ಬೆಂಗಳೂರು: ಶ್ರಾವಣ ಮಾಸದ ಪ್ರಯುಕ್ತ ನಗರದ ಇಲ್ಲಿನ ಜೆ.ಪಿ. ನಗರ 1ನೇ ಹಂತದಲ್ಲಿರುವ ಸಿ.ಆರ್. ಲೇಔಟ್‌ನ ಹೊಟೇಲ್ ಲೆ ಪೊಲೇಜ್‌ನಲ್ಲಿ ಭಾನುವಾರ ಆರಂಭವಾಗಿರುವ ನೇಪಾಳದ ರುದ್ರಾಕ್ಷಿ ಪ್ರದರ್ಶನ ಮತ್ತು ಮಾರಾಟ ಮೇಳವನ್ನು 18ರವರೆಗೆ ನಡೆಯಲಿದೆ.
ಹೈದರಾಬಾದ್ ಮೂಲದ ಇಂಡಸ್- ನೇಪಾಳ ರುದ್ರಾಕ್ಷ ಸಂಸ್ಥೆ ಆಯೋಜಿಸಿರುವ ಮೇಳದಲ್ಲಿ ಗ್ರಾಹಕರಿಗೆ ವಿರಳವಾಗಿ ದೊರಕುವ ಹಾಗೂ ರತ್ನದ ಹರಳುಗಳು ಸಹ ಲಭ್ಯ ಇವೆ. ದುಂಡುಮುಖದ ಒಂದು ಮುಖಿ ರುದ್ರಾಕ್ಷಿ (ಸುಮಾರು 4.5 ಲಕ್ಷ ರೂ.) ರುದ್ರಾಕ್ಷಿಗಳು ಲಭ್ಯವಿವೆ.
ಸಂಸ್ಥೆಯ ನಿರ್ದೇಶಕ ಡಾ.ನರೇಂದ್ರ ಕಾಶಿರೆಡ್ಡಿ ಮಾತನಾಡಿ, ಯಾವ ರುದ್ರಾಕ್ಷಿಯನ್ನು ಯಾವಾಗ ಹಾಗೂ ಯಾರು ಧರಿಸಬೇಕು ಎಂಬುವುದರ ಬಗ್ಗೆ ಯಾವುದೇ ಪಂಚಾಂಗ ಮತ್ತು ಕಂಪ್ಯೂಟರ್ ಸಹಾಯವಿಲ್ಲದೆ, ವೇದ ಗಣಿತದ ಮೂಲಕ ಜನ್ಮರಾಶಿ, ಜನ್ಮನಕ್ಷತ್ರದ ಆಧಾರದ ಮೇಲೆ ತಿಳಿಸಲಾಗುವುದು.
ಅಸಲಿ ಹಾಗೂ ನಕಲಿ ರುದ್ರಾಕ್ಷಿಗಳ ಭಿನ್ನತೆ ತಿಳಿಸಲಾಗುವುದು. ಗುಣಮಟ್ಟದ ರುದ್ರಾಕ್ಷಿಗಳನ್ನು ಗ್ರಾಹಕರಿಗೆ ಮಾರಾಟ ಮಾಡುವುದರಲ್ಲಿ ಇಂಡಸ್ -ನೇಪಾಳ ರುದ್ರಾಕ್ಷ ಸಂಸ್ಥೆ ವಿಶ್ವಾಸಾರ್ಹತೆ ಹೊಂದಿದೆ. ಆಸಕ್ತರಿಗೆ ಇತರ ಮುಖಗಳ ರುದ್ರಾಕ್ಷಿಗಳನ್ನು ತರಿಸಿಕೊಡಲಾಗುವುದು. ಮೇಳವು ಬೆಳಗ್ಗೆ 10.30ರಿಂದ ರಾತ್ರಿ 9 ರವರೆಗೆ ತೆರೆದಿರಲಿದೆ ಎಂದು ತಿಳಿಸಿದ್ದಾರೆ.
ಶಾಸಕನ ಕೆಲಸ ಮೆಚ್ಚಿ ಬಿಜೆಪಿ ತೊರೆದು ಜೆಡಿಎಸ್ ಸೇರಲು ಮುಂದಾದ ಕಾರ್ಯಕರ್ತರು
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


