಎಂಬ ದಾಖಲೆನ್ನೂ ಸಹ ಬರೆದಿದೆ.
ಇನ್ನು ಟೂರ್ನಿ ಮುಗಿದ ಬಳಿಕ ಪ್ರತಿ ಟೂರ್ನಿಯಂತೆ ಈ ಟೂರ್ನಿಗೂ ಸಹ ಐಸಿಸಿ ಟೀಮ್ ಆಫ್ ದ ಟೂರ್ನಮೆಂಟ್ ಎಂದರೆ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರಿದ ಆಟಗಾರರ ಆಡುವ ಬಳಗವನ್ನು ಪ್ರಕಟಿಸಿದೆ.
ಈ ತಂಡದಲ್ಲಿ ಭಾರತದ ವಿರಾಟ್ ಕೊಹ್ಲಿ ಮೂರನೇ ಕ್ರಮಾಂಕ, ಶ್ರೇಯಸ್ ಐಯ್ಯರ್ ನಾಲ್ಕು ಹಾಗೂ ಕೆಎಲ್ ರಾಹುಲ್ ಐದನೇ ಕ್ರಮಾಂಕದ ಬ್ಯಾಟ್ಸ್ಮನ್ ಹಾಗೂ ವಿಕೆಟ್ ಕೀಪರ್ ಆಗಿ ಆಯ್ಕೆಯಾಗಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಮೊಹಮ್ಮದ್ ಶಮಿ ಹಾಗೂ ವರುಣ್ ಚಕ್ರವರ್ತಿ ಸ್ಥಾನ ಪಡೆದುಕೊಂಡಿದ್ದಾರೆ. ಜೊತೆಗೆ ಅಕ್ಷರ್ ಪಟೇಲ್ ಹೆಚ್ಚುವರಿ ಆಟಗಾರನಾಗಿ ಆಯ್ಕೆಯಾಗಿದ್ದಾರೆ.
ಐಸಿಸಿ ಪ್ರಕಟಿಸಿರುವ ಅತ್ಯುತ್ತಮ ಆಟಗಾರರ ತಂಡ ಹೀಗಿದೆ: ರಾಚಿನ್, ಇಬ್ರಾಹಿಂ, ಕೊಹ್ಲಿ, ಹಿರೇ, ಕಲ್ ರಾಹುಲ್ (ವಿಕೆಟ್ ಕೀಪರ್), ಫಿಲಿಪ್ಸ್, ಒಮರ್ ಜೈಸ್ವಾಲ್, ಸ್ಯಾಂಟ್ನರ್ (ನಾಯಕ), ಶಮಿ, ಹೆನ್ರಿ ಮತ್ತು ಚಕ್ರವರ್ತಿ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


