ಉಳ್ಳಾಲ: ಧರ್ಮಸ್ಥಳ ಕ್ಷೇತ್ರ ಹಾಗೂ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಜತೆಗೆ ನಾವಿದ್ದೇವೆ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ, ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಹೇಳಿದರು.
ತೊಕ್ಕೊಟ್ಟಿನಲ್ಲಿ ಸಂಘಟನೆಯೊಂದರ ಕಾರ್ಯಕ್ರಮದಲ್ಲಿ ಮಾತನಾಡಿ, ಧರ್ಮಸ್ಥಳದೊಟ್ಟಿಗೆ ಈ ದೇಶ ಅಲ್ಲ, ಜಗತ್ತೇ ಇದೆ. ಇಂದು ನಾನು ಮಾತನಾಡುತ್ತಿದ್ದೇನೆ. ನನ್ನನ್ನು ಜೈಲಿಗೆ ಹಾಕಿ, ಅದಕ್ಕೂ ನಾನು ಸಿದ್ಧನಿದ್ದೇನೆ ಎಂದು ಭಾವುಕರಾದರು.
ಎಸ್‌ಐಟಿಯವರು ಧರ್ಮಸ್ಥಳದ ವಠಾರ ಅಗೆಯುತ್ತಿದ್ದಾರೆ, ಶವ ಹುಡುಕುತ್ತಿದ್ದಾರೆ. ನಿಮಗೆ ಅಲ್ಲಿ ಈವರೆಗೆ ಏನೂ ಸಿಕ್ಕಿಲ್ಲ, ಮುಂದೆಯೂ ಸಿಗುವುದಿಲ್ಲ. ಧರ್ಮಸ್ಥಳ ಹಾಳು ಸಾಧ್ಯವಿಲ್ಲ ಎಂದರು. ಮುಖ್ಯಮಂತ್ರಿಯವರೇ ಏನು ಮಾಡುತ್ತಿದ್ದೀರಿ? ನೀವೇಕೆ ಬಾಯಿ ಬಿಡುತ್ತಿಲ್ಲ? ಒಂದು ದೇವಸ್ಥಾನ ಹಾಳು ಮಾಡುವಾಗ ಸಿಎಂ ಮಾತಾಡುತ್ತಿಲ್ಲ. ನಮಗೆ ನಾಚಿಗೆ ಆಗುತ್ತಿದೆ. ಧರ್ಮಸ್ಥಳ ಹಾಳು ಮಾಡಲು ಈ ಪೂಜಾರಿ ಬಿಡುವುದಿಲ್ಲ ಎಂದರು.
ಬೆಂಗಳೂರಲ್ಲಿ ನೇಪಾಳ ರುದ್ರಾಕ್ಷಿಗಳ ಪ್ರದರ್ಶನ; ಎಲ್ಲಿ, ಎಲ್ಲಿಯವರೆಗೆ?
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


