ಪ್ರತಿ ಮನೆಯಲ್ಲಿಯೂ ಬೆಳಗ್ಗೆ ಏನು ತಿಂಡಿ ಮಾಡೋದು ಎಂಬ ಪ್ರಶ್ನೆ ಮಹಿಳೆಯರಿಗೆ ಸಾಮಾನ್ಯವಾಗಿ ತಲೆನೋವಾಗಿರುತ್ತದೆ. ಹಳೆಯ ತಿಂಡಿಗಳನ್ನೇ ಪುನಃ ಪುನಃ ಮಾಡುವುದು ಅಥವಾ ತಿನ್ನುವುದು ಬೇಸರವಾಗಬಹುದು. ಮಕ್ಕಳಿದ್ದರೆ ಹೊಸದಾಗಿ, ರುಚಿಕರವಾಗಿ, ಆರೋಗ್ಯಕರವಾಗಿಯೂ ಏನಾದರೂ ಮಾಡಬೇಕೆನ್ನುವ ಒತ್ತಡವೂ ಇರುತ್ತದೆ.ದಕ್ಷಿಣ ಭಾರತದ ಭಕ್ಷ್ಯಗಳು ವಿಭಿನ್ನ ಪಾಕ ಪದ್ಧತಿ, ಮಸಾಲೆಗಳ ಬಳಕೆ, ಮತ್ತು ವೈವಿಧ್ಯಮಯ ರುಚಿಯಿಂದ ಪ್ರಸಿದ್ಧಿ ಪಡೆದಿವೆ. ಈ ಭಾಗದ ತಿಂಡಿಗಳು ತ್ವರಿತವಾಗಿ, ಸುಲಭವಾಗಿ ತಯಾರಿಸಬಹುದಾದವುಗಳಾಗಿವೆ. ಅಂತಹದೇ ಒಂದು ಜನಪ್ರಿಯ ಮತ್ತು ವಿಶಿಷ್ಟ ತಿಂಡಿ ಎಂದರೆ ಮಂಗಳೂರು ಬನ್ಸ್. ದಕ್ಷಿಣ ಕನ್ನಡ ಜಿಲ್ಲೆಯ ಹೋಟೆಲ್‌ಗಳಲ್ಲಿ ಸಾಮಾನ್ಯವಾಗಿ ಸಿಗುವ ಈ ಬನ್ಸ್ ಸ್ವಲ್ಪ ಸಿಹಿಯಾಗಿದ್ದು, ಎಣ್ಣೆಯಲ್ಲಿ ಕರಿದು ತಯಾರಿಸಲಾಗುತ್ತದೆ. ಬೆಂಗಳೂರು ಸೇರಿದಂತೆ ಕರ್ನಾಟಕದ ಅನೇಕ ಭಾಗಗಳಲ್ಲಿ ಇದನ್ನು ಬೆಳಗಿನ ಉಪಹಾರ ಅಥವಾ ಸಂಜೆ ಸ್ನ್ಯಾಕ್ಸ್ ಆಗಿ ಸವಿಯುತ್ತಾರೆ.ಮಂಗಳೂರು ಬನ್ಸ್ ಪೂರಿಯ ಹೋಲಿಕೆಯಲ್ಲಿ ಸಿಹಿ ರುಚಿಯೊಂದಿಗೆ ಬರುವುದರಿಂದ ಮಕ್ಕಳಿಗೂ ದೊಡ್ಡವರಿಗೂ ಬಹಳ ಇಷ್ಟವಾಗುತ್ತದೆ. ಇದನ್ನು ಚಟ್ನಿಯೊಂದಿಗೆ ಸವಿದರೆ ರುಚಿ ಇನ್ನಷ್ಟು ಹೆಚ್ಚುತ್ತದೆ. ಮಂಗಳೂರು ಬನ್ಸ್ ಅನ್ನು ಮನೆಯಲ್ಲೇ ಸುಲಭವಾಗಿ ತಯಾರಿಸುವ ವಿಧಾನ ಇಲ್ಲಿದೆ,ಮಂಗಳೂರು ಬನ್ಸ್ ಮಾಡುವ ಮುನ್ನ, ಹಿಂದಿನ ದಿನ ರಾತ್ರಿಯೇ ಹಿಟ್ಟನ್ನು ಚೆನ್ನಾಗಿ ಮಿಕ್ಸ್ ಮಾಡಿ ಕಲಸಿಡುವುದು ಅತ್ಯಂತ ಮುಖ್ಯ. ಸುಮಾರು 8 ಗಂಟೆಗಳ ಕಾಲ ಹಿಟ್ಟನ್ನು ಫರ್ಮೆಂಟ್ ಮಾಡಿದರೆ ಬನ್ಸ್ ನ ಸೊಫ್ಟ್ ಮತ್ತು ಉಬ್ಬಿ ಬರುವ ಗುಣಮಟ್ಟ ಉತ್ತಮವಾಗಿರುತ್ತದೆ.

ಬೇಕಾಗುವ ಸಾಮಗ್ರಿಗಳು:
ಬಲಿತ ಬಾಳೆಹಣ್ಣು-2-3
ಮೈದಾ ಹಿಟ್ಟು – 2 ಕಪ್
ಸಕ್ಕರೆ-3 ಟೇಬಲ್ ಚಮಚ
ಜೀರಿಗೆ-1 ಟೀ ಚಮಚ
ಮೊಸರು- 1/4 ಕಪ್
ಬೇಕಿಂಗ್ ಸೋಡಾ- ಚಿಟಿಕೆಯಷ್ಟು
ಉಪ್ಪು-1/2 ಟೀ ಚಮಚ
ಅಡುಗೆ ಎಣ್ಣೆ- ಕರಿಯಲು ಬೇಕಾಗುವಷ್ಟು
ಮಂಗಳೂರು ಬನ್ಸ್ ಮಾಡುವ ವಿಧಾನ:
2 ಹಣ್ಣು ಚೆನ್ನಾಗಿ ಹಳದಿ ಬಾಳೆಹಣ್ಣುಗಳನ್ನು ತೆಗೆದುಕೊಳ್ಳಿ. ಬಾಳೆಹಣ್ಣು ಚೆನ್ನಾಗಿ ಮಾಗಿದ್ದರೆ ಉತ್ತಮ. ಇದನ್ನು ಸರಿಯಾಗಿ ಸ್ಮ್ಯಾಶ್ ಮಾಡಿ.
ಸ್ಮ್ಯಾಶ್ ಮಾಡಿದ ಬಾಳೆಹಣ್ಣಿಗೆ 1 ರಿಂದ 2 ಟೀಸ್ಪೂನ್ ಸಕ್ಕರೆ (ರುಚಿಗೆ ತಕ್ಕಷ್ಟು) ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ.
ಈ ಮಿಶ್ರಣಕ್ಕೆ ಅರ್ಧ ಕಪ್ ಮೊಸರು, ಜೀರಿಗೆ, ಅಡಿಗೆ ಸೋಡಾ (ಬೇಕಿಂಗ್ ಸೋಡಾ) ಮತ್ತು ಉಪ್ಪು (ರುಚಿಗೆ ತಕ್ಕಷ್ಟು) ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
2 ಕಪ್ ಮೈದಾ ಹಿಟ್ಟನ್ನು ಮಿಶ್ರಣದಲ್ಲಿ ಸೇರಿಸಿ, ಗಂಟಾಗದಂತೆ ಹದವಾದ ಹಿಟ್ಟಾಗಿ ಕಲಸಿ.
8 ಗಂಟೆ ನಂತರ ಹಿಟ್ಟನ್ನು ತೆಗಿದು, ಸಮಾನ ಗಾತ್ರದ ಉಂಡೆಗಳಾಗಿ ಮಾಡಿ, ಲಟ್ಟಣಿಗೆಯಿಂದ ವೃತ್ತಾಕಾರವಾಗಿ ಲಟ್ಟಿಸಿ. ಹಿಟ್ಟನ್ನು ಸ್ವಲ್ಪ ಉದುರಿಸಿ, ಅಟ್ಟು ಆಗಬಾರದು.
ಬಿಸಿಯಾದ ಎಣ್ಣೆಯಲ್ಲಿ ಈ ಬನ್ಸ್‌ಗಳನ್ನು ಡೀಪ್ ಫ್ರೈ ಮಾಡಿ. ಎರಡೂ ಬದಿಗಳಿಗೂ ಗೋಲ್ಡನ್ ಬ್ರೌನ್ ಬಣ್ಣ ಬರುವುವರೆಗೆ ಕರಿಯಿರಿ.
ಬನ್ಸ್‌ಗಳನ್ನು ಹೊರಗೆ ತೆಗೆದು, ಹಾಲು ಅಥವಾ ಕೊತ್ತಂಬರಿ ಚಟ್ನಿ ಜೊತೆಗೆ ಬಿಸಿ ಬಿಸಿ ಸರ್ವ್ ಮಾಡಿ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


