ಭೂಮಿಯನ್ನು ಹೋಲುವ ಹಾಗೂ ವಾಸಯೋಗ್ಯ ಇರಬಹುದಾದ ಗ್ರಹವನ್ನು ನಾಸಾದ ಜೇಮ್ಸ್ ವೆಬ್ ಬಾಹ್ಯಾಕಾಶ ದೂರದರ್ಶಕ (JWST) ಇತ್ತೀಚೆಗೆ ಪತ್ತೆ ಹಚ್ಚಿದೆ. ಈ ವಿಷಯವನ್ನು ನಾಸಾದ ವೆಬ್‌ಸೈಟ್ science.nasa.gov ದಲ್ಲಿ ಪ್ರಕಟಿಸಲಾಗಿದೆ.
ಭೂಮಿಯಿಂದ ಕೇವಲ 4 ಜ್ಯೋತಿರ್ವರ್ಷಗಳ (light-years) ಅಂತರದಲ್ಲಿರುವ ‘ಆಲ್ಫಾ ಸೆಂಟೌರಿ’ ಎಂಬ ನಕ್ಷತ್ರ ಸಮೂಹದಲ್ಲಿನ ಸೂರ್ಯನಂತ ನಕ್ಷತ್ರವೊಂದನ್ನು ಭೂಮಿಯಂಥಹ ಗ್ರಹವೊಂದು ಸುತ್ತುತ್ತಿದೆ ಎಂದು ದೂರದರ್ಶಕ ಕಂಡುಕೊಂಡಿದೆ.
JWST ಇತ್ತೀಚಿನ ಫಲಿತಾಂಶಗಳ ಪ್ರಕಾರ, ‘ಆಲ್ಫಾ ಸೆಂಟೌರಿ-ಎ’ ನಕ್ಷತ್ರದ ಗ್ರಹವಾಗಿ ಭೂಮಿಯಂತೆ ಹೋಲುವ ಹಾಗೂ ವಾಸಯೋಗ್ಯ ಗ್ರಹ ಕಂಡು ಬಂದಿದೆ. ಸದ್ಯ ಆ ಗ್ರಹಕ್ಕೆ ‘ಎಸ್ 1’ ಎಂದು ಹೆಸರಿಸಲಾಗಿದೆ.
JWSTನ ಮಿಡ್-ಇನ್ಫ್ರಾರೆಡ್ ಇನ್ಸ್ಟ್ರುಮೆಂಟ್ (MIRI) ನಿಂದ ತಿಳಿದು ಬಂದಿರುವ ಸಂಗತಿ ಏನೆಂದರೆ, ಎಸ್1 ಗ್ರಹ ಭೂಮಿಯಂತೆ ಹೋಲುವ ಒಂದು ಅನಿಲ ದೈತ್ಯ ಗ್ರಹವಾಗಿದೆ. ಆದರೆ, ಸದ್ಯ ಜೀವಿಗಳು ಇರಬಹುದಾದ ಅನುಮಾನಗಳು ಕಂಡು ಬಂದಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ.JWST ಅನ್ನು 2021 ರಲ್ಲಿ ಬಾಹ್ಯಾಕಾಶಕ್ಕೆ ಕಳುಹಿಸಲಾಗಿದೆ. ಇನ್ನೂ 15 ವರ್ಷ ಅಧ್ಯಯನ ಮಾಡಲಿದೆ.
,ಹಳದಿ ಲೈನ್ ಮೆಟ್ರೊ ನಿಲ್ದಾಣ ಟಿಕೆಟ್ ದರ ಇಲ್ಲಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


