ಬೆಂಗಳೂರು: ತಮ್ಮ ನೇರ ನುಡಿಗಳಿಂದಲೇ ಆರಂಭದಲ್ಲಿ ಭಾರೀ ಸದ್ದು ಮಾಡಿದ್ದ ಬಸನಗೌಡ ಪಾಟೀಲ್ ಯತ್ನಾಳ್ಗೆ ಇದೀಗ ಅವರ ಮಾತುಗಳೇ ಮುಳ್ಳಾಗಿ ಪರಿಣಮಿಸಿದಂತಿದೆ. ತಮ್ಮ ಪಕ್ಷದವರ ವಿರುದ್ಧವೇ ಸಾಲು ಸಾಲು ಹೇಳಿಕೆಗಳನ್ನು ನೀಡಿ ಪಕ್ಷದಿಂದ ಉಚ್ಛಾಟನೆಯಾದ ಯತ್ನಾಳ್ ತಮ್ಮ ಮಾತಿನ ವರಸೆಯನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ.
ಇನ್ನು ಯತ್ನಾಳ್ ವಿರುದ್ಧ ಗ್ಯಾರಂಟಿ ನ್ಯೂಸ್ನ ರಾಧಾ ಹಿರೇಗೌಡರ್ ಕಿಡಿಕಾರಿದ್ದು, ಆ ವಿಡಿಯೊವೊಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಯತ್ನಾಳ್ ವ್ಯಕ್ತಿಯೊಬ್ಬರಿಗೆ ತಾಯಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ಕಿಡಿಕಾರಿರುವು ರಾಧಾ ಹಿರೇಗೌಡರ್ ʼಏನ್ರೀ ತಾಯಿನಿಂದನೆ ಮಾಡುವುದು ನೀವು. ನಾನು ಒಬ್ಬಳು ಹೆಣ್ಣುಮಗಳಾಗಿ ಈ ಮಾತನ್ನು ಹೇಳಬಾರದು. ಯಾರಿಗೆ ಬೈತೀರಿ ನೀವು? ತಾಯಿಗೆ ಬೈತೀರಿ? ಯಾರ ತಾಯಿಗೆ ಬೈತೀರಿ? ನೀವು ತಾಯಿ ಹೊಟ್ಟೆಯಲ್ಲಿ ಹುಟ್ಟಿಲ್ವಾ? ಮಾತು ಮಾತಿಗೆ ನೀವು ಉತ್ತರ ಕರ್ನಾಟಕದವರಾಗಿರಬಹುದು. ಸಾರ್ವಜನಿಕವಾಗಿ ಹೇಗೆ ಮಾತನಾಡಬೇಕು ಎಂದು ನಾಲಿಗೆ ಮೇಲೆ ಹಿಡಿತ ಇರಲಿ. ನಾಲಿಗೆ ಮೇಲೆ ಹಿಡಿತ ಇಲ್ಲದೇ ಇರೋದಕ್ಕೆ ಬಿಜೆಪಿಯವರು ನಿಮ್ಮನ್ನು ಹೊರಗಟ್ಟಿರುವುದುʼ ಎಂದು ಆಕ್ರೋಶ ಹೊರಹಾಕಿದ್ದಾರೆ.
ಇನ್ನು ಈ ವಿಡಿಯೊಗೆ ಪ್ರತಿಕ್ರಿಯಿಸಿರುವ ನೆಟ್ಟಿಗರು ಯತ್ನಾಳ್ಗೆ ಸಾರ್ವಜನಿಕವಾಗಿ ಹೇಗಿರಬೇಕು ಎಂಬ ಪರಿಜ್ಞಾನವಿಲ್ಲ, ಮಾತಿನ ಚಪಲ ಹೆಚ್ಚು, ಇವರಿಗೆಲ್ಲ ಆ ಕ್ಷೇತ್ರದ ಜನ ಮತ ಹೇಗೆ ಹಾಕಿದ್ದಾರೋ ಎಂದು ಕಿಡಿಕಾರಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


