ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನ್ಮದಿನದ ಪ್ರಯುಕ್ತ ಆ.12ರಂದು ನಗರದ ಚಾಮರಾಜಪುರಂ ನಲ್ಲಿರುವ ಬುದ್ಧವಿಹಾರದಲ್ಲಿ ಸಹಪಂಕ್ತಿ ಭೋಜನ ಏರ್ಪಡಿಸಲಾಗುವುದು ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ರಾಜ್ಯಾಧ್ಯಕ್ಷ ಕೆ. ಎಸ್.ಶಿವರಾಮು ತಿಳಿಸಿದರು.
ಬುದ್ಧವಿಹಾರದಲ್ಲಿ ಭಾನುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಅನುಸರಿಸಿಕೊಂಡು ಬಂದಿರುವ ಸಹಬಾಳ್ವೆ, ಜಾತ್ಯತೀತತೆಯ ಪರಿಕಲ್ಪನೆ ಮತ್ತು ಸಂವಿಧಾನದ ಆಶಯಗಳನ್ನು ಸಮಾಜಕ್ಕೆ ಸಾರುವ ಸಲುವಾಗಿ ಜನ ದಿನಾಚರಣೆ ದಿನದಂದೇ ಸಹಪಂಕ್ತಿ ಭೋಜನವನ್ನು ಏರ್ಪಡಿಸಲಾಗುವುದು ಎಂದು ಹೇಳಿದರು.
ದಲಿತ, ಪೌರಕಾರ್ಮಿಕ, ಹಿಂದುಳಿದ ವರ್ಗ, ಶೋಷಿತ ಅಲ್ಪಸಂಖ್ಯಾತ ಸಮುದಾಯಗಳ ಮಹಿಳೆಯರು ಹಾಗೂ ಪುರುಷರು ಸ್ಥಳದಲ್ಲೇ ವಿಶೇಷ ಸಸ್ಯಾಹಾರಿ ಊಟ ತಯಾರು ಮಾಡಿ, ಒಟ್ಟಿಗೆ ಭೋಜನ ಮಾಡುವ ಕಾರ್ಯಕ್ರಮ ಇದಾಗಿದೆ. ಅಡುಗೆಗೆ ಬೇಕಾದ ವಸ್ತು ಗಳನ್ನು ಒದಗಿಸುವುದು, ಸಿದ್ಧತೆ ಮಾಡಿಕೊಳ್ಳುವುದು, ವೇದಿಕೆ ನಿರ್ಮಾಣ ಹಾಗೂ ಕಾರ್ಯಕ್ರಮದ ರೂಪರೇಷೆ ಕುರಿತು ಚರ್ಚಿಸಿ ಕಾರ್ಯಕ್ರಮದಲ್ಲಿ 400ರಿಂದ 500 ಜನರಿಗೆ ವಿಶೇಷ ಸಸ್ಯಾಹಾರ ಊಟ ತಯಾರು ಮಾಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಹಪಂಕ್ತಿ ಭೋಜನ ಕಾರ್ಯಕ್ರಮದಲ್ಲಿ ಪ್ರೊ. ಅರವಿಂದ ಮಾಲಗತ್ತಿ, ಲೋಹಿಯಾ ವಿಚಾರ ವೇದಿಕೆ ಅಧ್ಯಕ್ಷ ಬಿ.ಎಸ್.ಶಿವಣ್ಣ, ವಿಶ್ರಾಂತ ಕುಲಪತಿ ಪ್ರೊ.ಸಬಿಹಾ ಭೂಮಿಗೌಡ, ಪ್ರೊ.ಕಾಳೇಗೌಡ ನಾಗವಾರ, ಪ್ರೊ.ಕೆ. ಎಸ್.ಭಗವಾನ್, ಸಾಹಿತಿಗಳು, ಪ್ರಗತಿಪರ ಚಿಂತಕರು, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾ ಹಾಗೂ ಇತರರು ಭಾಗವಹಿಸುವರು ಎಂದು ತಿಳಿಸಿದರು.
ಮಾಜಿ ಮಹಾಪೌರ ಪುರುಷೋತ್ತಮ್, ಪೌರಕಾರ್ಮಿ ಕರ ಸಂಘದ ಅಧ್ಯಕ್ಷ ಮಾರ, ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ.ಚಂದ್ರಶೇಖರ್, ಪೌರಕಾರ್ಮಿಕ ಸಂಘದ ಮಹಿಳಾ ಅಧ್ಯಕ್ಷರಾದ ನಾಗಮ್ಮ, ಉಪ್ಪಾರ ಸಮಾಜದ ಜಿಲ್ಲಾಧ್ಯಕ್ಷ ಎಸ್.ಯೋಗೀಶ್ ಉಪ್ಪಾರ, ಕುಂಬಾರ ಸಮಾಜದ ಜಿಲ್ಲಾಧ್ಯಕ್ಷ ಪ್ರಕಾಶ್, ಮಡಿವಾಳ ಸಮಾಜದ ಜಿಲ್ಲಾಧ್ಯಕ್ಷ ರವಿನಂದನ್, ಮುಖಂಡರಾದ ಸಿದ್ದರಾಜು, ಲೋಕೇಶ್ ಕುಮಾರ್ ಮಾದಾಪುರ, ದೊರೆ, ವೆಂಕಟೇಶ್, ರಂಗಸ್ವಾಮಿ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.
ನಂಜನಗೂಡಿನಲ್ಲಿ ಪುಡಿ ರೌಡಿಗಳ ಸದ್ದು; ಸರ್ಕಾರಿ ಆಸ್ಪತ್ರೆ ಮುಂಭಾಗ ರಣರಂಗ
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


