Tuesday, September 1, 2026
spot_img
More
    spot_img
    HomeTop Storyಲೇ.. ವಾಯ್ಸ್‌ ಸೈಲೆಂಟ್‌ ಮಾಡೋದು ಒಳಗೆ ಹಾಕಿ ಅಲ್ಲ ಕಣೊ; ಕಾಂಗ್ರೆಸ್‌ ವಿರುದ್ಧ ಕಿಡಿಕಾರಿದ ಸೂಲಿಬೆಲೆ!

    ಲೇ.. ವಾಯ್ಸ್‌ ಸೈಲೆಂಟ್‌ ಮಾಡೋದು ಒಳಗೆ ಹಾಕಿ ಅಲ್ಲ ಕಣೊ; ಕಾಂಗ್ರೆಸ್‌ ವಿರುದ್ಧ ಕಿಡಿಕಾರಿದ ಸೂಲಿಬೆಲೆ!

    ನಿನ್ನೆಯಷ್ಟೇ ಮೋದಿ ಭಕ್ತ ಪುನೀತ್‌ ಕೆರೆಹಳ್ಳಿ ಎಕ್ಸ್‌ ಖಾತೆಯಲ್ಲಿ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಕಾಂಗ್ರೆಸ್‌ ಮಸಲತ್ತು ನಡೆಸುತ್ತಿದ್ದು, ಎಲ್ಲ ಠಾಣೆಗಳಿಗೂ ಸೂಲಿಬೆಲೆ ವಿರುದ್ಧ ಇರುವ ದೂರುಗಳ ವಿವರ ಕೇಳಿ ಸಂದೇಶ ಕಳುಹಿಸಿದೆ ಎಂದು ಆರೋಪ ಮಾಡಿದ್ದರು.

    Advertisement

    ಈ ಆರೋಪದ ಬೆನ್ನಲ್ಲೇ ಸ್ವತಃ ಚಕ್ರವರ್ತಿ ಸೂಲಿಬೆಲೆ ಸಹ ಈ ಕುರಿತು ಮಾತನಾಡಿದ್ದು, ಕಾಂಗ್ರೆಸ್‌ ವಿರುದ್ಧ ಕಿಡಿಕಾರಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಸೂಲಿಬೆಲೆ ಕಾಂಗ್ರೆಸ್‌ ನನ್ನನ್ನು ದ್ವೇಷಿಸುತ್ತೆ ಎಂಬುದು ನನಗೆ ಗೊತ್ತು, ಕಾಂಗ್ರೆಸ್‌ಗೆ ನನ್ನನ್ನು ಕಂಡರೆ ಕೋಪ ಎಂದರು.

    ಅಲ್ಲದೇ ನಿನ್ನೆ ಬೆಂಗಳೂರಿನ ಐಜಿ, ಡಿಐಜಿ ಕಡೆಯಿಂದ ರಾಜ್ಯದ ಎಲ್ಲಾ ಠಾಣೆಗಳಿಗೂ ಕರೆ ಬಂದಿದ್ದು, ಚಕ್ರವರ್ತಿ ಸೂಲಿಬೆಲೆ ಮೇಲೆ 2022ರಿಂದ 2025ರ ಜೂನ್‌ವರೆಗೆ ಏನೆಲ್ಲ ದೂರುಗಳಿವೆಯೋ ಅವೆಲ್ಲವನ್ನು ಪಟ್ಟಿ ಮಾಡಿ ಕಳುಹಿಸಿ ಎಂದು ಕೇಳಿದ್ದಾರೆ ಎಂದು ಆರೋಪಿಸಿದರು.

    ಕಾರಣ ಹೇಗಾದರೂ ಮಾಡಿ ಒಳಗೆ ಹಾಕಿಬಿಡಬಹುದು, ಈ ಮೂಲಕ ವಾಯ್ಸ್‌ ಸೈಲೆಂಟ್‌ ಮಾಡಿಬಿಡಬಹುದು ಎಂಬುದು ಅವರ ಯೋಜನೆ ಎಂದ ಚಕ್ರವರ್ತಿ ಸೂಲಿಬೆಲೆ ʼಲೇ ವಾಯ್ಸ್‌ ಸೈಲೆಂಟ್‌ ಮಾಡೋದು ಒಳಗೆ ಹಾಕಿ ಅಲ್ಲ ಕಣೋ. ನಿಮ್ಮ ಬದುಕನ್ನು ಸುಂದರವನ್ನಾಗಿ ಮಾಡಿಕೊಂಡು ಚಕ್ರವರ್ತಿತೆ ಮಾತನಾಡಲು ಏನು ಇಲ್ಲದಂತೆ ಮಾಡಿ, ಆ ಮೂಲಕ ನೀವು ವಾಯ್ಸ್‌ ಸೈಲೆಂಟ್‌ ಮಾಡಬೇಕಲ್ವಾ?ʼ ಎಂದು ಕಿಡಿಕಾರಿದರು.

    ಅಲ್ಲದೇ ತನ್ನನ್ನು ಬಂಧಿಸಿ ಜೈಲಿನಲ್ಲಿಟ್ಟರೂ ತಲೆ ಕೆಡಿಸಿಕೊಳ್ಳುವುದಿಲ್ಲ, ಇನ್ನೂ ಓದದ 15 ಪುಸ್ತಕಗಳಿವೆ, ಅವುಗಳನ್ನು ಓದಿ ಮತ್ತೆ ಬಂದು ಮಾತನಾಡುತ್ತೇನೆ ನಾನು ನಿಮಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದರು. ಅಲ್ಲದೇ ಸರ್ಕಾರ 5 ವರ್ಷಕ್ಕೊಮ್ಮೆ ಬದಲಾಗುತ್ತೆ, ಆದರೆ ಭಾರತದ ಇತಿಹಾಸ 25000 ವರ್ಷಗಳಷ್ಟು ಹಳೆಯದು. ನಿಮ್ಮಂತಹ ಅನೇಕ ಮಂತ್ರಿಗಳನ್ನು, ಅನೇಕ ಮುಖ್ಯಮಂತ್ರಿಗಳನ್ನು, ಈ ದೇಶ ನೋಡಿಯಾಗಿದೆ, ನೀವು ಯಾವ ಕೊತ್ವಾಲ್‌ ನಾಯಕರು? ಎಂದು ವಾಗ್ದಾಳಿ ನಡೆಸಿದರು.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading