ವಾಹನ ಮಾಲೀಕರಿಗೆ ಅನುಕೂಲ ಮಾಡಿಕೊಡುವ ಹಾಗೂ ಟೋಲ್‌ಗೇಟ್‌ಗಳಲ್ಲಿ ವಾಹನ ದಟ್ಟಣೆ ಕಡಿಮೆಮಾಡುವ ಉದ್ದೇಶದಿಂದ ಈಗಾಗಲೇ ಘೋಷಿಸಲಾಗಿರುವ ವಾರ್ಷಿಕ ಫಾಸ್ಟ್ಟ್ಯಾಗ್ ಪಾಸ್ ವಿತರಣಾ ಕಾರ್ಯಕ್ಕೆ ಆ.15ರಿಂದ ಚಾಲನೆ ಸಿಗಲಿದೆ.
ಈ ಫಾಸ್ಟ್‌ಟ್ಯಾಗ್ ವಾರ್ಷಿಕ ಪಾಸ್‌ನಿಂದ ಪದೇ ಪದೆ ಫಾಸ್ಟ್‌ಟ್ಯಾಗ್ ರಿಚಾರ್ಜ್ ಮಾಡುವ ಕಿರಿಕಿರಿಯಿಂದ ವಾಹನ ಮಾಲೀಕರಿಗೆ ಮುಕ್ತಿ ಸಿಗಲಿದೆ. ಇದು ಕೇವಲ ಖಾಸಗಿ ಹಾಗೂ ವಾಣಿಜ್ಯೇತರ ವಾಹನಗಳಿಗಷ್ಟೇ ಸೀಮಿತವಾಗಿದೆ.
ವಾಣಿಜ್ಯೇತರ ವಾಹನಗಳಾದ ಖಾಸಗಿ ಕಾರು, ಜೀಪು ಮತ್ತು ವ್ಯಾನ್‌ಗಳ ಮಾಲೀಕರಿಗೆ ಗರಿಷ್ಠ 200 ಟ್ರಿಪ್ ಅಥವಾ ಒಂದಿಡೀ ವರ್ಷ ಟೋಲ್ ಬಳಕೆಗಾಗಿ (ಯಾವುದು ಮೊದಲೋ ಅದು) 3000 ರು. ಪಾವತಿಸಿದರೆ ಸಾಕು. ಈ ಫಾಸ್ಟ್ ಟ್ಯಾಗ್ ಪಾಸ್‌ಗಾಗಿ ಪ್ರತ್ಯೇಕವಾಗಿ ಫಾಸ್ಟ್ ಟ್ಯಾಗ್ ಖರೀದಿಸಬೇಕೆಂದೇನೂ ಇಲ್ಲ. ಹಾಲಿ ಚಾಲ್ತಿಯಲ್ಲಿರುವ ಫಾಸ್ಟ್‌ಟ್ಯಾಗ್ ಅನ್ನೇ ಮೇಲ್ದರ್ಜೆಗೇರಿಸಬಹುದಾಗಿದೆ. ಈ ಫಾಸ್ಟ್‌ಟ್ಯಾಗ್ ಪಾಸ್ ಕೇವಲ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಎನ್‌ಎಚ್‌ಎಐ)ದಡಿ ಬರುವ ರಾಷ್ಟ್ರೀಯ ಹೆದ್ದಾರಿಗಷ್ಟೇ ಅನ್ವಯವಾಗುತ್ತದೆಯೇ ಹೊರತು ರಾಜ್ಯ ಹೆದ್ದಾರಿಗಳಿಗಲ್ಲ.
ಸಾಮಾನ್ಯವಾಗಿ, ನೀವು ಯಾವುದೇ ಟೋಲ್ ಪ್ಲಾಜಾದ ಮೂಲಕ ಒಮ್ಮೆ ಹಾದುಹೋಗಲು ಸರಾಸರಿ ರೂ. 50 ಪಾವತಿಸಿದರೆ, 200 ಟೋಲ್ ಪ್ಲಾಜಾಗಳನ್ನು ದಾಟಲು ನೀವು ಒಟ್ಟು ರೂ. 10,000 ಖರ್ಚು ಮಾಡಬೇಕಾಗುತ್ತದೆ. ಆದರೆ ವಾರ್ಷಿಕ ಫಾಸ್ಟ್ಟ್ಯಾಗ್ ಪಾಸ್ ಬಳಸುವ ಮೂಲಕ, ನೀವು ನೇರವಾಗಿ ರೂ. 7000 ವರೆಗೆ ಉಳಿಸಬಹುದು.
,ಹಳದಿ ಲೈನ್ ಮೆಟ್ರೊ ನಿಲ್ದಾಣ ಟಿಕೆಟ್ ದರ ಇಲ್ಲಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


