ಭಾರತದ ಪ್ರಮುಖ ಐಟಿ ಸಂಸ್ಥೆ ಇನ್ಫೋಸಿಸ್ ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಉದ್ಯೋಗವಕಾಶ ನೀಡಲಿದೆ. ಇನ್ಫೋಸಿಸ್ ಬಿಪಿಎಂ ಬೆಂಗಳೂರಿನ ಜೆಪಿ ನಗರದಲ್ಲಿರುವ ತನ್ನ ಕಚೇರಿಯಲ್ಲಿ, ಆಗಸ್ಟ್ 12ರಂದು ವಾಕ್-ಇನ್ ಸಂದರ್ಶನ ಆಯೋಜಿಸಿದೆ.
ಈ ಸಂದರ್ಶನವು ತಂತ್ರಜ್ಞಾನ ಬೆಂಬಲ ತಜ್ಞರು, ಸಿಸ್ಟಮ್ ಎಂಜಿನಿಯರ್ ಮತ್ತು AI/Gen AI ತಂತ್ರಜ್ಞಾನ ಸಂಬಂಧಿತ ಹುದ್ದೆಗಳಿಗಾಗಿ ನಡೆಯಲಿದೆ. ಅಭ್ಯರ್ಥಿಗಳು ಕಂಪ್ಯೂಟರ್ ಸೈನ್ಸ್, ಎಂಜಿನಿಯರಿಂಗ್ ಅಥವಾ ಸಂಬಂಧಿತ ಕ್ಷೇತ್ರದಲ್ಲಿ ಪದವಿ ಪಡೆದಿರಬೇಕು. ಆಧುನಿಕ AI ಮಾದರಿ ಎಂಜಿನಿಯರಿಂಗ್ ಮತ್ತು ಜನರೇಟಿವ್ AI ಕ್ಷೇತ್ರದಲ್ಲಿ ಜ್ಞಾನ ಮತ್ತು ಅನುಭವ ಇರಬೇಕು. ಜೊತೆಗೆ Python, Java ಅಥವಾ C++ ನಂತಹ ಪ್ರಮುಖ ಪ್ರೋಗ್ರಾಮಿಂಗ್ ಭಾಷೆಗಳಲ್ಲಿ ಪರಿಣತಿ ಇರಬೇಕು ಎಂದು ಕಂಪನಿಯ ನೇಮಕಾತಿ ತಂಡವು ಸಾಮಾಜಿಕ ಮಾಧ್ಯಮದ ಮೂಲಕ ತಿಳಿಸಿದೆ
ಬೆಂಗಳೂರಿನ ಜೆಪಿ ನಗರ ಕಚೇರಿಯಲ್ಲಿ ಆಗಸ್ಟ್ 12 ರಂದು ನಡೆಯುವ ವಾಕ್-ಇನ್ ಸಂದರ್ಶನಕ್ಕೆ ಅಭ್ಯರ್ಥಿಗಳು ಬೆಳಿಗ್ಗೆ 9:00ರಿಂದ ಮಧ್ಯಾಹ್ನ 1:00 ರವರೆಗೆ ಈ ಸಂದರ್ಶನದಲ್ಲಿ ಭಾಗವಹಿಸಬಹುದು. ಈ ಡ್ರೈವ್‌ನಲ್ಲಿ ಮಹಿಳೆಯರಿಗಾಗಿ ಪ್ರತ್ಯೇಕ ಅವಕಾಶವೂ ನೀಡಲಾಗಿದೆ.
,ಭೂಮಿಯನ್ನು ಹೋಲುವ ವಾಸಕ್ಕೆ ಯೋಗ್ಯವಿರುವ ಗ್ರಹ ಪತ್ತೆ!
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


