Monday, August 31, 2026
spot_img
More
    spot_img
    HomeLatest newsಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ: ಹಳದಿ ಮಾರ್ಗದಲ್ಲಿ ಪ್ರತಿ 19 ನಿಮಿಷಕ್ಕೊಂದು ರೈಲು

    ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ: ಹಳದಿ ಮಾರ್ಗದಲ್ಲಿ ಪ್ರತಿ 19 ನಿಮಿಷಕ್ಕೊಂದು ರೈಲು

    ಬೆಂಗಳೂರಿನ ಮೆಟ್ರೋ ಪ್ರಯಾಣಿಕರಿಗೆ ಸಂತಸದ ಸುದ್ದಿ! ನಗರದ ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರದವರೆಗೆ ಸಂಚರಿಸುವ ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ ನಾಲ್ಕನೇ ರೈಲು ಸೇರ್ಪಡೆಯಾಗುತ್ತಿದೆ. ಇದರಿಂದಾಗಿ ರೈಲುಗಳ ಸಂಚಾರದ ಅವಧಿಯು ಗಣನೀಯವಾಗಿ ಕಡಿಮೆಯಾಗಲಿದೆ. ಈ ಬಗ್ಗೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಅಧಿಕೃತ ಪ್ರಕಟಣೆಯನ್ನು ಹೊರಡಿಸಿದೆ.

    Advertisement

    ಸೆಪ್ಟೆಂಬರ್ 10, ಬುಧವಾರದಿಂದ ಜಾರಿಗೆ ಬರುವ ಹೊಸ ನಿಯಮಗಳು ಇಲ್ಲಿವೆ,ಸಂಚಾರ ಅವಧಿಯಲ್ಲಿ ಇಳಿಕೆ ಇದುವರೆಗೆ 25 ನಿಮಿಷಗಳಿಗೊಮ್ಮೆ ಬರುತ್ತಿದ್ದ ರೈಲುಗಳು, ಈಗ 19 ನಿಮಿಷಗಳಿಗೊಮ್ಮೆ ಸಂಚರಿಸಲಿವೆ. ಇದರಿಂದಾಗಿ ಪ್ರಯಾಣಿಕರಿಗೆ ಕಾಯುವ ಸಮಯ ಗಣನೀಯವಾಗಿ ಕಡಿಮೆಯಾಗಲಿದೆ.

    ಬೆಳಗ್ಗೆ ಬೇಗ ಆರಂಭ ಪ್ರಯಾಣಿಕರ ಅನುಕೂಲಕ್ಕಾಗಿ, ಮೆಟ್ರೋ ಸಂಚಾರದ ಸಮಯವನ್ನು ಬದಲಾಯಿಸಲಾಗಿದೆ.ಸೋಮವಾರದಿಂದ ಶನಿವಾರದವರೆಗೆ ಮೊದಲ ರೈಲು ಬೆಳಗ್ಗೆ 6 ಗಂಟೆಗೆ ಸಂಚಾರ ಆರಂಭಿಸುತ್ತದೆ.ಬೆಳಗ್ಗೆ 7 ಗಂಟೆಗೆ ಎಂದಿನಂತೆ ಸಂಚಾರ ಆರಂಭವಾಗಲಿದೆ.

    ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರದವರೆಗಿನ ಹಳದಿ ಮಾರ್ಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಐಟಿ ಉದ್ಯೋಗಿಗಳು ಪ್ರಯಾಣಿಸುತ್ತಾರೆ. ಬೊಮ್ಮಸಂದ್ರದ ಸುತ್ತಮುತ್ತ ಅನೇಕ ಐಟಿ ಕಂಪನಿಗಳಿವೆ. ಈ ಹೊಸ ರೈಲು ಸೇರ್ಪಡೆಯು ದಟ್ಟಣೆಯನ್ನು ಕಡಿಮೆ ಮಾಡುವುದರಿಂದ ಐಟಿ ಉದ್ಯೋಗಿಗಳು ಸೇರಿದಂತೆ ಈ ಮಾರ್ಗದ ಎಲ್ಲಾ ಪ್ರಯಾಣಿಕರಿಗೆ ಅನುಕೂಲವಾಗಲಿದೆ.

    ಮೊದಲ ರೈಲು ಬೆಳಗ್ಗೆ ಬೇಗನೆ ಶುರುವಾಗುತ್ತಿರುವುದರಿಂದ, ಕಚೇರಿಗೆ ತೆರಳುವವರು ನಿರಾಳರಾಗಿದ್ದಾರೆ.ಈ ಹೊಸ ರೈಲಿನ ಸೇರ್ಪಡೆಯು ಬೆಂಗಳೂರಿನ ಮೆಟ್ರೋ ವ್ಯವಸ್ಥೆಯಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದ್ದು, ಪ್ರಯಾಣವನ್ನು ಮತ್ತಷ್ಟು ಸುಗಮಗೊಳಿಸಲಿದೆ.

    ಹೊಸ ವೇಳಾಪಟ್ಟಿ ಹೀಗಿದೆ:

    ಮೊದಲ ರೈಲು ಸಮಯ:

    ಸೋಮವಾರದಿಂದ ಶನಿವಾರದವರೆಗೆ: ಬೆಳಿಗ್ಗೆ 6:00 ಗಂಟೆಗೆ ವಾಣಿಜ್ಯ ಸೇವೆ ಆರಂಭವಾಗಲಿದೆ. (ಸೆಪ್ಟೆಂಬರ್ 9ರ ವರೆಗೆ ಇದು 6:30ಕ್ಕೆ ಇತ್ತು)

    ಭಾನುವಾರದಂದು: ಎಂದಿನಂತೆ ಬೆಳಿಗ್ಗೆ 7:00 ಗಂಟೆಗೆ ಮೊದಲ ರೈಲು ಹೊರಡಲಿದೆ.

    ಕೊನೆಯ ರೈಲು ಸಮಯ:

    ಆರ್.ವಿ. ರಸ್ತೆಯಿಂದ: ರಾತ್ರಿ 11:55 ಗಂಟೆಗೆ ಕೊನೆಯ ರೈಲು ಸಂಚರಿಸಲಿದೆ.

    ಬೊಮ್ಮಸಂದ್ರದಿಂದ: ರಾತ್ರಿ 10:42 ಗಂಟೆಗೆ ಕೊನೆಯ ರೈಲು ಹೊರಡಲಿದೆ.

    ಈ ಹೊಸ ವೇಳಾಪಟ್ಟಿಯು ಹಳದಿ ಮಾರ್ಗದಲ್ಲಿ ಪ್ರಯಾಣಿಸುವ ಐಟಿ ಉದ್ಯೋಗಿಗಳು ಸೇರಿದಂತೆ ಎಲ್ಲರಿಗೂ ಅನುಕೂಲ ಕಲ್ಪಿಸಲಿದೆ. ಈ ಬದಲಾವಣೆಗಳನ್ನು ಗಮನದಲ್ಲಿಟ್ಟುಕೊಂಡು ನಿಮ್ಮ ಪ್ರಯಾಣವನ್ನು ಯೋಜಿಸಿಕೊಳ್ಳಿ.

    ಭಾರತದ ನೂತನ ಉಪರಾಷ್ಟ್ರಪತಿ: NDA ಅಭ್ಯರ್ಥಿ ಸಿ.ಪಿ. ರಾಧಾಕೃಷ್ಣನ್ ಭರ್ಜರಿ ಗೆಲುವು


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading