ಬೆಂಗಳೂರು: ಹಿಂದು ಯುವಕರು ಮುಸ್ಲಿಂ ಯುವತಿಯರನ್ನು ಪ್ರೀತಿಸಿ ಮದುವೆಯಾದರೆ 5 ಲಕ್ಷ ರೂ. ಪ್ರೋತ್ಸಾಹಧನ ನೀಡಲಾಗುವುದು ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಘೋಷಿಸಿದ್ದರು.
ಈ ಹೇಳಿಕೆ ವಿವಾದವನ್ನು ಹುಟ್ಟುಹಾಕಿದ್ದು, ಕೋಮುಗಲಭೆಗೆ ಎಡೆಮಾಡಿಕೊಡುವಂತದ್ದು ಎಂದು ಹಲವರು ಕಿಡಿಕಾರಿದ್ದಾರೆ. ಈ ಕುರಿತು ನಟ ಚೇತನ್ ಅಹಿಂಸಾ ಸಹ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ವಿರೋಧ ವ್ಯಕ್ತಪಡಿಸಿದ್ದಾರೆ.
ʼಹಿಂದುತ್ವ ಶಾಸಕರಾದ ಯತ್ನಾಲ್ ಅವರು ಮುಸ್ಲಿಂ ಯುವತಿಯನ್ನು ವಿವಾಹವಾಗುವ ಯಾವುದೇ ಹಿಂದೂ ಯುವಕರಿಗೆ 5 ಲಕ್ಷ ರೂಪಾಯಿ ನೀಡುವುದಾಗಿ ಹೇಳಿರುವುದು ತುಂಬಾ ಖಿನ್ನತೆಯ ವಿಷಯ. ಇದು ಪುರುಷರ (ರಾಜಕೀಯ) ಯುದ್ಧಗಳಲ್ಲಿ ಮಹಿಳೆಯ ದೇಹವನ್ನು ಯುದ್ಧಭೂಮಿಯಾಗಿ ಬಳಸುವ ಇನ್ನೊಂದು ಉದಾಹರಣೆ. ಈ ರೀತಿಯ ಆಂತರಿಕ ಮಿಸೋಜಿನಿ (ಮಹಿಳಾವಿರೋಧಿ ದೃಷ್ಟಿಕೋನ) ಮತ್ತು ಅನೇಕ ಕಾರಣದಿಂದಲೇ ಹಿಂದೂತ್ವವು ಕರ್ನಾಟಕ ಜನ ನಮ್ಮದೂ ಎಂದು ಒಪ್ಪಿಕೊಳ್ಳಲಾಗುವುದಿಲ್ಲʼ ಎಂದು ಚೇತನ್ ಕಿಡಿಕಾರಿದ್ದಾರೆ.
ಬೆಂಗಳೂರಲ್ಲಿ ನೇಪಾಳ ರುದ್ರಾಕ್ಷಿಗಳ ಪ್ರದರ್ಶನ; ಎಲ್ಲಿ, ಎಲ್ಲಿಯವರೆಗೆ?
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


