ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲ್ಲೂಕಿನಲ್ಲಿ ತಡವಾಗಿ ಬೆಳಕಿಗೆ ಬಂದಿರುವ ಬೆಚ್ಚಿಬೀಳಿಸುವ ಘಟನೆಯಲ್ಲಿ, ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದಾಳೆಂಬ ಕಾರಣಕ್ಕೆ ತಾಯಿ ಗಂಗಮ್ಮ (36) ಮತ್ತು ಆಕೆಯ ಪ್ರಿಯಕರ ಅಣ್ಣಪ್ಪ (40) ಸೇರಿ ತಮ್ಮ ನಾಲ್ಕು ವರ್ಷದ ಹೆಣ್ಣು ಮಗು ಪ್ರಿಯಾಂಕಾವನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ.
ಆಗಸ್ಟ್ 5 ರಂದು ಈ ಕೃತ್ಯ ಎಸಗಿದ ಆರೋಪಿಗಳು, ಬಳಿಕ ಮಗುವಿನ ದೇಹವನ್ನು ಹಾವೇರಿ ತಾಲ್ಲೂಕಿನ ಕುರಗುಂದ ಬಳಿಯ ಕಾಲುವೆ ಬಳಿ ಸುಟ್ಟು ಹಾಕಲು ಯತ್ನಿಸಿದ್ದರು. ಬಳಿಕ ಹಾವೇರಿ ತಾಲೂಕಿನ ಕುರಗುಂದ ಗ್ರಾಮದ ತುಂಗಾ ಮೇಲ್ದಂಡೆ ಯೋಜನೆಯ ಕಾಲುವೆ ಬಳಿ ಸುಟ್ಟು ಹಾಕಲು ಪ್ರಯತ್ನಿಸಿದ್ದರು.
ಬಾಲಕಿಯ ಅರ್ಧ ಸುಟ್ಟ ದೇಹ ಪತ್ತೆಯಾದ ನಂತರ, ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಅದನ್ನು ಅಪರಿಚಿತ ಶವವೆಂದು ಪರಿಗಣಿಸಿ ಅಂತ್ಯಸಂಸ್ಕಾರ ನಡೆಸಿದ್ದರು. ಈ ಘಟನೆ ನಡೆದ ಕೆಲವು ದಿನಗಳ ಬಳಿಕ, ಆರೋಪಿ ಗಂಗಮ್ಮಳ ಪತಿ ಮಂಜುನಾಥ್ ತನ್ನ ಮಗಳನ್ನು ಹಿಂದಿರುಗಿಸುವಂತೆ ಬೇಡಿಕೊಂಡಿದ್ದನು.
“ನೀನು ಆತನೊಂದಿಗೆ ಇರು, ಆದರೆ ನನ್ನ ಮಗಳನ್ನು ನನಗೆ ಕೊಟ್ಟುಬಿಡು” ಎಂದು ಪತಿ ಮಂಜುನಾಥ್ ಪಟ್ಟು ಹಿಡಿದಿದ್ದನು. ಆಗ ಗಂಗಮ್ಮ ತನ್ನ ಮಗಳು ಮೈಸೂರಿನಲ್ಲಿದ್ದು, ಅನಾರೋಗ್ಯದಿಂದ ಆಸ್ಪತ್ರೆಯಲ್ಲಿದ್ದಾಳೆ ಎಂದು ಸುಳ್ಳು ಹೇಳಿ, ಒಂದು ತಿಂಗಳು ಕಾಲ ಕಳೆಯಲು ಪ್ರಯತ್ನಿಸಿದ್ದಳು.
ಇದರಿಂದ ಅನುಮಾನಗೊಂಡ ಮಂಜುನಾಥ್ ಪೊಲೀಸರಿಗೆ ದೂರು ನೀಡಿದಾಗ, ತನಿಖೆ ವೇಳೆ ಈ ಘೋರ ಕೃತ್ಯ ಬೆಳಕಿಗೆ ಬಂದಿದೆ. ಸದ್ಯ ಪೊಲೀಸರು ಇಬ್ಬರೂ ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮದ್ದೂರು: ಇಂದು ಭವ್ಯ ಸಾಮೂಹಿಕ ಗಣೇಶ ವಿಸರ್ಜನೆ 20 ಸಾವಿರಕ್ಕೂ ಹೆಚ್ಚು ಭಕ್ತರ ನಿರೀಕ್ಷೆ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


