ಭಾರತವು ಭಾಷೆ, ಸಂಸ್ಕೃತಿ ಮತ್ತು ಪಾಕಪದ್ಧತಿಯಲ್ಲಿ ಅಪಾರ ವೈವಿಧ್ಯಮಯ ದೇಶ. ದಕ್ಷಿಣದಲ್ಲಿ ಅಕ್ಕಿ ಪ್ರಧಾನವಾದರೆ, ಉತ್ತರದಲ್ಲಿ ಗೋಧಿ ಮತ್ತು ರೊಟ್ಟಿ ಪ್ರಬಲ. ಸಸ್ಯಾಹಾರ ಮತ್ತು ಮಾಂಸಾಹಾರವು ಪ್ರಾದೇಶಿಕವಾಗಿ ವಿಭಿನ್ನವಾಗಿದ್ದರೂ, ಭಾರತೀಯರ ಬಹುತೇಕ ಅಡುಗೆಮನೆಗಳಲ್ಲಿ ಒಂದು ವಸ್ತುವಿದೆ ಅದೇನೆಂದರೆ ಈರುಳ್ಳಿ! ಬೇಳೆಕಾಳು, ತರಕಾರಿ, ಚಟ್ನಿ, ಸಲಾಡ್ ಯಾವುದಕ್ಕೂ ಈರುಳ್ಳಿ ಬೇಕೇ ಬೇಕು.
ಆದರೆ, ಇಲ್ಲಿ ನಿಮಗೆ ಒಂದು ಆಶ್ಚರ್ಯಕರ ಸಂಗತಿ ಕಾದಿದೆ ಭಾರತದಲ್ಲಿ ಒಂದು ನಗರವಿದೆ, ಅಲ್ಲಿ ಈರುಳ್ಳಿಯನ್ನು ಬೆಳೆಯುವುದು, ಮಾರಾಟ ಮಾಡುವುದು ಮತ್ತು ಸೇವಿಸುವುದು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ! ಈರುಳ್ಳಿ ಇಲ್ಲದೆ ಅಡುಗೆ ಮಾಡುವುದನ್ನು ಕಷ್ಟ ಎಂದು ಭಾವಿಸುವವರಿಗೆ ಈ ಪ್ರದೇಶದ ನಿಯಮ ಒಂದು ದೊಡ್ಡ ಅಚ್ಚರಿ. ಆ ಧಾರ್ಮಿಕ ಮತ್ತು ಸಾತ್ವಿಕ ಪ್ರದೇಶ ಯಾವುದು ಎಂಬುದನ್ನು ಮುಂದೆ ತಿಳಿಯೋಣ.
ವೈವಿಧ್ಯತೆಯ ನಾಡು ಭಾರತದಲ್ಲಿ ಬಹುತೇಕ ಎಲ್ಲಾ ಅಡುಗೆಗಳಲ್ಲಿ ಈರುಳ್ಳಿ ಕಡ್ಡಾಯವಾಗಿದ್ದರೂ, ಜಮ್ಮು ಕಾಶ್ಮೀರದ ರಿಯಾಸತ್‌ನಲ್ಲಿರುವ ಕತ್ರಾ ನಗರದಲ್ಲಿ ಇದು ಸಂಪೂರ್ಣವಾಗಿ ನಿಷಿದ್ಧ. ಮಾತಾ ವೈಷ್ಣೋ ದೇವಿಯ ಯಾತ್ರೆಯ ಪ್ರಮುಖ ಪ್ರವೇಶ ದ್ವಾರವಾಗಿರುವ ಈ ಸ್ಥಳವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುತ್ತದೆ.
ಇಲ್ಲಿನ ಹೋಟೆಲ್, ರೆಸ್ಟೋರೆಂಟ್ ಅಥವಾ ಅಂಗಡಿಗಳಲ್ಲಿ ಈರುಳ್ಳಿ, ಬೆಳ್ಳುಳ್ಳಿ, ಮದ್ಯ ಮತ್ತು ಮಾಂಸಾಹಾರದ ಮಾರಾಟ, ಖರೀದಿ ಮತ್ತು ಸೇವನೆಗೆ ಅವಕಾಶವಿಲ್ಲ! ಈ ಕಠಿಣ ನಿಯಮಕ್ಕೆ ಕಾರಣ, ಹಿಂದೂ ಧರ್ಮದಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ದೇಹ ಮತ್ತು ಮನಸ್ಸಿನಲ್ಲಿ ಸೋಮಾರಿತನ ಹೆಚ್ಚಿಸುವ ‘ತಾಮಸಿಕ ಆಹಾರ’ ಎಂದು ಪರಿಗಣಿಸುವುದೇ ಆಗಿದೆ.
ಧಾರ್ಮಿಕ ಮಹತ್ವ ಮತ್ತು ಸಾತ್ವಿಕತೆಯನ್ನು ಕಾಪಾಡುವ ಉದ್ದೇಶದಿಂದ, ಸ್ಥಳೀಯರು ಮತ್ತು ಆಡಳಿತ ಮಂಡಳಿ ಈ ಸಂಪ್ರದಾಯವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದಾರೆ. ಈ ಕಾರಣದಿಂದಾಗಿ, ಕತ್ರಾದಲ್ಲಿ ಬಡಿಸುವ ಸಾತ್ವಿಕ ಭಕ್ಷ್ಯಗಳು ಈರುಳ್ಳಿ ಇಲ್ಲದಿದ್ದರೂ ರುಚಿ ಮತ್ತು ಪೌಷ್ಟಿಕತೆಯಲ್ಲಿ ವಿಶಿಷ್ಟವಾಗಿದ್ದು, ಲಕ್ಷಾಂತರ ಯಾತ್ರಿಕರನ್ನು ಆಕರ್ಷಿಸುತ್ತವೆ. ಕತ್ರಾ ಭಾರತದ ಸಾಂಸ್ಕೃತಿಕ ಶಿಸ್ತು ಮತ್ತು ಧಾರ್ಮಿಕ ಪರಂಪರೆಯ ಜೀವಂತ ಉದಾಹರಣೆಯಾಗಿದೆ.
ಕಟ್ರಾ (Katra) ನಗರವು ಮಾತಾ ವೈಷ್ಣೋದೇವಿಯ ದರ್ಶನ ಯಾತ್ರೆಯನ್ನು ಆರಂಭಿಸುವ ಪ್ರಮುಖ ಪವಿತ್ರ ಕ್ಷೇತ್ರವಾಗಿದೆ. ಹಿಂದೂಗಳ ಧಾರ್ಮಿಕ ಶ್ರದ್ಧೆ ಮತ್ತು ಈ ಸ್ಥಳದ ಪಾವಿತ್ರ್ಯತೆಯನ್ನು ಗಮನದಲ್ಲಿಟ್ಟುಕೊಂಡು, ಜಮ್ಮುವಿನ ಕತ್ರಾ ಪಟ್ಟಣದಲ್ಲಿ ಈರುಳ್ಳಿಯ ಬಳಕೆಯನ್ನು, ಮಾರಾಟವನ್ನು ಹಾಗೂ ಖರೀದಿಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ನಿಯಮವು ಕೇವಲ ಈರುಳ್ಳಿಗೆ ಮಾತ್ರವಲ್ಲದೆ ಸಾತ್ವಿಕತೆಯನ್ನು ಕಾಯ್ದುಕೊಳ್ಳಲು ಬೆಳ್ಳುಳ್ಳಿ, ಮದ್ಯ ಮತ್ತು ಮಾಂಸಾಹಾರಕ್ಕೂ ಅನ್ವಯಿಸುತ್ತದೆ.
ಎಲ್‌ಐಸಿ ಯಿಂದ ಡಬಲ್ ಧಮಾಕ: ₹2 ಕೋಟಿ ಕವರ್‌ಗೆ ‘ಬೀಮಾ ಕವಚ್’, ಉಳಿತಾಯದ ಜೊತೆಗೆ ರಕ್ಷಣೆಗೆ ‘ಪ್ರೊಟೆಕ್ಷನ್ ಪ್ಲಸ್’!
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


