ಇಂಡಿಯನ್ ಪ್ರೀಮಿಯರ್ ಲೀಗ್ ಮುಕ್ತಾಯದ ಬೆನ್ನಲ್ಲೇ ತಮಿಳುನಾಡು ಪ್ರೀಮಿಯರ್ ಲೀಗ್ ಆರಂಭವಾಗಿದ್ದು, ತಮಿಳುನಾಡಿನ ಕ್ರಿಕೆಟ್ ಪ್ರೇಮಿಗಳಿಗೆ ಮತ್ತೊಂದು ಮನರಂಜನೆ ಸಿಕ್ಕಂತಾಗಿದೆ.
ಭಾನುವಾರ ( ಜೂನ್ 8 ) ಕೊಯಮತ್ತೂರಿನ ಎಸ್‌ಎನ್‌ಆರ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ದಿಂಡಿಗಲ್ ಡ್ರ್ಯಾಗನ್ಸ್ ಹಾಗೂ ಐಡ್ರೀಮ್ ತಿರುಪ್ಪೂರ್ ತಮಿಳನ್ಸ್ ತಂಡಗಳ ನಡುವಿನ ಪಂದ್ಯದ ವೇಳೆ ರವಿಚಂದ್ರನ್ ಅಶ್ವಿನ್ ಅಂಪೈರ್ ಕೊಟ್ಟ ತೀರ್ಪಿಗೆ ಆಕ್ರೋಶಗೊಂಡು ಮೈದಾನದಲ್ಲೇ ವಾಗ್ವಾದಕ್ಕಿಳಿದಿದ್ದಾರೆ.
ದಿಂಡಿಗಲ್ ಡ್ರ್ಯಾಗನ್ಸ್ ತಂಡದ ನಾಯಕ ಅಶ್ವಿನ್ ಪಂದ್ಯದಲ್ಲಿ 18 ರನ್ ಗಳಿಸಿದ್ದಾಗ ಸಾಯಿ ಕಿಶೋರ್ ಎಸೆತಕ್ಕೆ ಎಲ್‌ಬಿಡಬ್ಲ್ಯೂಗೆ ಬಲಿಯಾದರು. ಆದರೆ ಪಿಚ್ ಸ್ಟಂಪ್‌ನಿಂದ ಆಚೆ ಬಿದ್ದ ಅನುಮಾನ ವ್ಯಕ್ತಪಡಿಸಿದ ಅಶ್ವಿನ್ ಮಹಿಳಾ ಅಂಪೈರ್ ಕೃತಿಕಾ ಜತೆ ವಾಗ್ವಾದಕ್ಕಿಳಿದರು.
ಔಟ್ ಅಲ್ಲ ಎಂದು ವಾದಿಸಿ, ಮನವಿ ಮಾಡಲಾರಂಭಿಸಿದರು. ಬಳಿಕ ಮೈದಾನದಿಂದ ಪೆವಿಲಿಯನ್ ಕಡೆ ನಡೆದ ಅಶ್ವಿನ್ ಬ್ಯಾಟ್‌ನಿಂದ ತಮ್ಮ ಲೆಗ್ ಪ್ಯಾಡ್‌ಗಳಿಗೆ ಹೊಡೆದುಕೊಂಡು ಆಕ್ರೋಶ ಹೊರಹಾಕಿದರು ಹಾಗೂ ಗೌಸ್ ಅನ್ನು ತೂರಿ ಕೂಗಿದರು.
ಸದ್ಯ ಅಶ್ವಿನ್ ಅವರ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಹಾಗೂ ಕ್ರಿಕೆಟ್ ಪ್ರೇಮಿಗಳು ಅಶ್ವಿನ್ ನಡೆಯನ್ನು ಖಂಡಿಸಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


