ಹಳದಿ ಮಾರ್ಗವನ್ನು ಭಾನುವಾರ ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿದ್ದಾರೆ. ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (ಬಿಎಂಆರ್‌ಸಿಎಲ್) ದಕ್ಷಿಣ ವೃತ್ತದ ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತ ರಿಂದ (ಸಿಎಂಆರ್‌ಎಸ್) ಸುರಕ್ಷತಾ ಅನುಮತಿ ಯನ್ನು ಪಡೆದುಕೊಂಡಿದೆ. ಇದರಿಂದ ದಕ್ಷಿಣ ಬೆಂಗಳೂರಿನ ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರಕ್ಕೆ ಸಂಪರ್ಕಿಸುವ 19.15 ಕಿ.ಮೀ. ಉದ್ದದ ಮೆಟ್ರೋ ಸಂಚಾರ ಶುರುವಾಗಿದೆ. ಇಲ್ಲಿರುವ ನಿಲ್ದಾಣಗಳು ಹಾಗೂ ದರಪಟ್ಟಿ ಇಲ್ಲಿದೆ.
ಹಳದಿ ಮಾರ್ಗದ ನಿಲ್ದಾಣಗಳು:
- ಬೊಮ್ಮಸಂದ್ರ
- ಹೆಬ್ಬಗೋಡಿ
- ಹುಸ್ಕೂರ್ ರಸ್ತೆ
- ಇನ್ಫೋಸಿಸ್ ಫೌಂಡೇಶನ್ ಕೋನಪ್ಪನ ಅಗ್ರಹಾರ
- ಎಲೆಕ್ಟ್ರಾನಿಕ್ ಸಿಟಿ
- ಬೆರಟೇನ ಅಗ್ರಹಾರ
- ಹೊಸ ರೋಡ್
- ಸಿಂಗಸಂದ್ರ
- ಕೂಡ್ಲು ಗೇಟ್
- ಹೊಂಗಸಂದ್ರ
- ಬೊಮ್ಮನಹಳ್ಳಿ
- ಸೆಂಟ್ರಲ್ ಸಿಲ್ಕ್ ಬೋರ್ಡ್
- ಬಿಟಿಎಂ ಲೇಔಟ್
- ಜಯದೇವ ಆಸ್ಪತ್ರೆ
- ರಾಗಿ ಗುಡ್ಡ ದೇವಸ್ಥಾನ
- ಆರ್.ವಿ. (ರಾಷ್ಟ್ರೀಯ ವಿದ್ಯಾಲಯ) ರಸ್ತೆ
ಹಳದಿ ಮೆಟ್ರೋ ದರ ಸ್ಟೇಜ್ ಲೆಕ್ಕದಲ್ಲಿ
- ಆರ್ ವಿ ರಸ್ತೆಯಿಂದ ರಾಗಿಗುಡ್ಡದ ವರೆಗೆ 10 ರೂಪಾಯಿ.
- ಆರ್ ವಿ ರಸ್ತೆ-ಜಯದೇವ 10 ರೂಪಾಯಿ.
- ಆರ್ ವಿ ರಸ್ತೆ- BTM ಲೇಔಟ್ 20 ರೂ.
- ಆರ್ ವಿ ರಸ್ತೆ -ಬೊಮ್ಮನಹಳ್ಳಿ 30 ರೂ.
- ಆರ್ ವಿ ರಸ್ತೆ -ಕೂಡ್ಲೂಗೇಟ್ 40 ರೂ.
- ಆರ್ ವಿ ರಸ್ತೆ -ಸಿಂಗಸಂದ್ರ 50 ರೂ.
- ಆರ್ ವಿ ರಸ್ತೆ -ಎಲೆಕ್ಟ್ರಾನಿಕ್ ಸಿಟಿ 60 ರೂ.
- ಆರ್ ವಿ ರಸ್ತೆ -ಬೊಮ್ಮಸಂದ್ರ 60 ರೂ.
- ಸಿಲ್ಕ್ ಬೋರ್ಡ್- ಬೊಮ್ಮಸಂದ್ರ 60 ರೂ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


