Wednesday, September 2, 2026
spot_img
More
    spot_img
    HomeLatest newsನಿಮ್ಮ ಗೂಗಲ್‌ ಕಾಂಟ್ಯಾಕ್ಟ್ಸ್‌ ಡಿಲಿಟ್‌ ಆಯ್ತಾ? ಅವುಗಳನ್ನು ಮರಳಿ ಪಡೆಯುವ ಸುಲಭ ವಿಧಾನ ಇಲ್ಲಿದೆ

    ನಿಮ್ಮ ಗೂಗಲ್‌ ಕಾಂಟ್ಯಾಕ್ಟ್ಸ್‌ ಡಿಲಿಟ್‌ ಆಯ್ತಾ? ಅವುಗಳನ್ನು ಮರಳಿ ಪಡೆಯುವ ಸುಲಭ ವಿಧಾನ ಇಲ್ಲಿದೆ

    ಹೊಸ ಫೋನ್ ಕೊಂಡಾಗ ಅಥವಾ ಫ್ಯಾಕ್ಟರಿ ರಿಸೆಟ್ ಮಾಡಿದಾಗ, ಎಲ್ಲಾ ಕಾಂಟ್ಯಾಕ್ಟ್‌ಗಳು ಕಳೆದುಹೋಗಿದ್ದರೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಯಾಕೆಂದರೆ ಈಗ ಟೆಕ್ನಾಲಜಿಯು ಇಂತಹ ಸಂದರ್ಭಗಳಲ್ಲಿ ಸಹಾಯ ಮಾಡಲು ಸಿದ್ಧವಾಗಿದೆ!ಹೊಸ ಫೋನ್‌ಗೆ ಶಿಫ್ಟ್ ಆಗುವಾಗ ಅಥವಾ ಫ್ಯಾಕ್ಟರಿ ರಿಸೆಟ್(Factory reset) ಮಾಡಿದಾಗ ಎಲ್ಲ ಸಂಪರ್ಕಗಳು ಕಳೆದುಹೋಗಿದೆಯೆಂದು ನಾವು ಚಿಂತೆ ಪಡುವುದು ಸಾಮಾನ್ಯ. ಆದರೆ ಈಗ ತಂತ್ರಜ್ಞಾನ ಎಷ್ಟೋ ಮುಂದಾಗಿದೆ, ಈ ನಷ್ಟವನ್ನು ಸುಲಭವಾಗಿ ಮರುಪಡೆಯಬಹುದು.ಆಂಡ್ರಾಯ್ಡ್ ಮತ್ತು ಐಫೋನ್ ಬಳಸುವವರಿಗೆ ಕಾಂಟಾಕ್ಟ್ ಎನ್ನುವುದು ಅತ್ಯಂತ ಹೆಚ್ಚು ಪ್ರಮುಖವಾದದ್ದು. ಅಂದರೆ ನಿಮ್ಮ ಫೋನ್‌ನಲ್ಲಿ ಸ್ಟೋರ್ ಮಾಡಿರುವ ಕಾಂಟಾಕ್ಟ್‌ಗಳು ಅವುಗಳನ್ನು ಫೋನ್ ಸ್ಟೋರೇಜ್‌ನಲ್ಲಿ ಇರಿಸುವುದಕ್ಕಿಂತ, ಇ ಮೇಲ್‌ಗೆ ಸಿಂಕ್ ಮಾಡುವುದು ಉತ್ತಮ ಮತ್ತು ಯಾವತ್ತೂ ಬೆಸ್ಟ್. ಫೋನ್ ಸಮಸ್ಯೆಯಾದರೆ, ಹೊಸ ಫೋನ್ ಕೊಂಡಾಗ.. ಹೀಗೆ ಹಲವು ಸಂದರ್ಭದಲ್ಲಿ ಫೋನ್ ಬದಲಾದರೆ, ಕಾಂಟಾಕ್ಟ್ ಮಿಸ್ ಆಯಿತು ಎಂದು ಮರುಕಪಡಬೇಕಿಲ್ಲ. ಅದರ ಬದಲು, ಇ ಮೇಲ್ ಐಡಿ ಹಾಕಿ ಲಾಗಿನ್ ಆದರೆ, ಎಲ್ಲವೂ ಅಲ್ಲಿ ಶೇಖರವಾಗಿರುತ್ತದೆ. ಮತ್ತು ಡಿಫಾಲ್ಟ್ ಸ್ಟೋರೇಜ್ ಇ ಮೇಲ್ ಇದ್ದರೆ, ಪ್ರತಿ ಕಾಂಟಾಕ್ಟ್ ಸೇರಿಸುತ್ತಾ ಹೋದಾಗಲೂ, ಅದು ಫೋನ್‌ನಲ್ಲಿ ಇ ಮೇಲ್‌ಗೆ ಸಿಂಕ್ ಆಗಿ ಅಪ್‌ಡೇಟ್ ಆಗುತ್ತದೆ. ಅದರಲ್ಲೂ ಗೂಗಲ್ ಕಾಂಟಾಕ್ಟ್ ಆ್ಯಪ್‌ ನಿಮಗೆ ಹಲವು ವಿಧದಲ್ಲಿ ಸಹಕಾರಿ.

    Advertisement

    ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಗೂಗಲ್‌ ಕಾಂಟಾಕ್ಟ್ಸ್ ಆ್ಯಪ್‌ ಇದ್ದು, ನಿಮ್ಮ ಡಿಫಾಲ್ಟ್ ಕಾಂಟಾಕ್ಟ್ ಸ್ಟೋರೇಜ್ ಗೂಗಲ್ ಕಾಂಟಾಕ್ಟ್‌ ಆಗಿದ್ದರೆ, ನೀವು ಚಿಂತಿಸಬೇಕಿಲ್ಲ. ಅಕಸ್ಮಾತ್ ಯಾವುದಾದರೊಂದು ಕಾಂಟಾಕ್ಟ್ ನಂಬರ್ ತಪ್ಪಿ ಡಿಲೀಟ್ ಆದರೂ ಅದನ್ನು ಮರಳಿ ಪಡೆಯಬಹುದು. ಆದರೆ ಗೂಗಲ್ ಕಾಂಟಾಕ್ಟ್ ವೆಬ್‌ಸೈಟ್ ಮೂಲಕ ಅದನ್ನು ಮರಳಿ ಪಡೆಯಲು ಸಾಧ್ಯ. ಗೂಗಲ್‌ ಕಾಂಟಾಕ್ಟ್ಸ್ ಆ್ಯಪ್‌ನಲ್ಲಿ ರಿಕವರಿ ಆಯ್ಕೆ ಇಲ್ಲ. ಅದರ ಬದಲು, ಮೊಬೈಲ್ ಬ್ರೌಸರ್ ಕೂಡ ಬಳಸಬಹುದು. ಆಂಡ್ರಾಯ್ಡ್ ಅಥವಾ ಐಫೋನ್ ಆದರೂ ಓಕೆ. ಇಂಟರ್‌ನೆಟ್ ಸಂಪರ್ಕ ಇರಲೇಬೇಕು. ಕಂಪ್ಯೂಟರ್ ಇಲ್ಲವೆ ಲ್ಯಾಪ್‌ಟಾಪ್ ಇದ್ದರೆ ಉತ್ತಮ.

    ಈ ಹಂತಗಳನ್ನು ಅನುಸರಿಸಿ:

    ಮೊಬೈಲ್ ಬ್ರೌಸರ್ ಅಥವಾ ಕಂಪ್ಯೂಟರ್‌ನಲ್ಲಿ contacts.google.com ಗೆ ಲಾಗಿನ್ ಆಗಿ.

    ಎಡಭಾಗದಲ್ಲಿ “Bin” ಅಥವಾ “Trash” ಆಯ್ಕೆಮಾಡಿ.

    ಅಲ್ಲಿ ನಿಮ್ಮ ಡಿಲೀಟ್ ಆದ ಕಾಂಟಾಕ್ಟ್‌ಗಳು ಕಾಣಿಸುತ್ತವೆ (ಅವು 30 ದಿನಗಳವರೆಗೆ ಮಾತ್ರ ಉಳಿಯುತ್ತವೆ).

    ಮರಳಿ ಪಡೆಯಲು, ಆಯ್ಕೆಮಾಡಿ “Recover” ಕ್ಲಿಕ್ ಮಾಡಿ.ಇಂಟರ್‌ನೆಟ್ ಸಂಪರ್ಕ ಇದ್ದರೆ, ನೀವು ಆಂಡ್ರಾಯ್ಡ್ ಅಥವಾ ಐಫೋನ್ ಯಾವುದಾದರೂ ಬಳಸುತ್ತಿದ್ದರೂ ಈ ವಿಧಾನವು ಕೆಲಸ ಮಾಡುತ್ತದೆ. ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್ ಇದ್ದರೆ ಕೆಲಸ ಇನ್ನೂ ಸುಲಭ.

    ಗೂಗಲ್ ಕಾಂಟಾಕ್ಟ್ ವೆಬ್‌ಸೈಟ್ ಮೂಲಕ ಡಿಲೀಟ್ ಆದ ಸಂಪರ್ಕಗಳನ್ನು ಮರುಪಡೆಯುವ ವಿಧಾನ

    ಮೊದಲು ನಿಮ್ಮ ಬ್ರೌಸರ್‌ನಲ್ಲಿ contacts.google.com ತೆರೆಯಿರಿ.

    ನಿಮ್ಮ ಫೋನ್‌ನಲ್ಲಿ ಬಳಸುತ್ತಿರುವ ಜಿಮೇಲ್ ಐಡಿಯಿಂದ ಲಾಗಿನ್ ಆಗಿ.

    ಎಡಭಾಗದಲ್ಲಿ ಇರುವ Settings (ಸೆಟ್ಟಿಂಗ್ಸ್) ಬಟನ್ ಕ್ಲಿಕ್ ಮಾಡಿ.

    ಅಲ್ಲಿ Undo changes (ಅಂಡೂ ಚೇಂಜಸ್) ಎಂಬ ಆಯ್ಕೆ ಕಾಣಿಸುತ್ತದೆ. ಇದನ್ನು ಕ್ಲಿಕ್ ಮಾಡಿ.

    ತೆರೆಯುವ ಬಾಕ್ಸ್‌ನಲ್ಲಿ, ಕಳೆದ 30 ದಿನಗಳೊಳಗಿನ ಯಾವುದೇ ಸಮಯವನ್ನು ಆಯ್ಕೆಮಾಡಬಹುದು (ಉದಾ: 10 ನಿಮಿಷ, 1 ಗಂಟೆ, 1 ದಿನ, 1 ವಾರ, 30 ದಿನ).

    ನೀವು ಯಾವಾಗ ಕಾಂಟಾಕ್ಟ್ ಡಿಲೀಟ್ ಮಾಡಿದ್ದೀರೋ ಆ ಸಮಯವನ್ನು ಆಯ್ಕೆ ಮಾಡಿ, ಕೆಳಗಡೆ ಇರುವ Undo (ಅಂಡೂ) ಕ್ಲಿಕ್ ಮಾಡಿ.

    ಈಗ ಡಿಲೀಟ್ ಆದ ಸಂಪರ್ಕಗಳು ಮತ್ತೆ ನಿಮ್ಮ ಖಾತೆಗೆ ಸೇರ್ಪಡೆಯಾಗುತ್ತವೆ ಮತ್ತು ನಿಮ್ಮ ಫೋನ್‌ನಲ್ಲೂ ಸಿಂಕ್ ಆಗಿ ಕಾಣಿಸುತ್ತವೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading