ಹೈದರಾಬಾದ್: ದರ್ಶನ್ ನಟನೆಯ ರಾಬರ್ಟ್ ಚಿತ್ರದ ತೆಲುಗು ಡಬ್‌ನ ʼಕಣ್ಣೆ ಅದಿರಿಂದಿʼ ಎಂಬಾ ಹಾಡನ್ನು ಹಾಡಿ ರಾಜ್ಯದಲ್ಲೂ ಅಪಾರವಾದ ಅಭಿಮಾನಿಗಳನ್ನು ಪಡೆದುಕೊಂಡ ಗಾಯಕಿ ಮಂಗ್ಲಿ ಮೂಲತಃ ತೆಲುಗಿನವರು. ರಾಬರ್ಟ್ ಚಿತ್ರಕ್ಕೂ ಮುನ್ನ ಹಲವಾರು ತೆಲುಗು ಹಾಡುಗಳನ್ನು ಹಾಡಿ ಪ್ರೇಕ್ಷಕರ ಮನ ಗೆದ್ದಿದ್ದ ಮಂಗ್ಲಿ ಬೇಡಿಕೆಯ ಗಾಯಕಿ.
ತನ್ನದೇ ಯುಟ್ಯೂಬ್ ಚಾನೆಲ್, ಸಂಯೋಜನೆ, ಸ್ಟೇಜ್ ಶೋ ಎಂದೆಲ್ಲ ಸದಾ ನಿರತರಾಗಿರುವ ಮಂಗ್ಲಿಗೆ ನಿನ್ನೆ ( ಜೂನ್ 10 ) ಹುಟ್ಟುಹಬ್ಬದ ಸಂಭ್ರಮ. ಯಶಸ್ಸು ಉತ್ತುಂಗದಲ್ಲಿದ್ದಾಗ ಹುಟ್ಟುಹಬ್ಬಗಳು ರೆಸಾರ್ಟ್‌ನಲ್ಲಿ ನಡೆಯುವುದು ಕಾಮನ್ ಆಗಿದ್ದು, ಮಂಗ್ಲಿ ಹುಟ್ಟುಹಬ್ಬವನ್ನು ಸಹ ಅಲ್ಲಿಯೇ ಆಚರಿಸಲಾಗಿದೆ.
ಹೈದರಾಬಾದ್‌ನ ಚೆವೆಲ್ಲಾ ತ್ರಿಪುರ ಎಂಬ ರೆಸಾರ್ಟ್‌ನಲ್ಲಿ ಮಂಗ್ಲಿ ಹುಟ್ಟುಹಬ್ಬದ ಪಾರ್ಟಿಯನ್ನು ಆಯೋಜಿಸಲಾಗಿತ್ತು. ಈ ಪಾರ್ಟಿ ಮೇಲೆ ಹೈದರಾಬಾದ್ ಪೊಲೀಸರು ದಾಳಿ ನಡೆಸಿದ್ದು, ಅಕ್ರಮ ವಿದೇಶಿ ಮದ್ಯ ಪತ್ತೆಯಾಗಿದೆ. ಅಲ್ಲದೇ ಹಲವಾರು ಮಂದಿ ಗಾಂಜಾ ಸೇವಿಸರುವುದು ಬಹಿರಗವಾಗಿದೆ.
ಹಲವರಿಗೆ ಮಾದ್ಯಕ ದ್ರವ್ಯದ ಪಾರ್ಟಿಯನ್ನು ಆಯೋಜಿಸಿರುವ ಆರೋಪ ಇದೀಗ ಮಂಗ್ಲಿ ಮೇಲಿದ್ದು, ಪೊಲೀಸರು ಗಾಯಕಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಿದ್ದಾರೆ. ಈ ಮೂಲಕ ಟಾಲಿವುಡ್ ಅಂಗಳದಲ್ಲಿ ಮಾದಕ ವಸ್ತುಗಳ ಸೇವನೆ ವಿಚಾರ ಸದ್ದು ಮಾಡುಲಿದ್ದು, ಇದರ ಹಿಂದೆ ಇನ್ನೂ ಯಾವೆಲ್ಲ ಸೆಲೆಬ್ರಿಟಿಗಳಿದ್ದಾರೆ ಎಂಬುದು ಬಹಿರಂಗವಾಗಲಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


