Tuesday, September 1, 2026
spot_img
More
    spot_img
    HomeLatest newsರಾಜ್ಯ ಸರ್ಕಾರಕ್ಕೆ ನಿರಾಸೆ: ಹೈಕಮಾಂಡ್‌ನವರು ಮತ್ತೆ ಜಾತಿಗಣತಿ ಸಮೀಕ್ಷೆ ಮಾಡಿ ಎಂದಿದ್ದಾರೆ ಎಂದ ಸಿದ್ದರಾಮಯ್ಯ!

    ರಾಜ್ಯ ಸರ್ಕಾರಕ್ಕೆ ನಿರಾಸೆ: ಹೈಕಮಾಂಡ್‌ನವರು ಮತ್ತೆ ಜಾತಿಗಣತಿ ಸಮೀಕ್ಷೆ ಮಾಡಿ ಎಂದಿದ್ದಾರೆ ಎಂದ ಸಿದ್ದರಾಮಯ್ಯ!

    ಚಿಕ್ಕಬಳ್ಳಾಪುರ: ರಾಜ್ಯ ರಾಜಕಾರಣದಲ್ಲಿ ಭಾರೀ ಕೋಲಾಹಲ ಎಬ್ಬಿಸಿದ್ದ ಜಾತಿಗಣತಿ ಸಮೀಕ್ಷೆ ವರದಿ ಕುರಿತು ಇದೀಗ ಕಾಂಗ್ರೆಸ್‌ ಹೈಕಮಾಂಡ್‌ ಹಸ್ತಕ್ಷೇಪ ಮಾಡಿದ್ದು, ಮತ್ತೊಮ್ಮೆ ಜಾತಿಗಣತಿ ಮಾಡುವಂತೆ ಸಲಹೆ ನೀಡಿದೆ.

    Advertisement

    ಈ ಕುರಿತು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಮಾತನಾಡಿದ್ದು, ಜಾತಿಗಣತಿ ಸಮೀಕ್ಷೆಯನ್ನು ಪುನಃ ಮಾಡುವಂತೆ ಸೂಚನೆ ನೀಡಿರುವ ವಿಷಯವನ್ನು ಬಹಿರಂಗಪಡಿಸಿದ್ದಾರೆ.

    ʼಹೈಕಮಾಂಡ್‌ನವರು ನನಗೆ ಹೇಳಿದ್ದಾರೆ. ಕೆಲವು ದೂರುಗಳು ಬಂದಿವೆ. ಏಕೆಂದರೆ ಸಮೀಕ್ಷೆ ನಡೆದಿರುವುದು 2015ರಲ್ಲಿ. ಸಮೀಕ್ಷೆ ನಡೆದು ಈಗಾಗಲೇ 9-10 ವರ್ಷಗಳು ಕಳೆದಿವೆ. ಅದಕ್ಕೆ ಬಹಳ ಕಡಿಮೆ ಅವಧಿಯಲ್ಲಿ, 60 – 70 ದಿನಗಳಲ್ಲಿ ಹೊಸ ಸರ್ವೆ ಮಾಡುವಂತೆ ತಿಳಿಸಿದೆ. ಇದು ನನ್ನ ನಿರ್ಧಾರವಲ್ಲ, ಹೈಕಮಾಂಡ್‌ನ ನಿರ್ಧಾರ. ಹೈಕಮಾಂಡ್‌ ಹೇಳುವುದನ್ನು ಕೇಳುವುದು ನಮ್ಮ ಕರ್ತವ್ಯʼ ಎಂದಿದ್ದಾರೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading