Monday, August 3, 2026
spot_img
More
    spot_img
    HomeEntertainmentನಾಳೆಯೇ ಡೆವಿಲ್ ರಿಲೀಸ್: ಇನ್ನೂ ತೆರೆಯದ ಮಲ್ಟಿಪ್ಲೆಕ್ಸ್ ಬುಕಿಂಗ್; ಕಲೆಕ್ಷನ್ ಗತಿಯೇನು?

    ನಾಳೆಯೇ ಡೆವಿಲ್ ರಿಲೀಸ್: ಇನ್ನೂ ತೆರೆಯದ ಮಲ್ಟಿಪ್ಲೆಕ್ಸ್ ಬುಕಿಂಗ್; ಕಲೆಕ್ಷನ್ ಗತಿಯೇನು?

    ಪ್ರತಿ ಬಾರಿಯ ಡಿಸೆಂಬರ್ ಹಾಗೆ ಈ ಬಾರಿಯ ಡಿಸೆಂಬರ್‌ನಲ್ಲೂ ಸಹ ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟರ ಚಿತ್ರಗಳು ಬಿಡುಗಡೆಯಾಗಲು ಸಜ್ಜಾಗಿವೆ. ದರ್ಶನ್ ನಟನೆಯ ದಿ ಡೆವಿಲ್, ಸುದೀಪ್ ನಟನೆಯ ಮಾರ್ಕ್ ಹಾಗೂ ಶಿವರಾಜ್‌ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ನಟನೆಯ 45 ಚಿತ್ರಗಳು ಇದೇ ತಿಂಗಳು ತೆರೆಗೆ ಬರುತ್ತಿವೆ.

    Advertisement

    ಇನ್ನು ಮೊದಲಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ದಿ ಡೆವಿಲ್ ನಾಳೆ ( ಡಿಸೆಂಬರ್ 11 ) ಬಿಡುಗಡೆಯಾಗುತ್ತಿದೆ. ಮಿಲನ ಖ್ಯಾತಿಯ ಪ್ರಕಾಶ್ ವೀರ್ ನಿರ್ದೇಶನದ ಈ ಚಿತ್ರ ನಾಡಿದ್ದು ಅಂದರೆ ಡಿಸೆಂಬರ್ 12ರಂದು ಬಿಡುಗಡೆಯಾಗಬೇಕಿತ್ತು. ಆದರೆ ಚಿತ್ರತಂಡ ಅಭಿಮಾನಿಗಳಿಗಾಗಿ ಒಂದು ದಿನ ಮುಂಚಿತವಾಗಿ ಚಿತ್ರವನ್ನು ಬೆಳ್ಳಿತೆರೆ ಮೇಲೆ ತರಲು ಮುಂದಾಗಿದ್ದಾರೆ.

    ದರ್ಶನ್ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವಾಗಲೇ ಚಿತ್ರತಂಡ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದು, ಸಾರಥಿ ಬಳಿಕ ಇಂಥದ್ದೊಂದು ದೃಶ್ಯ ಮತ್ತೊಮ್ಮೆ ಸೃಷ್ಟಿಯಾಗಿದೆ. ಅಂದಹಾಗೆ ದರ್ಶನ್ ಕೊಲೆ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದರೂ ಸಹ ಚಿತ್ರ ಬಿಡುಗಡೆಯಲ್ಲಿ ಯಾವುದೇ ವ್ಯತ್ಯಾಸವಾಗದಿರುವ ಜವಾಬ್ದಾರಿಯನ್ನು ಹೊತ್ತುಕೊಂಡಿರುವ ಅಭಿಮಾನಿಗಳು ಅದರಲ್ಲಿ ಯಶಸ್ಸು ಸಾಧಿಸಿದ್ದಾರೆ.

    ನಾಳೆ ಚಿತ್ರದ ಬಿಡುಗಡೆಯಿದ್ದು, ಎಲ್ಲೆಡೆ ಸಿಂಗಲ್ ಸ್ಕ್ರೀನ್‌ಗಳು ತುಂಬಿ ತುಳುಕುತ್ತಿವೆ. ಬಹುತೇಕ ಎಲ್ಲ ಕಡೆ ಸಿಂಗಲ್ ಸ್ಕ್ರೀನ್‌ಗಳಲ್ಲಿ ಮೊದಲ ದಿನದ ಫಸ್ಟ್ ಶೋ ಸೋಲ್ಡ್‌ಔಟ್ ಆಗಿದೆ. ಆದರೆ ಇನ್ನೂ ಸಹ ಬೆಂಗಳೂರಿನಲ್ಲಾಗಲಿ ಅಥವಾ ಇತರೆ ನಗರಗಳಲ್ಲಾಗಲಿ ಪಿವಿಆರ್ ಹಾಗೂ ಐನಾಕ್ಸ್ ಪರದೆಗಳಲ್ಲಿ ಚಿತ್ರದ ಮುಂಗಡ ಬುಕಿಂಗ್ ಆರಂಭವಾಗಿಲ್ಲ.

    ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದ್ದರೂ ಸಹ ಮಲ್ಟಿಪ್ಲೆಕ್ಸ್ ಬುಕಿಂಗ್ ಆರಂಭವಾಗದೇ ಇರುವುದು ನಗರ ಪ್ರದೇಶಗಳ ಸಿನಿಮಾ ಪ್ರೇಕ್ಷಕರಲ್ಲಿ ನಿರೀಕ್ಷೆ ಮೂಡಿಸಿದ್ದು, ಇಂದು ಸಂಜೆಯೊಳಗೆ ಬುಕಿಂಗ್ ತೆರೆಯುವ ಸಾಧ್ಯತೆಗಳಿವೆ.

    ಇನ್ನು ಮಲ್ಟಿಪ್ಲೆಕ್ಸ್ ಬುಕಿಂಗ್ ಆರಂಭವಾಗದಿದ್ದರೂ ಸಹ ಸಿಂಗಲ್ ಸ್ಕ್ರೀನ್‌ಗಳಲ್ಲೇ ಡೆವಿಲ್ ಅಬ್ಬರ ಜೋರಾಗಿದ್ದು, ಇಂದು ( ಡಿಸೆಂಬರ್ 10 ) ಬೆಳಗ್ಗೆ 10 ಗಂಟೆ ಸಮಯಕ್ಕೆ ಡೆವಿಲ್ ಚಿತ್ರದ ಮುಂಗಡ ಬುಕಿಂಗ್ ರಾಜ್ಯದ್ಯಂತ 4 ಕೋಟಿ 60 ಲಕ್ಷ ರೂಪಾಯಿಗಳನ್ನು ದಾಟಿದೆ. ರಾಜ್ಯದ್ಯಂತ 660ಕ್ಕೂ ಹೆಚ್ಚು ಶೋಗಳು ಕೇವಲ ಸಿಂಗಲ್ ಪರದೆಗಳಲ್ಲಿ ಡೆವಿಲ್‌ಗಾಗಿ ಆಯೋಜನೆಯಾಗಿದ್ದು, 1 ಕೋಟಿ 78 ಲಕ್ಷಕ್ಕೂ ಹೆಚ್ಚು ಟಿಕೆಟ್‌ಗಳು ಮಾರಾಟವಾಗಿವೆ.

    ಆನ್‌ಲೈನ್‌ನಲ್ಲಿ ಆರೋಗ್ಯ ವಿಮೆ ಖರೀದಿಸುವ ಸಾಮಾನ್ಯ ತಪ್ಪುಗಳು


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading