ಪತ್ನಿ ನತಾಶಾರಿಂದ ವಿಚ್ಛೇದನ ಪಡೆದುಕೊಂಡ ಬಳಿಕ ಸ್ಟಾರ್ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಕ್ರಿಕೆಟ್‌ನತ್ತ ಹೆಚ್ಚು ಗಮನ ಹರಿಸಿ ಅತ್ಯುತ್ತಮ ಪ್ರದರ್ಶನವನ್ನೇ ನೀಡುತ್ತಿದ್ದಾರೆ. ಕೆಲ ಕಾಲ ಏಕಾಂಗಿ ಜೀವನ ನಡೆಸಿದ ಹಾರ್ದಿಕ್ ಪಾಂಡ್ಯ ಇತರ ಕ್ರಿಕೆಟಿಗರ ಹಾಗೆ ಮತ್ತೊಂದು ಸಂಬಂಧ ಬೆಳೆಸಲು ಮುಂದಾಗಿದ್ದಾರೆ.
ನತಾಶಾ ರೀತಿಯೇ ನಟಿ ಹಾಗೂ ಮಾಡೆಲ್ ಆಗಿರುವ ಮಹಿಕಾ ಶರ್ಮಾ ಜತೆ ಹಾರ್ದಿಕ್ ಪಾಂಡ್ಯ ಸದ್ಯ ಪ್ರೀತಿಯ ಹಂತದಲ್ಲಿದ್ದಾರೆ. ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಹಲವಾರು ಬಾರಿ ಒಟ್ಟಿಗೆ ಕಾಣಿಸಿಕೊಂಡಿರುವ ಪಾಂಡ್ಯ ಹಾಗೂ ಮಹಿಕಾ ಶರ್ಮಾ ಜೋಡಿ ಅಧಿಕೃತವಾಗಿ ಇನ್ನೂ ಏನನ್ನೂ ಘೋಷಿಸದೇ ಇದ್ದರೂ ಇಬ್ಬರೂ ಸಂಬಂಧದಲ್ಲಿದ್ದಾರೆ ಎಂಬುದನ್ನು ಅವರ ಇತ್ತೀಚಿನ ದಿನಗಳಲ್ಲಿ ಹಂಚಿಕೊಂಡ ಪೋಸ್ಟ್‌ಗಳೇ ಹೇಳುತ್ತಿವೆ.
ಹೀಗೆ ಮತ್ತೊಂದು ಹೊಸ ಅಧ್ಯಾಯ ಆರಂಭಿಸುವ ಹೊಸ್ತಿಲಲ್ಲಿರುವ ಹಾರ್ದಿಕ್ ಪಾಂಡ್ಯ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಇದೇ ಮಹಿಕಾ ಶರ್ಮಾ ಕುರಿತಾಗಿ ಸ್ಟೋರಿಯೊಂದನ್ನು ಹಂಚಿಕೊಂಡು ಪಾಪರಾಜಿಗಳ ವಿರುದ್ಧ ಕಿಡಿಕಾರಿದ್ದಾರೆ.
ಮುಂಬೈ ನಗರದಲ್ಲಿ ಪಾಪಾರಾಜಿಗಳ ಅಬ್ಬರ ಜೋರು. ಸೆಲೆಬ್ರಿಟಿಗಳು ಹೊಟೇಲ್, ಜಿಮ್ , ಏರ್‌ಪೋರ್ಟ್‌ಗಳಲ್ಲಿ ಕಾಣಿಸಿಕೊಂಡಾಗಲೆಲ್ಲ ಕ್ಯಾಮೆರಾ ತೆಗೆದುಕೊಂಡು ಆಗಮಿಸುವ ಪಾಪರಾಜಿಗಳು ಅವರ ವಿಡಿಯೊಗಳನ್ನು ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಾರೆ.
ಅದೇ ರೀತಿ ಮಹಿಕಾ ಶರ್ಮಾ ನಗರದ ಬಾಂದ್ರಾ ಪ್ರದೇಶದಲ್ಲಿರುವ ರೆಸ್ಟೋರೆಂಟ್ ಒಂದರಿಂದ ಹೊರಬಂದಿದ್ದಾರೆ. ಈ ವೇಳೆ ಪಾಪರಾಜಿಯೊಬ್ಬ ಆಕೆಯ ವಿಡಿಯೊವನ್ನು ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ. ಮಹಿಕಾ ಮೆಟ್ಟಿಲುಗಳನ್ನು ಇಳಿದು ಬರುವ ವಿಡಿಯೊ ಇದಾಗಿದ್ದು, ಖಾಸಗಿ ಅಂಗವನ್ನು ಸೆರೆ ಹಿಡಿದಕ್ಕಾಗಿ ಆತನಿಗೆ ನೆಟ್ಟಿಗರು ಟೀಕಿಸಿದ್ದರು.
ಪಾಂಡ್ಯ ಸಹ ಈ ಕುರಿತು ಬರೆದುಕೊಂಡಿದ್ದು, ‘ಸಾರ್ವಜನಿಕವಾಗಿ ಬದುಕುವುದರಿಂದ ನಮ್ಮ ದೈನಂದಿನ ಚಟುವಟಿಕೆ ಬಹಿರಂಗವಾಗುತ್ತದೆ ಎಂಬುದು ನನಗೆ ಅರ್ಥವಾಗುತ್ತದೆ. ಇದು ಜೀವನದ ಅಂಗವಾಗಿದ್ದು, ಆದರೆ ಇಂದು ನಡೆದ ಒಂದು ಘಟನೆ ಗೆರೆಯನ್ನು ದಾಟಿದೆ. ಮಹಿಕಾ ರೆಸ್ಟೋರೆಂಟ್‌ನಿಂದ ಹೊರಬರುತ್ತಿದ್ದ ವೇಳೆ ಯಾವೊಬ್ಬ ಮಹಿಳೆಯೂ ಸಹ ಕ್ಲಿಕ್ಕಿಸಿಕೊಳ್ಳಲು ಇಚ್ಛಿಸದ ಆಯಾಮದಲ್ಲಿ ಪಾಪಾರಾಜಿಯೊಬ್ಬ ವಿಡಿಯೊವನ್ನು ಮಾಡಿದ್ದಾನೆ. ಒದು ಖಾಸಗಿ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದು ವೈರಲ್ ಆಗುವ ವಿಷಯವಲ್ಲ, ಇದೊಂದು ಸಾಮಾನ್ಯ ಗೌರವದ ವಿಷಯ. ಮಹಿಳೆಯರು ಗೌರವಕ್ಕೆ ಅರ್ಹರು. ಎಲ್ಲರಿಗೂ ಮಿತಿಯಿದೆ. ಕಷ್ಟಪಟ್ಟು ಕೆಲಸ ಮಾಡುವ ಎಲ್ಲ ಮಾಧ್ಯಮದವರಿಗೂ ನನ್ನದೊಂದು ಮನವಿ. ಚಿತ್ರೀಕರಿಸುವಾಗ ತುಸು ನಿಗಾವಹಿಸಿ. ಎಲ್ಲವನ್ನೂ ಕ್ಲಿಕ್ಕಿಸುವ ಅಗತ್ಯವಿಲ್ಲ, ಎಲ್ಲ ಆಯಾಮದಲ್ಲೂ ಚಿತ್ರೀಕರಿಸುವ ಅಗತ್ಯವಿಲ್ಲ. ಮಾನವೀಯತೆಯನ್ನು ಉಳಿಸಿಕೊಳ್ಳೋಣ, ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ.
ಮಹಿಳಾ ನೌಕರರಿಗೆ ‘ಮುಟ್ಟಿನ ರಜೆ’ ನೀಡುವ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ತಡೆ!
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


