ಮಾರ್ಚ್ನಿಂದ ಬಿಸಿಲಿನ ತಾಪಮಾನ ವೇಗವಾಗಿ ಏರುತ್ತಿದ್ದು, ಅದರ ಪರಿಣಾಮವಾಗಿ ಬಹುತೇಕ ಜನರು ದೇಹವನ್ನು ತಂಪಾಗಿಸಿಕೊಳ್ಳಲು ಮತ್ತು ನಿರ್ಜಲೀಕರಣದಿಂದ ತಪ್ಪಿಸಿಕೊಳ್ಳಲು ತಂಪು ಪಾನೀಯಗಳು ಮತ್ತು ಐಸ್ ಕ್ರೀಮ್ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೇವಿಸುತ್ತಿದ್ದಾರೆ. ಈ ನಡುವೆ ಕುಲ್ಫಿ ಐಸ್ ಕ್ರೀಮ್ಗಳು ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಎಲ್ಲರಿಗೂ ತುಂಬಾ ಇಷ್ಟವಾಗುತ್ತವೆ.ಇವತ್ತಿನ ದಿನಗಳಲ್ಲಿ ಮಲೈ ಕುಲ್ಫಿಯ ವಿವಿಧ ರೂಪಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ವಿವಿಧ ಫ್ಲೇವರ್ಗಳಲ್ಲಿಯೂ ಸಿಗುತ್ತವೆ, ಅವುಗಳಲ್ಲಿ ಮಲೈ ಕುಲ್ಫಿ ಒಂದು ಜನಪ್ರಿಯ ಮತ್ತು ವಿಶೇಷ ಆಯ್ಕೆಯಾಗಿದೆ.”ಮಲೈ ಕುಲ್ಫಿ” (Malai Kulfi) ಒಂದು ಪರಂಪರೆಯ ಭಾರತೀಯ ತಿನಿಸು, ಐಸ್ ಕ್ರೀಮ್ ಪ್ರಿಯರು ಇಂತಹ ರುಚಿಕರ ಕುಲ್ಫಿಗಳನ್ನು ಮನೆಯಲ್ಲಿ ತಯಾರಿಸಲು ವೈವಿಧ್ಯಮಯ ಪ್ರಯತ್ನ ಮಾಡುತ್ತಾರೆ. ಸರಳ ಮತ್ತು ಸುಲಭ ವಿಧಾನವನ್ನು ಅನುಸರಿಸಿ, ನೀವು ಮಲೈ ಕುಲ್ಫಿ ಐಸ್ ಕ್ರೀಮ್ನ್ನು ಮನೆಯಲ್ಲೇ ತಯಾರಿಸಿ, ಹೋಟೆಲ್ ಮಟ್ಟದ ರೀತಿಯ ಅನುಭವಿಸಬಹುದು. ಈಗ ಇದರ ತಯಾರಿಕೆಗೆ ಬೇಕಾಗುವ ಪದಾರ್ಥಗಳು ಹಾಗೂ ಸಿದ್ಧಪಡಿಸುವ ವಿಧಾನವನ್ನು ತಿಳಿದುಕೊಳ್ಳೋಣ.

ಮಲೈ ಕುಲ್ಫಿ ಐಸ್ ಕ್ರೀಮ್ಗೆ ಬೇಕಾಗುವ ಪದಾರ್ಥಗಳು:
ದಪ್ಪ ಹಾಲು – 1 ಲೀಟರ್
ಸಕ್ಕರೆ – ಅರ್ಧ ಕಪ್
ಕಾಲು ಕಪ್ – ಹಾಲಿನ ಪುಡಿ
ಕಾಲು ಕಪ್ – ತಾಜಾ ಕೆನೆ
ಅರ್ಧ ಟೀಸ್ಪೂನ್ – ಏಲಕ್ಕಿ ಪುಡಿ
ಒಂದು ಹಿಡಿ – ಬಾದಾಮಿ ಮತ್ತು ಪಿಸ್ತಾ (ಅಲಂಕಾರಕ್ಕಾಗಿ ಬಳಸಿ)

ಮಲೈ ಕುಲ್ಫಿ ಐಸ್ ಕ್ರೀಮ್ ತಯಾರಿಸುವ ವಿಧಾನ
ಹಾಲಿನ ಪುಡಿ ಮತ್ತು ತಾಜಾ ಕ್ರೀಮ್ ಅನ್ನು ಮಿಕ್ಸಿಂಗ್ ಬೌಲ್ ನಲ್ಲಿ ಹಾಕಿ ಗಟ್ಟಿ ಉಂಡೆಗಳಿಲ್ಲದಂತೆ ಚೆನ್ನಾಗಿ ಕಲಸಿ. ಈ ಮಿಶ್ರಣವನ್ನು ಪಕ್ಕಕ್ಕೆ ಇಡಿ.
ಒಂದು ದೊಡ್ಡ ಪಾತ್ರೆಯಲ್ಲಿ ಹಾಲನ್ನು ಹಾಕಿ, ಕಡಿಮೆ ಉರಿಯಲ್ಲಿ ಅರ್ಧ ಪ್ರಮಾಣಕ್ಕೆ ಇಳಿಯುವವರೆಗೆ ಸುದೀರ್ಘವಾಗಿ ಕುದಿಸಿ. ಇದಕ್ಕೆ ಸುಮಾರು 30-40 ನಿಮಿಷ ಬೇಕಾಗಬಹುದು.
ಹಾಲು ದಪ್ಪವಾಗಿದ ನಂತರ, ಅದಕ್ಕೆ ಸಕ್ಕರೆ, ಏಲಕ್ಕಿ ಪುಡಿ ಹಾಗೂ ಮೊದಲು ತಯಾರಿಸಿದ ಹಾಲಿನ ಪುಡಿ ಮತ್ತು ಕ್ರೀಮ್ ಮಿಶ್ರಣವನ್ನು ಸೇರಿಸಿ. ಎಲ್ಲವೂ ಚೆನ್ನಾಗಿ ಬೆರೆತು, ಸಕ್ಕರೆ ಕರಗುವವರೆಗೆ ಮಿಕ್ಸ್ ಮಾಡಿ.
ಮಿಶ್ರಣ ಚೆನ್ನಾಗಿ ಹೊಂದಿದ ನಂತರ, ಅದನ್ನು ಉರಿಯಿಂದ ತೆಗೆದು ಸಂಪೂರ್ಣ ತಣ್ಣಗಾಗಲು ಬಿಡಿ.ಸಣ್ಣ ಕುಲ್ಫಿ ಅಚ್ಚುಗಳು ಅಥವಾ ಕಪ್ಗಳನ್ನು ತೆಗೆದುಕೊಂಡು, ತಣ್ಣಗಾದ ಮಿಶ್ರಣವನ್ನು ಅವುಗಳಲ್ಲಿ ಸುರಿಯಿರಿ. ಪಿಸ್ತಾ ಮತ್ತು ಬಾದಾಮಿ ತುಂಡುಗಳನ್ನು ಹಾಕಿ ಅಲಂಕರಿಸಿ.
ಈ ಎಲ್ಲಾ ಕುಲ್ಫಿಗಳನ್ನು ಫ್ರೀಜರ್ನಲ್ಲಿ ಕನಿಷ್ಠ 8 ಗಂಟೆಗಳವರೆಗೆ ಅಥವಾ ಇಡೀ ರಾತ್ರಿಯವರೆಗೆ ಇರಿಸಿ.ಕುಲ್ಫಿ ಗಟ್ಟಿಯಾಗಿದ ಮೇಲೆ, ಫ್ರೀಜರ್ನಿಂದ ತೆಗೆದು ಕೆಲವೇ ಕ್ಷಣಗಳು ತಣಿದ ನೀರಿನಲ್ಲಿ ಅಚ್ಚನ್ನು ಇಡಿರಿ. ಹೀಗೆ ಮಾಡಿದರೆ ಕುಲ್ಫಿ ಸುಲಭವಾಗಿ ಹೊರಬರುತ್ತದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


