ಮಂಡ್ಯ: ಸಿಎಂ ಸಿದ್ದರಾಮಯ್ಯ ಹಾಗೂ ಕುರುಬ ಸಮುದಾಯದವರನ್ನು ನಿಂದಿಸಿದ ಆರೋಪದ ಮೇಲೆ ಜೆಡಿಎಸ್‌ನ ಇಬ್ಬರು ಕಾರ್ಯಕರ್ತರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ತಾಲೂಕಿನ ಬೆನ್ನಹಟ್ಟಿ ಗ್ರಾಮದ ಕುಮಾರ ಹಾಗೂ ಶಾನುಭೋಗನಹಳ್ಳಿ ಗ್ರಾಮದ ಮಹೇಶ್ ಎಂಬುವರ ವಿರುದ್ಧ ಕೆ.ಎಂ.ಸುರೇಶ್ ಎಂಬುವರು ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲು ಮಾಡಲಾಗಿದೆ.
ಈ ಇಬ್ಬರು ಆ.8ರಂದು ರಾತ್ರಿ ಬಸರಾಳು ಗ್ರಾಮದಲ್ಲಿ ಕುರುಬ ಸಮುದಾಯವನ್ನು ನಿಂದಿಸುವುದರ ಜತೆಗೆ ಸಿಎಂ ಸಿದ್ದರಾಮಯ್ಯ ಬಗ್ಗೆ ಅಗೌರವವಾಗಿ ಟೀಕೆ ಮಾಡಿದ್ದರು.
ಮಾತ್ರವಲ್ಲದೆ ಸರ್ಕಾರ ನಿಮ್ಮದೇ ಇದೆ, ನಿಮಗೆ ತಾಕತ್ತು ಇದ್ದರೆ ನಮ್ಮ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಿ ಎಂದು ವಿಡಿಯೋ ಮಾಡಿ ಜಾಲತಾಣದಲ್ಲಿ ಹರಿಬಿಟ್ಟಿದ್ದರು.
ಬೆಂಗಳೂರಲ್ಲಿ ನೇಪಾಳ ರುದ್ರಾಕ್ಷಿಗಳ ಪ್ರದರ್ಶನ; ಎಲ್ಲಿ, ಎಲ್ಲಿಯವರೆಗೆ?
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


