ನಿರ್ದೇಶಕ ಓಂ ಪ್ರಕಾಶ್ ರಾವ್ ʻಫೀನಿಕ್ಸ್ʼ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಇದು ನಿಜ ಘಟನೆಗಳನ್ನ ಆಧರಿಸಿದ ಸಿನಿಮಾವಾಗಿದೆ.ನಿಮಿಕಾ ರತ್ನಾಕರ್ ನಟಿಸುತ್ತಿದ್ದಾರೆ. ʻಫೀನಿಕ್ಸ್ʼ ಸಿನಿಮಾ ಕುರಿತು ಮಾಧ್ಯಮದ ಜೊತೆಗೆ ಮಾತನಾಡುವಾಗ ಓಂ ಪ್ರಕಾಶ್ ರಾವ್ ಅವರು ಹಂಚಿಕೊಂಡಿದ್ದಾರೆ ಆಗ ದರ್ಶನ್ ಕುರಿತು ಹಲವಾರು ವಿಷಯಗಳನ್ನು ಹೇಳಿದ್ದಾರೆ.
ನಾನು ಈ ಸಿನಿಮಾವನ್ನ ದರ್ಶನ್ ಅವರಿಗಾಗಿ ರೆಡಿ ಮಾಡಿದ್ದೆ. ಆದರೆ ಕೆಲ ಕಾರಣಗಳಿಂದ ಅವರು ಈ ಸಿನಿಮಾ ಮಾಡಲು ಆಗಲಿಲ್ಲ. ದರ್ಶನ್ ಜೊತೆ 6 ಸಿನಿಮಾ ಮಾಡಿದ್ದೇನೆ. ದರ್ಶನ್ ನನಗೆ ಏನ್ ಕಾಸ್ಟ್ಯೂಮ್, ಯಾವಾಗ ಶೂಟಿಂಗ್ ಶುರುವಾಗೋದು, ಯಾವಾಗ ಬರಬೇಕು ಎಂದು ಮಾತ್ರ ಕೇಳುತ್ತಾರೆ. ಆದರೆ ದರ್ಶನ್ ಯಾವತ್ತೂ ನನ್ನ ಬಳಿ ಕಥೆ ಕೇಳಿಲ್ಲ.ಅವರಿಗೆ ಕತೆಯೇ ಗೊತ್ತಿಲ್ಲ. ಅವರು ನನ್ನ ಮೇಲೆ ಅಪಾರ ನಂಬಿಕೆ ಇಡುತ್ತಾರೆ, ಅಷ್ಟು ಬೆಲೆ ಕೊಡುತ್ತಾರಲ್ಲ ಎಂಬ ಕಾರಣದಿಂದ ನಾನು ಉತ್ತಮ ಸಿನಿಮಾ ಮಾಡಿದ್ದೇನೆ. ಆ ಸಿನಿಮಾಗಳಿಂದ ಅವರಿಗೆ ಕಮರ್ಷಿಯಲ್ ಹಿಟ್ ಸಿಕ್ಕಿದೆ ಎನ್ನುವುದು ನನಗೆ ಖುಷಿ.
ನಟ ದರ್ಶನ್ ಅವರದ್ದು ಸೈಲೆಂಟ್ ವ್ಯಕ್ತಿತ್ವ. ಹೃದಯದಿಂದ ತುಂಬಾ ಒಳ್ಳೆಯ ವ್ಯಕ್ತಿ. ವಿಧಿ ಆಟೋವೋ ಏನೋ ಗೊತ್ತಿಲ್ಲ. ದರ್ಶನ್ ಅವರು ಜೈಲಿನಲ್ಲಿ ಇರೋದನ್ನ ನೋಡಿದರೆ ನಿಜಕ್ಕೂ ನೋವಾಗುತ್ತದೆ ಎಂದು ಬೇಸರಪಟ್ಟಿದ್ದಾರೆ ಓಂ ಪ್ರಕಾಶ್.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


