ಪ್ರಸ್ತುತ ವಿಶ್ವ ಕ್ರಿಕೆಟ್ನಲ್ಲಿ ಸದ್ದು ಮಾಡುತ್ತಿರುವ ಟೂರ್ನಿಯೆಂದರೆ ಅದು ಇಂಡಿಯನ್ ಪ್ರೀಮಿಯರ್ ಲೀಗ್. ವಿಶ್ವದ ಅತಿ ಶ್ರೀಮಂತ ಕ್ರಿಕೆಟ್ ಲೀಗ್ ಎಂದೇ ಖ್ಯಾತಿಯನ್ನು ಪಡೆದಿರುವ ಐಪಿಎಲ್ಗೆ ವಿಶ್ವದಾದ್ಯಂತ ದೊಡ್ಡ ವೀಕ್ಷಕರ ಬಳಗವಿದೆ.
ವಿದೇಶಿ ಆಟಗಾರರೂ ಸಹ ಈ ಟೂರ್ನಿಯಲ್ಲಿ ಭಾಗವಹಿಸುವ ಕಾರಣ ಐಪಿಎಲ್ ಹೊರ ದೇಶಗಳಲ್ಲಿಯೂ ಖ್ಯಾತಿಯನ್ನು ಪಡೆದಿದೆ. ಎಲ್ಲಕ್ಕಿಂತ ಹೆಚ್ಚಾಗಿ ಶ್ರೀಮಂತ ಟೂರ್ನಿ, ಒಳ್ಳೆಯ ಗುಣಮಟ್ಟ ಕ್ರಿಕೆಟ್ ಪ್ರೇಮಿಗಳನ್ನು ಐಪಿಎಲ್ ಕಡ್ಡಾಯ ವೀಕ್ಷಕರನ್ನಾಗಿ ಮಾಡಿಬಿಟ್ಟಿದೆ.
ಹೀಗೆ ವಿಶ್ವದ ಬೃಹತ್ ಫ್ರಾಂಚೈಸ್ ಕ್ರಿಕೆಟ್ ಲೀಗ್ ಆಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಪಾಕಿಸ್ತಾನದ ಆಟಗಾರರಿಗೆ ಆಡುವ ಅವಕಾಶವಿಲ್ಲ. ಆದರೂ ಸಹ ಅಲ್ಲಿನ ಆಟಗಾರರು ಹಲವಾರು ಬಾರಿ ಐಪಿಎಲ್ ಕುರಿತು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ.
ಸದ್ಯ ಪಾಕಿಸ್ತಾನದ ವೇಗಿ ಹಸನ್ ಅಲಿ ಸಹ ಇಂತಹದ್ದೇ ಹೇಳಿಕೆಯನ್ನು ನೀಡಿ ವಿವಾದ ಸೃಷ್ಟಿಸಿದ್ದಾರೆ. ನಾವು ಚೆನ್ನಾಗಿ ಆಡಿದರೆ ವೀಕ್ಷಕರು ಖಂಡಿತವಾಗಿ ಇಂಡಿಯನ್ ಪ್ರೀಮಿಯರ್ ಲೀಗ್ ಬಿಟ್ಟು ಪಾಕಿಸ್ತಾನ್ ಸೂಪರ್ ಲೀಗ್ ವೀಕ್ಷಿಸಲು ಆರಂಭಿಸುತ್ತಾರೆ ಎಂದಿದ್ದಾರೆ.
ಈ ಹೇಳಿಕೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ನೆಟ್ಟಿಗರು ಹಗಲುಗನಸು ಎಂದು ಹಸನ್ ಅಲಿ ಕಾಲೆಳೆದಿದ್ದಾರೆ. ಚಾಂಪಿಯನ್ಸ್ ಟ್ರೋಫಿಗೆ ಸರಿಯಾದ ವ್ಯವಸ್ಥೆ ಮಾಡಲಾಗದ ನೀವು ಇಂಡಿಯನ್ ಪ್ರೀಮಿಯರ್ ಲೀಗ್ ರೇಂಜಿನ ಟೂರ್ನಿ ನಡೆಸುವುದು ಕನಸಿನ ಮಾತು, ಆ ಟೂರ್ನಿಯ ಹಾಗೆ ಒಳ್ಳೆಯ ಪಂದ್ಯಗಳನ್ನು ನಡೆಸುವುದು ಊಹೆಗಷ್ಟೆ ಸರಿ ಎಂದು ಟೀಕಿಸಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


