ಮೈಸೂರು: ಕಾಲೇಜುಗಳಲ್ಲಿ ನಡೆಯುತ್ತಿದ್ದ ರ್ಯಾಂಗಿಂಗ್ ಇದೀಗ ಪ್ರಾಥಮಿಕ ಶಾಲೆಗಳಲ್ಲಿಯೂ ಆರಂಭವಾಗಿದೆ. ಮೈಸೂರಿನ ಜಯಲಕ್ಷ್ಮಿಪುರಂ ಸೇಂಟ್ ಜೋಸೆಫ್ ಶಾಲೆಯಲ್ಲಿ 13 ವರ್ಷದ ವಿದ್ಯಾರ್ಥಿ ಮೇಲೆ ಸಹಪಾಠಿಗಳೇ ರ್ಯಾಗಿಂಗ್ ಮಾಡಿರುವ ಘಟನೆ ನಡೆದಿದೆ.
ಕ್ಲಾಸ್ ಲೀಡರ್ ಆಗಿದ್ದ ವಿದ್ಯಾರ್ಥಿಗೆ ಇತರೆ ವಿದ್ಯಾರ್ಥಿಗಳು ಹಣ ಕೊಡುವಂತೆ ಒತ್ತಾಯಿಸುತ್ತಿದ್ದರಂತೆ. ಇನ್ನು ವಿದ್ಯಾರ್ಥಿ ಹೇಳುವ ಪ್ರಕಾರ ತಾನು ತರಗತಿಯ ಲೀಡರ್ ಆಗಿ ಅವರು ಗಲಾಟೆ ಮಾಡುತ್ತಿದ್ದದ್ದನ್ನು ಶಿಕ್ಷಕರಿಗೆ ಹೇಳಿದ್ದಕ್ಕೆ ಕೋಪಗೊಂಡು ತನ್ನ ಮೇಲೆ ಹಲ್ಲೆ ನಡೆಸಲಾಗಿದೆ.
ಎರಡು ದಿನಗಳ ಹಿಂದೆ ಶಾಲೆಯಲ್ಲಿ ವಾಶ್ ರೂಂಗೆ ಹೋಗಿದ್ದ ವಿದ್ಯಾರ್ಥಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.
ವಿದ್ಯಾರ್ಥಿಯ ಮರ್ಮಾಂಗಕ್ಕೆ ಒದ್ದು ಗಾಯಗೊಳಿಸಿದ್ದಾರೆ. ವಿದ್ಯಾರ್ಥಿ ಗಂಭೀರವಾಗಿ ಗಾಯಗೊಂಡಿದ್ದು, ಅಪೋಲೊ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವಿದ್ಯಾರ್ಥಿಗಳ ಕ್ರೌರ್ಯ ಎಷ್ಟಿದೆ ಎಂದರೆ ಗಾಯಗೊಂಡ ವಿದ್ಯಾರ್ಥಿ ಒಂದು ವೃಷಣವನ್ನೇ ಕಳೆದುಕೊಂಡಿದ್ದಾನೆ.
ಪೋಷಕರು ಶಾಲೆಯ ಆಡಳಿತ ಮಂಡಳಿ, ಮುಖ್ಯ ಶಿಕ್ಷಕರಿಗೆ ದೂರು ನೀಡಿದರೆ ಉಡಾಫೆ ಉತ್ತರ ನೀಡುತ್ತಿದ್ದಾರೆ. ಇದರಿಂದ ನೊಂದ ಪೋಷಕರು ಹಾಗೂ ಗಾಯಾಳು ವಿದ್ಯಾರ್ಥಿ ಪೊಲೀಸರಿಗೆ ದೂರು ನೀಡಿದ್ದಾರೆ.
ಕಾಂತಾರ ರೀತಿಯೇ ದೈವ ನಮ್ಮಪ್ಪನ್ನ ಉಳಿಸ್ತೀನಿ ಎಂದಿತ್ತು, ಈಗ ಎಲ್ಲಿ ಆ ದೈವ?; ಹರೀಶ್ ರಾಯ್ ಮಗನ ಆಕ್ರೋಶ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


