ರೇಲ್ವೆ ಪ್ರಯಾಣಿಕರಿಗೆ ರೈಲ್ವೆ ಸಚಿವಾಲಯ ಸಿಹಿ ಸುದ್ದಿಯೊಂದನ್ನು ನೀಡಿದೆ. ಹೋಗಿ ಬರುವ ಎರಡೂ ಟಿಕೆಟ್ ಅನ್ನು (ರೌಂಡ್ ಟ್ರಿಪ್) ಒಟ್ಟಿಗೆ ಮುಂಗಡ ಕಾಯ್ಡಿರಿಸುವ ಪ್ರಯಾಣಿಕರಿಗೆ ಪ್ರಯಾಣ ದರದ ಮೇಲೆ ಶೇ 20 ರಷ್ಟು ರಿಯಾಯಿತಿ ನೀಡಲು ತೀರ್ಮಾನಿಸಿದೆ.
ಈ ಕೊಡುಗೆ ಇದೇ ಅಕ್ಟೋಬರ್ 13ರಿಂದ 26ರೊಳಗಿನ ಪ್ರಯಾಣ ಹಾಗೂ ನವೆಂಬರ್ 17ರಿಂದ ಡಿಸೆಂಬರ್ 1ರೊಳಗಿನ ಪ್ರಯಾಣದ ಬುಕಿಂಗ್ ಮೇಲೆ ಮಾತ್ರ ಅನ್ವಯವಾಗಲಿದೆ ಎಂದು ತಿಳಿಸಿದೆ. ಈ ರಿಯಾಯಿತಿ ಸೌಲಭ್ಯದ ಬುಕಿಂಗ್ ಆಗಸ್ಟ್ 14ರಿಂದ ಪ್ರಾರಂಭವಾಗುತ್ತದೆ.
ಯಾರ ಹೆಸರಿಗೆ ಹೋಗುವ ಟಿಕೆಟ್ ಬುಕ್ ಮಾಡಿರುತ್ತಾರೋ ರಿಟರ್ನ್ ಟಿಕೆಟ್ ಸಹ ಅದೇ ಹೆಸರಿಗೆ ಇದ್ದರೆ ಮಾತ್ರ ರಿಯಾಯಿತಿ ಅನ್ವಯವಾಗುತ್ತದೆ. ರಿಟರ್ನ್ ಟಿಕೆಟ್ ಬುಕಿಂಗ್ ಖಚಿತ ಆದ ಮೇಲೆಯೇ ಒಟ್ಟಾರೆ ರೌಂಡ್ ಟ್ರಿಪ್ನ ಶೇ 20 ರಷ್ಟು ರಿಯಾಯಿತಿ ಸಿಗುತ್ತದೆ ಎಂದು ರೈಲ್ವೆ ಸಚಿವಾಲಯ ಸ್ಪಷ್ಟಪಡಿಸಿದೆ.
,ಬಂಗಾರ ಪ್ರಿಯರಿಗೆ ಇಲ್ಲಿದೆ ಗುಡ್ ನ್ಯೂಸ್
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


