Wednesday, August 12, 2026
spot_img
More
    spot_img
    HomeTop Storyಎಷ್ಟು ದಿನ ನಮ್ದೇ ಹೆಣ್ಣುಮಕ್ಕಳನ್ನು ನೋಡ್ತೀರ ಬೇರೆ ಧರ್ಮದ ಹುಡುಗಿಯರ ಕಡೆನೂ ನೋಡ್ರಪ್ಪಾ; ಹಿಂದೂ ಯುವಕರಿಗೆ...

    ಎಷ್ಟು ದಿನ ನಮ್ದೇ ಹೆಣ್ಣುಮಕ್ಕಳನ್ನು ನೋಡ್ತೀರ ಬೇರೆ ಧರ್ಮದ ಹುಡುಗಿಯರ ಕಡೆನೂ ನೋಡ್ರಪ್ಪಾ; ಹಿಂದೂ ಯುವಕರಿಗೆ ಸೂಲಿಬೆಲೆ ಕರೆ!

    ಉಳ್ಳಾಲ: ಚಕ್ರವರ್ತಿ ಸೂಲಿಬೆಲೆ ಧರ್ಮಗಳ ಕುರಿತು ಭಾಷಣ ಮಾಡುವಾಗ ಅನ್ಯ ಧರ್ಮದ ಹುಡುಗಿಯನ್ನು ಉಲ್ಲೇಖಿಸುವ ಮೂಲಕ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ.

    Advertisement

    ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದಲ್ಲಿ ನಡೆದ ಮಂಗಳೂರಿನ ಕದ್ರಿ ಮಂಜುನಾಥ ಕ್ಷೇತ್ರದಿಂದ ಕುತ್ತಾರಿನ ಕೊರಗಜ್ಜ ಆದಿಕ್ಷೇತ್ರದವರೆಗೆ ನಡೆದ ‘ಕೊರಗಜ್ಜ ಆದಿಕ್ಷೇತ್ರಕ್ಕೆ ನಮ್ಮ ನಡೆ’ ಪಾದಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಚಕ್ರವರ್ತಿ ಸೂಲಿಬೆಲೆ ಮದುವೆಯಾಗಲು ಹುಡುಗಿ ಸಿಗದ ಹಿಂದೂ ಯುವಕರು ಅನ್ಯಧರ್ಮದ ಹುಡುಗಿಯರನ್ನು ಮದುವೆಯಾಗಿ ಎಂದು ಪ್ರಚೋದನಕಾರಿ ಭಾಷಣ ಮಾಡಿದ್ದಾರೆ.

    ‘ಸ್ವತಂತ್ರ ಬಂದಾಗಿನಿಂದ ಮತಾಂತರ ಆಗ್ತಾ ಇದೆ ಅಂತ ಮಾತನಾಡುತ್ತಲೇ ಇದ್ದೇವೆ. ಮತಾಂತರ ಆಗ್ತಿದೆ ಅಂತ ಎಷ್ಟು ದಿನ ಬಡಿದಾಡುವುದು? ಘರ್‌ವಾಪ್ಸಿ ಮಾಡೋದು ಹೇಗೆ ಅಂತ ಪ್ರತಿ ಮನೆಗೂ ಕಲಿಸಿಕೊಡೋಣ. ಮತಾಂತರ ಆದವರನ್ನು ಕೊರಗಜ್ಜನ ಸನ್ನಿಧಿಗೆ ಕರೆದುಕೊಂಡು ಬಂದು ಶುದ್ಧಿ ಮಾಡಿ. ಯಾವುದ್ಯಾವುದೋ ರೀಲ್ ಮಾಡೋ ತರುಣರು ಮತಾಂತರ ಆದವರನ್ನು ವಾಪಸ್ ತರುವ ಕುರಿತು ರೀಲ್ ಮಾಡಿ. ಮನೆ ಮನೆಯಲ್ಲಿಯೂ ಘರ್ ವಾಪ್ಸಿಯ ಬಗ್ಗೆ ಚರ್ಚೆ ನಡೆಯಬೇಕಿದೆ. ಎಲ್ಲಿಯವರೆಗೂ ಲವ್ ಜಿಹಾದ್ ಬಗ್ಗೆ ಮಾತನಾಡೋಣ. ಸ್ವಲ್ಪ ಬದಲಾವಣೆ ತರಣ. ನಮ್ಮ ಗಂಡು ಮಕ್ಕಳಿಗೂ ಹೇಳಣ. ಎಷ್ಟು ದಿನ ಅಂತ ನಮ್ದೇ ಹೆಣ್ಣುಮಕ್ಕಳನ್ನು ನೋಡ್ತೀರ, ಹುಡುಗಿ ಸಿಗಲಿಲ್ಲ ಅಂತ ಎಷ್ಟು ಹೇಳ್ತಿರ. ಸ್ವಲ್ಪ ಬೇರೆಯವರನ್ನೂ ನೋಡ್ರಲ’ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading