ಇಂದು ವಿಶ್ವ ಸಿಂಹ ದಿನ . ಪ್ರತಿ ವರ್ಷ ಆಗಸ್ಟ್ 10 ರಂದು ವಿಶ್ವ ಸಿಂಹ ದಿನವನ್ನು ಆಚರಿಸಲಾಗುತ್ತದೆ. ಸಿಂಹಗಳ ಸಂರಕ್ಷಣೆಗೆ ಬೆಂಬಲ ಸೂಚಿಸುವ ಮತ್ತು ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ವಿಶ್ವ ಸಿಂಹ ದಿನವನ್ನು ಆಚರಣೆ ಮಾಡಲಾಗುತ್ತದೆ
ವಿಶ್ವ ಸಿಂಹ ದಿನದ ಆಚರಣೆ 2013 ರಲ್ಲಿ ಪ್ರಾರಂಭವಾಯಿತು. ಸಿಂಹಗಳ ಉಳಿವಿನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮತ್ತು ಅವುಗಳ ರಕ್ಷಣೆಗಾಗಿ ಸಿಂಹ ಮತ್ತು ಹುಲಿಗಳ ರಕ್ಷಣೆಗಾಗಿ ಕೆಲಸ ಮಾಡುವ ಸಂಸ್ಥೆಯಾದ ಬಿಗ್ ಕ್ಯಾಟ್ಸ್ ರೆಸ್ಕ್ಯೂ ಸಂಸ್ಥೆಯ ಸಂಸ್ಥಾಪಕರಾದ ಡೆರೆಕ್ ಮತ್ತು ಬೆವರ್ಲಿ ಜೌಬರ್ಟ್ ಅವರು ನ್ಯಾಷನಲ್ ಜಿಯೋಗ್ರಾಫಿಕ್ ಸಹಭಾಗಿತ್ವದಲ್ಲಿ ಸಿಂಹ ದಿನದ ಆಚರಣೆಯನ್ನು ಪ್ರಾರಂಭಿಸಿದರು. ಕ್ಷೀಣಿಸುತ್ತಿರುವ ಸಿಂಹಗಳ ಸಂಖ್ಯೆ ಮತ್ತು ಅವುಗಳ ರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವುದು ಈ ದಿನದ ಆಚರಣೆಯ ಉದ್ದೇಶವಾಗಿದೆ.
ಜಾಗತಿಕವಾಗಿ, ಸಿಂಹಗಳ ಸಂಖ್ಯೆ 20,000 ದಿಂದ 35,000 ರ ನಡುವೆ ಇರುತ್ತದೆ ಎಂದು ಹೇಳಲಾಗುತ್ತದೆ. ದಾಖಲೆಗಳ ಪ್ರಕಾರ, ಗಿರ್ ಸಿಂಹ ಅಭಯಾರಣ್ಯದಲ್ಲಿನ ಸಂರಕ್ಷಣೆ ಮತ್ತು ಅಭಯಾರಣ್ಯದ ಹೊರಗಿನ ಆವಾಸಸ್ಥಾನ ನಿರ್ವಹಣೆಯಿಂದಾಗಿ, ಭಾರತದಲ್ಲಿ ಏಷ್ಯಾಟಿಕ್ ಸಿಂಹಗಳ ಸಂಖ್ಯೆ ಇತ್ತೀಚೆಗೆ 891 ಕ್ಕೆ ಏರಿದೆ.
ಗುಜರಾತ್ ಗಿರ್ ಅರಣ್ಯದಲ್ಲಿ ಅತಿಹೆಚ್ಚು ಸಿಂಹಗಳಿವೆ. ಹಾಗಾಗಿ, ಸಿಂಹ ಗುಜರಾತ್ ರಾಜ್ಯದ ಹೆಮ್ಮೆ. ಸಿಂಹಗಳು ಹಸಿವಾದಾಗಲಷ್ಟೇ ಬೇಟೆಗಿಳಿಯುತ್ತದೆ. ಶೇ 90ರಷ್ಟು ಸಿಂಹಗಳಲ್ಲಿ ಹೆಣ್ಣು ಸಿಂಹಗಳೇ ಬೇಟೆಯಾಡುತ್ತವೆ. ಹೆಣ್ಣು ಬೇಟೆ ಆಡಿದ ಪ್ರಾಣಿಯನ್ನು ತಿನ್ನಲು ಗಂಡು ಹಾಜರಿರುತ್ತದೆ! ಅಂದಹಾಗೆ, ಸಿಂಹ ತುಂಬಾ ಸೋಮಾರಿ. ದಿನದ 24 ಗಂಟೆಗಳಲ್ಲಿ 15ರಿಂದ 16 ಗಂಟೆಗಳ ಕಾಲ ಮಲಗಿಯೇ ಇರುತ್ತದೆ.
ಹೆಣ್ಣು ಸಿಂಹ ಗರ್ಭಧರಿಸಿದ 90 ದಿನಗಳಲ್ಲಿ ಮೂರರಿಂದ ನಾಲ್ಕು ಮರಿಗಳಿಗೆ ಜನ್ಮ ನೀಡುತ್ತದೆ. ಕಾಡಿನಲ್ಲಿರುವ ಸಿಂಹಗಳ ಜೀವಿತಾವಧಿ 15ರಿಂದ 16 ವರ್ಷಗಳು ಮಾತ್ರ. ಸಿಂಹ 13–14ನೇ ವರ್ಷಕ್ಕೆ ಕಾಲಿಡುವ ಸಂದರ್ಭದಿಂದ ಹಲ್ಲುಗಳು ಬೀಳಲು ಶುರುವಾಗುತ್ತದೆ. ಬೇಟೆ ಆಡಲು ಕಷ್ಟ. ಈ ಕಾರಣದಿಂದ ಸಾಯುತ್ತವೆ.ಮೃಗಾಲಯದಲ್ಲಿರುವ ಸಿಂಹ ಗರಿಷ್ಠ 20 ವರ್ಷಗಳ ಕಾಲ ಬದುಕುತ್ತದೆ. 25 ವರ್ಷಗಳ ಬದುಕಿದ ದಾಖಲೆ ಕೂಡ ಇದೆ.
,ಬಂಗಾರ ಪ್ರಿಯರಿಗೆ ಇಲ್ಲಿದೆ ಗುಡ್ ನ್ಯೂಸ್
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


