ಬೆಂಗಳೂರು: ಕಳೆದ ವರ್ಷ ಅಬ್ಬರದ ಮಳೆ ಹಾಗೂ ವಿಪರೀತಿ ಚಳಿ ಅನುಭವಿಸಿದ ಜನತೆಗೆ ಈ ಬಾರಿ ಜನವರಿ ಅಂತ್ಯದಿಂದಲೇ ಶೆಕೆಯ ಕಾಟ ಆರಂಭವಾಗಿತ್ತು. ಫೆಬ್ರವರಿ ತಿಂಗಳಿನಲ್ಲಿಯೇ ಏಪ್ರಿಲ್ ರೀತಿಯ ವಿಪರೀತ ಬಿಸಿಲಿನ ಅನುಭವವಾಗಿತ್ತು.
ಜೀವನ ಕಟ್ಟಿಕೊಳ್ಳಲು ಬೆಂಗಳೂರಿಗೆ ಬಂದಿರುವ ಜನತೆ ನಗರದ ವಾಹನಗಳ ಹೊಗೆ ಹಾಗೂ ಬಿಸಿಲ ಬೇಗೆಗೆ ಹೈರಾಣಾಗಿದ್ದರು. ಬೇಸಿಗೆ ಕಳೆದು ಮಳೆ ಯಾವಾಗ ಬರಲಿದೆ ಎಂಬ ಪ್ರಶ್ನೆಯನ್ನು ಮನಸ್ಸಲ್ಲೇ ಕೇಳಿಕೊಂಡಿದ್ದರು.
ಹೀಗೆ ಎಲ್ಲೆಡೆ ಬಿಸಿಲ ಝಳ ಹೆಚ್ಚಿದ್ದು, ಇಂದು ( ಮಾರ್ಚ್ 11 ) ನಗರದಲ್ಲಿ ಮಳೆ ಸುರಿದಿದೆ. ನಗರದ ಹೃದಯಭಾಗ ಮೆಜೆಸ್ಟಿಕ್, ಕೆಆರ್ ಮಾರ್ಕೆಟ್, ಶಾಂತಿನಗರ, ರಿಚ್ಮಂಡ್ ಸರ್ಕಲ್, ಕಾರ್ಪೋರೇಶನ್ ಭಾಗಗಳಲ್ಲಿ ವರುಣ ತಂಪೆರೆದಿದ್ದಾನೆ.
ಇನ್ನು ಹವಾಮಾನ ಇಲಾಖೆ ಕಳೆದೆರಡು ದಿನಗಳ ಹಿಂದೆಯೇ ಇನ್ನೆರಡು ದಿನಗಳಲ್ಲಿ ರಾಜ್ಯದ ಹಲವೆಡೆ ಮಳೆಯಾಗಲಿದೆ ಎಂದು ಹೇಳಿತ್ತು. ಅದರಂತೆ ಇದೀಗ ಸಿಲಿಕಾನ್ ಸಿಟಿಯಲ್ಲಿ ಮಳೆಯಾಗಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


