ಮೈಸೂರು: ದಸರಾ ಮಹೋತ್ಸವದ ಕೇಂದ್ರ ಬಿಂದುವಾದ ಜಂಬೂಸವಾರಿ ಮೆರವಣಿಗೆ, ಪಂಜಿನ ಕವಾಯತು ವೀಕ್ಷಣೆಗೆ ಮೂರು ವಾರಗಳ ಮುನ್ನವೇ ಆನ್‌ಲೈನ್‌ನಲ್ಲಿ ಟಿಕೆಟ್ ಮಾರಾಟಕ್ಕೆ ವ್ಯವಸ್ಥೆ ಮಾಡಲು ದಸರಾ ಕಾರ್ಯಕಾರಿ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಮೈಸೂರು ಅರಮನೆ ಮಂಡಳಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ದಸರಾ ಮಹೋತ್ಸವದ ಉಪ ಸಮಿತಿ ರಚನೆಗೆ ಒಪ್ಪಿಗೆ ನೀಡಲಾಯಿತು.
2024ರ ಮೆರವಣಿಗೆ ಉಪ ಸಮಿತಿಗೆ ಅರಮನೆ ಮಂಡಳಿ ವತಿಯಿಂದ 2 ಕೋಟಿ ರೂ. ಅಥವಾ ಅರಣ್ಯ ಇಲಾಖೆಗೆ ನಿರ್ವಹಣೆಗೆ ಬಿಡುಗಡೆಗೊಳಿಸಲಾಗಿರುವ ಅನುದಾನಕ್ಕೆ ಮಂಜೂರಾತಿ ನೀಡಲಾಯಿತು.
20250 ವಿಜಯ ದಶಮಿ ಕಾರ್ಯಕ್ರಮವು ಅರಮನೆ ಆವರಣದಿಂದಲೇ ಪ್ರಾರಂಭವಾಗುವುದರಿಂದ ಹಾಗೂ ಪೂರ್ವಸಿದ್ಧತಾ ಕಾರ್ಯಗಳು ನಡೆಯುವುದರಿಂದ ಮೆರವಣಿಗೆ ಉಪ ಸಮಿತಿಗೆ ಸಂಬಂಧಿಸಿದ ಕೆಲವು ಪ್ರಮುಖ ವೆಚ್ಚಗಳನ್ನು 2 ಕೋಟಿ ರೂ. ಮಿತಿಗೆ ಒಳಪಟ್ಟು ಅರಮನೆ ಮಂಡಳಿ ವತಿಯಿಂದ ಭರಿಸಲು ಒಪ್ಪಿಗೆ ನೀಡಲಾಯಿತು.
ಜಂಬೂಸವಾರಿ, ಪಂಜಿನ ಕವಾಯತು ವೀಕ್ಷಣೆಗೆ ಐದಾರು ದಿನಗಳು ಇರುವಾಗ ಗೋಲ್ಡ್ ಕಾರ್ಡ್, ಟಿಕೆಟ್ ಮಾರಾಟವನ್ನು ಮೂರು ವಾರಗಳ ಮುಂಚಿತವಾಗಿ ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಾಗುವುದು. ಅತಿಥಿ ಗಣ್ಯರು, ಗಣ್ಯರು ಹಾಗೂ ಜನಪ್ರತಿನಿಧಿಗಳಿಗೆ ಪಾಸ್ ವಿತರಿಸಲು ಕ್ರಮವಹಿಸಲು ವಿಶೇಷಾಧಿಕಾರಿಗಳಿಗೆ ಅನುಮತಿ ನೀಡಲು ಅನುಮೋದನೆ ನೀಡಲಾಯಿತು.
ಕಲಾವಿದರ ಆಯ್ಕೆ ನೋಡಿ ಸ್ಥಳ ನಿಗದಿ: ಕಳೆದ ಬಾರಿ ಯುವ ದಸರಾವನ್ನು ಉತ್ತನಹಳ್ಳಿ ಬಳಿ ಆಯೋಜಿಸಿದ್ದು, ಈ ಬಾರಿ ಖ್ಯಾತನಾಮ ಕಲಾವಿದರ ಆಯ್ಕೆ ನೋಡಿಕೊಂಡು ಸ್ಥಳ ನಿಗದಿಪಡಿಸಲಾಗುತ್ತದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಕಲಾವಿದರ ಆಯ್ಕೆಯಾಗದಿದ್ದರೆ ಮುಂದಿನ ದಿನಗಳಲ್ಲಿ ಮತ್ತೊಂದು ಬಾರಿ ಚರ್ಚಿಸಿ ಸ್ಥಳ ನಿಗದಿಪಡಿಸಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು.
ನಂಜನಗೂಡಿನಲ್ಲಿ ಪುಡಿ ರೌಡಿಗಳ ಸದ್ದು; ಸರ್ಕಾರಿ ಆಸ್ಪತ್ರೆ ಮುಂಭಾಗ ರಣರಂಗ
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


