ಮಂಡ್ಯ ಸೌಹಾರ್ದತೆಯಿಂದ ಸರ್ವ ಧರ್ಮೀಯರು ಒಗ್ಗಟಿನಿಂದ ಬಾಳಿ ಬದುಕುತ್ತಿದ್ದ ಚಂದದ ಸಕ್ಕರೆಯ ನಾಡಾಗಿತ್ತು. ಆದರೆ ಇದೀಗ ಅದೇ ಮಂಡ್ಯ ಕೋಮುಗಲಭೆಯಿಂದ ಒಡೆದುಹೋಗಿದೆ. ಹಿಂದೂ – ಮುಸ್ಲಿಂ ಗಲಾಟೆಗಳು ನಡೆದ ಹಲವು ಪ್ರಸಂಗಗಳು ನಡೆದಿವೆ.
ಸದ್ಯ ಮದ್ದೂರು ಪಟ್ಟಣದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ಗಲಭೆ ಇದಕ್ಕೆ ಸದ್ಯ ತಾಜಾ ಉದಾಹರಣೆಯಾಗಿದೆ. ಹೌದು, ಮದ್ದೂರಿನಲ್ಲಿ ಕಿಡಿಗೇಡಿಗಳು ಎಸಗಿರುವ ಕೃತ್ಯ ಪಟ್ಟಣದಲ್ಲಿ ಬೂದಿ ಮುಚ್ಚಿದ ಕೆಂಡದಂತಹ ವಾತಾವರಣವನ್ನು ನಿರ್ಮಿಸಿದೆ.
ಹೀಗೆ ಮಂಡ್ಯದಂತಹ ಜಿಲ್ಲೆಯಲ್ಲಿ ಕೋಮುಗಲಭೆ ಎಂಬ ಸುದ್ದಿಯನ್ನು ಕೇಳಿಯೇ ಹಲವರು ಆಶ್ಚರ್ಯಕ್ಕೊಳಗಾಗಿದ್ದಾರೆ. ಎಲ್ಲವೂ ಸರಿಯಿದ್ದ ಮಂಡ್ಯದಲ್ಲಿ ಇದೇನಾಯ್ತು? ಇದರ ಹಿಂದೆ ಯಾರಿದ್ದಾರೆ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ.
ಇದರ ಹಿಂದೆ ಕೋಮು ದ್ವೇಷ ಮಾತ್ರ ಇದೆಯಾ ಅಥವಾ ರಾಜಕೀಯ ಲಾಭಕ್ಕಾಗಿ ಈ ಕೃತ್ಯಗಳನ್ನು ಉದ್ದೇಶಪೂರ್ವಕವಾಗಿ ಎಸಗಲಾಗಿದೆಯಾ ಎಂಬ ಗಂಭೀರ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿವೆ.
ಇದೇ ಸಮಯದಲ್ಲಿ ಐಸ್‌ಕ್ಯಾಂಡಿ ಗೋಪಾಲ ಎಂಬ ಎಕ್ಸ್ ಖಾತೆಯಿಂದ ಕಳೆದ ವರ್ಷ ಜುಲೈ 26ರಂದು ಬಂದಿದ್ದ ಟ್ವೀಟ್ ಒಂದು ಭಾರೀ ವೈರಲ್ ಆಗಿದೆ. ಈ ವ್ಯಕ್ತಿ ಮಂಡ್ಯದಲ್ಲಿ ಕೋಮುಗಲಭೆ ಶುರುವಾಗಲಿದೆ ಎಂದು ಅಂದೇ ಹೇಳಿದ್ದ ಎಂದು ನೆಟ್ಟಿಗರು ಆ ಟ್ವೀಟ್‌ನ ಸ್ಕ್ರೀನ್‌ಶಾಟ್ ಹಂಚಿಕೊಳ್ಳುತ್ತಿದ್ದಾರೆ.
ಅದೇ ಜುಲೈ 26, 2024ರಂದು ಅಣುಶಕ್ತಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್ ಮಂಡ್ಯ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಲಿಥಿಯಂ ಸಂಪನ್ಮೂಲ ಇರುವುದನ್ನು ಪರಮಾಣು ಖನಿಜ ನಿರ್ದೇಶನಾಲಯ ಪತ್ತೆಹಚ್ಚಿದೆ ಎಂದು ತಿಳಿಸಿದ್ದರು.
ಈ ಸುದ್ದಿ ಕುರಿತಾಗಿ ಬಂದಿದ್ದ ಪೋಸ್ಟ್ ಒಂದನ್ನು ಶೇರ್ ಮಾಡಿಕೊಂಡಿದ್ದ ಐಸ್‌ಕ್ಯಾಂಡಿ ಗೋಪಾಲ ಎಂಬ ಎಕ್ಸ್ ಬಳಕೆದಾರ ʼಭವಿಷ್ಯದ ಚಟುವಟಿಕೆಗಳ ಯೋಜನೆʼ ಎಂಬ ತಲೆಬರಹದಡಿಯಲ್ಲಿ ʼಇದ್ದಕ್ಕಿದ್ದಂತೆ ಮಂಡ್ಯದಲ್ಲಿ ಹಿಂದೂಗಳೆಲ್ಲ ಅಪಾಯಕ್ಕೆ ಸಿಲುಕಿಹಾಕಿಕೊಳ್ಳುತ್ತಾರೆ ಹಾಗೂ ದೊಡ್ಡ ಕೋಮುಗಲಭೆ ಉಂಟಾಗಲಿದೆʼ ಎಂದು ಬರೆದುಕೊಂಡಿದ್ದ.
ಅಲ್ಲದೇ ಬಿಜೆಪಿಯು ಜೆಡಿಎಸ್ ಉಪಯೋಗಿಸಿಕೊಂಡು ಜನರ ಮತಗಳನ್ನು ತಮ್ಮ ಪರ ಬದಲಿಸಿಕೊಂಡು ಜೆಡಿಎಸ್ ಪಕ್ಷವನ್ನು ನುಂಗಿ ಹಾಕಲಿದೆ ಎಂದೂ ಸಹ ಉಲ್ಲೇಖಿಸಿದ್ದ. ಜತೆಗೆ ಬಿಜೆಪಿ ಅಧಿಕಾರವನ್ನು ಹಿಡಿದ ಕೂಡಲೇ ಮಾರ್ವಾಡಿಗಳಿಗೆ ರೆಡ್ ಕಾರ್ಪೆಟ್ ಹಾಸಲಿದೆ ಎಂದು ಬರೆದುಕೊಂಡು ಲಿಥಿಯಂ ಸಂಪನ್ಮೂಲ ಪತ್ತೆಯಾಗಿರುವುದು ಇಷ್ಟಕ್ಕೆಲ್ಲ ಕಾರಣವಾಗಬಹುದು ಎಂದು ಊಹಿಸಿದ್ದ.
ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್‌ಗೆ ಪರಪ್ಪನ ಅಗ್ರಹಾರ ಜೈಲೇ ಗತಿ
ಎಐ ಅಡ್ವೋಕೇಟ್ ಅಸಿಸ್ಟೆಂಟ್ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


