ಬುಕ್ ಬ್ರಹ್ಮ ಸಾಹಿತ್ಯೋತ್ಸವದ ಎರಡನೇ ದಿನವಾದ ಶನಿವಾರ ನಡೆದ ‘ಕಾದಂಬರಿಯಾದ ಸಂಗೀತ’ ಗೋಷ್ಠಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಂಗೀತಗಾರ ಲೇಖಕ ಶ್ರೀಶ ಜೋಶಿ ಅವರು ಶಾಸ್ತ್ರೀಯ ಸಂಗೀತದ ವಿವಿಧ ಆಯಾಮಗಳನ್ನು ಪರಿಚಯಿಸುವಾಗ ಭೈರವಿ ರಾಗಕ್ಕೆ ಎದ್ದು ನಿಂತಿದ್ದ ಹುಲ್ಲಿನ ನೈಜ್ಯ ಕಥೆ ವಿವರಿಸಿದರು.
ಶಾಸ್ತ್ರೀಯ ಸಂಗೀತದ ಮಹತ್ವ ವಿವರಿಸುತ್ತಲೇ ಘಟನೆಯೊಂದನ್ನು ಸ್ಮರಿಸಿಕೊಂಡ ಶ್ರೀಶ ಜೋಶಿ, ‘ಪ್ರತಿಯೊಂದು ಸ್ವರವೂ ನಿಗದಿತ ಸಮಯದಲ್ಲಿ ಜಾಗೃತಗೊಳಿಸುವ ಶಕ್ತಿ ಹೊಂದಿದೆ. ಸಂಗೀತದಲ್ಲಿ ಸಮಯ ಚಕ್ರ ಮುಖ್ಯ ಮತ್ತು ಪರಿಣಾಮಕಾರಿ. 1989ರಲ್ಲಿ ಹರಿಪ್ರಸಾದ್ ಚೌರಾಸಿಯಾ ಅವರು ಬೆಳಿಗ್ಗೆ ಮೂರು ಗಂಟೆ ವೇಳೆಗೆ ಭೈರವಿ ರಾಗದಲ್ಲಿ ಕೊಳಲು ನುಡಿಸಿದರು. ಈ ರಾಗದ ಪ್ರಭಾವದಿಂದ ಮಲಗಿದ್ದ ಹುಲ್ಲು ಎದ್ದು ನಿಂತಿದ್ದನ್ನು ಕಣ್ಣಾರೆ ಕಂಡಿದ್ದೇವೆ’ ಎಂದು ವಿವರಿಸಿದರು.
ಭೈರವಿ ರಾಗವು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಪದ್ಧತಿಯಲ್ಲಿ ಒಂದು ಪ್ರಮುಖ ರಾಗವಾಗಿದೆ. ಇದನ್ನು ಬೆಳಗಿನ ರಾಗವೆಂದು ಪರಿಗಣಿಸಲಾಗುತ್ತದೆ ಮತ್ತು ಇದು ಭೈರವಿ ಥಾಟ್‌ಗೆ ಸೇರಿದೆ. ಕರ್ನಾಟಕ ಸಂಗೀತದಲ್ಲೂ ಭೈರವಿ ರಾಗವಿದೆ, ಆದರೆ ಅದು ಹಿಂದೂಸ್ತಾನಿ ಭೈರವಿಯಂತೆಯೇ ಇರುವುದಿಲ್ಲ.
ಭೈರವಿ ರಾಗವು ಅತ್ಯಂತ ಭಾವಪೂರ್ಣ ರಾಗವೆಂದು ಪರಿಗಣಿಸಲಾಗಿದೆ ಮತ್ತು ಇದು ವ್ಯಕ್ತಿಯಲ್ಲಿ ಆಳವಾದ ಭಾವನೆಗಳನ್ನು ಉಂಟುಮಾಡುತ್ತದೆ. ಇದನ್ನು ಬೆಳಗಿನ ರಾಗವಾಗಿ ಅಥವಾ ಕಚೇರಿಯ ಕೊನೆಯ ರಾಗವಾಗಿ ಹಾಡುವ ಸಂಪ್ರದಾಯ ಹೆಚ್ಹು ಬಳಕೆಯಲ್ಲಿದೆ. ಭೈರವಿ ಕೇವಲ ದಿನದ ಸಮಯಾಧಾರಿತವಾಗಿ ಎಲ್ಲಾ ಋತುಮಾನದಲ್ಲಿಯೂ ಹಾಡಲು ಯೋಗ್ಯವಾಗಿದೆ.
,ನ್ಯೂಯಾರ್ಕ್‌ನ ಟೈಮ್ಸ್ ಸ್ಕ್ವೇರ್‌ನಲ್ಲಿ ಗುಂಡಿನ ದಾಳಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


