Friday, March 20, 2026
spot_img
More
    spot_img
    HomeEntertainmentಅವನು ಯಾವನೋ ಫಿಲ್ಮ್‌ ಚೇಂಬರ್‌ ಅಧ್ಯಕ್ಷನಿಗೆ ಕನ್ನಡ ಬರಲ್ಲ ವಾಣಿಜ್ಯ ಮಂಡಳಿಯಲ್ಲಿದ್ದಾನೆ; ನಾರಾಯಣ ಗೌಡ ಆಕ್ರೋಶ

    ಅವನು ಯಾವನೋ ಫಿಲ್ಮ್‌ ಚೇಂಬರ್‌ ಅಧ್ಯಕ್ಷನಿಗೆ ಕನ್ನಡ ಬರಲ್ಲ ವಾಣಿಜ್ಯ ಮಂಡಳಿಯಲ್ಲಿದ್ದಾನೆ; ನಾರಾಯಣ ಗೌಡ ಆಕ್ರೋಶ

    ರಾಜನಿವಾಸ ಚಿತ್ರದ ಟ್ರೈಲರ್‌ ಲಾಂಚ್‌ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದ ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣ ಗೌಡ ಕನ್ನಡ ಚಿತ್ರರಂಗದ ಕುರಿತು ನೇರ ಹೇಳಿಕೆಗಳನ್ನು ನೀಡಿದರು.

    ಮೊದಲಿಗೆ ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕರ ಕೊರತೆ ಇದೆ ಎಂದ ನಾರಾಯಣ ಗೌಡ ಕನ್ನಡಿಗರು ಸರಿಯಾದ ಯೋಜನೆ ಜತೆಗೆ ನಿರ್ಮಾಪಕರಾಗಿ ಚಿತ್ರರಂಗ ಪ್ರವೇಶಿಸಬೇಕು ಎಂದರು.

    ಚಿತ್ರರಂಗದಲ್ಲಿ ಕಲಾವಿದರ ಪರಿಸ್ಥಿತಿ ಸರಿಯಿಲ್ಲ ಎಂದು ಆರೋಪಿಸಿದ ನಾರಾಯಣ ಗೌಡ ಓಂ ಸಾಯಿ ಪ್ರಕಾಶ್‌ ಅವರು 105 ಚಿತ್ರ ಮಾಡಿದ್ದಾರೆ ಅವರ ಪರಿಸ್ಥಿತಿ ಕೇಳಿ ನೋವಾಯಿತು. ಹೀಗೆ ಅನೇಕ ನಿರ್ಮಾಪಕರ ಪರಿಸ್ಥಿತಿಯಾಗಿದೆ. ಕನ್ನಡ ಚಿತ್ರರಂಗದಲ್ಲಿ ನಾಲ್ಕೈದು ಜನ ನಟರು, ನಾಲ್ಕೈದು ನಿರ್ಮಾಪಕರು ಎಂಬಂತಾಗಿದೆ ಎಂದು ಕಿಡಿಕಾರಿದರು.

    ಪರಭಾಷಾ ಚಿತ್ರಗಳಿಂದಲೂ ಕನ್ನಡ ನಿರ್ಮಾಪಕರಿಗೆ ತೊಂದರೆಯಾಗುತ್ತಿದ್ದು, ಇದಕ್ಕೆ ಚಿತ್ರರಂಗದಲ್ಲಿ ಕೂತು ಸರಿಯಾದ ಕ್ರಮ ಕೈಗೊಳ್ಳಬೇಕು. ತಮಿಳುನಾಡಿನಲ್ಲಿ ಓರ್ವ ತಮಿಳು ಕಲಾವಿದನಿಗೆ ತೊಂದರೆಯಾದರೆ ಎಲ್ಲ ತಮಿಳಿಗರೂ ಒಟ್ಟಿಗೆ ನಿಲ್ಲುತ್ತಾಎ. ಅಲ್ಲಿನ ವಾಣಿಜ್ಯ ಮಂಡಳಿ ಸಹಾಯಕ್ಕೆ ಬರುತ್ತೆ. ನಿಮ್ಮದೂ ಇದೆ ವಾಣಿಜ್ಯ ಮಂಡಳಿ ಎಂಥೆಂಥವರೋ ಕೂತಿದ್ದಾರೆ, ಅವನು ಯಾರೋ ಅಧ್ಯಕ್ಷನಿಗೆ ಕನ್ನಡ ಬರುವುದಿಲ್ಲ ಅವನಿಗೆ. ಇಂಥವರೆಲ್ಲ ವಾಣಿಜ್ಯ ಮಂಡಳಿಯಲ್ಲಿ ಕೂತಿದ್ದಾರೆ, ಅಲ್ಲಿ ಅವರೇ ವ್ಯಾಪಾರ ಮಾಡ್ತಾರೆ. ತೊಟ್ಟಿಲು ತೂಗೋದು ಅವರೇ, ಮಗು ಚಿವುಟುವುದು ಅವರೇ ಅಂತಾರಲ್ಲ ಹಾಗೆ ಎಂದು ನಾರಾಯಣ ಗೌಡ ಆಕ್ರೋಶ ಹೊರಹಾಕಿದರು.

    ‌’ಬೋರಿಂಗ್‌ ಕ್ರಿಕೆಟ್‌ಗೆ ಸುಸ್ವಾಗತ’ ಎಂದು ಕೂಗಿ ಇಂಗ್ಲೆಂಡ್‌ ನಿಧಾನಗತಿ ಆಟವನ್ನು ಟೀಕಿಸಿದ ಗಿಲ್; ವಿಡಿಯೊ

    ಕೃಷಿ ಎಐ ಕನ್ನಡ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಬ್ರೇಕಿಂಗ್! ರೂಪಾಯಿ ಕುಸಿತ—ಮೊದಲ ಬಾರಿಗೆ ₹93 ದಾಟಿದ ಡಾಲರ್, ಆರ್ಥಿಕತೆಗೆ ಶಾಕ್!

    “ರೂಪಾಯಿ ಕುಸಿತ 93” ಇದೀಗ ದೇಶದ ಆರ್ಥಿಕ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಪಶ್ಚಿಮ ಏಷ್ಯಾದ ಉದ್ವಿಗ್ನತೆ ಹೆಚ್ಚಾಗುತ್ತಿರುವ ಹಿನ್ನೆಲೆ, ಭಾರತೀಯ ರೂಪಾಯಿ ಇತಿಹಾಸದಲ್ಲೇ ಮೊದಲ ಬಾರಿಗೆ ಡಾಲರ್ ಎದುರು ₹93 ಗಡಿ...

    ತೆಲಂಗಾಣ ಬಜೆಟ್ 2026: ಆರೋಗ್ಯ ಕ್ಷೇತ್ರಕ್ಕೆ ಭಾರೀ ಉತ್ತೇಜನ—₹1286 ಕೋಟಿ ಹೆಚ್ಚಳ!

    “ತೆಲಂಗಾಣ ಆರೋಗ್ಯ ಬಜೆಟ್ 2026” ಈಗ ರಾಜ್ಯ ರಾಜಕೀಯ ಹಾಗೂ ಸಾರ್ವಜನಿಕರಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಆರೋಗ್ಯ ಸೇವೆಗಳನ್ನು ಬಲಪಡಿಸಲು ಸರ್ಕಾರ ದೊಡ್ಡ ಮಟ್ಟದ ಹೂಡಿಕೆ ಮಾಡಿದ್ದು, ಹೆಚ್ಚುವರಿ ₹1286 ಕೋಟಿ ಅನುದಾನ...

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading