ಪ್ರಧಾನಿ ನರೇಂದ್ರ ಮೋದಿ ಅವರು ‘ನಮ್ಮ ಮೆಟ್ರೋ’ ಹಳದಿ ಮಾರ್ಗದ ಉದ್ಘಾಟನಾ ಪ್ರಯಾಣದ ವೇಳೆ ಪುಟ್ಟೇನಹಳ್ಳಿ ಸರಕಾರಿ ಪ್ರೌಢಶಾಲೆ ಮತ್ತು ಅಗರ ಕರ್ನಾಟಕ ಪಬ್ಲಿಕ್ ಶಾಲೆಯ 16 ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದಾರೆ.
ನಿಮಗೆ ದೇಶೀಯ ವಸ್ತುಗಳು ಇಷ್ಟಾನಾ ಅಥವಾ ವಿದೇಶಿ ವಸ್ತುಗಳು ಇಷ್ಟಾನಾ? ಎಂದು ಮೋದಿ ಕೇಳಿದ ಪ್ರಶ್ನಗೆ ವಿದ್ಯಾರ್ಥಿಗಳು ದೇಶೀಯ ವಸ್ತುಗಳು ಇಷ್ಟ. ಎಂದಿದ್ದಾರೆ. ನಂತರ ಮೋದಿ, ಮೆಟ್ರೋದಿಂದ ಸಮಯ ಉಳಿದಾಗ ಏನು ಮಾಡುತ್ತೀರಿ? ರೀಲ್ಸ್ ನೋಡುತ್ತೀರಾ ಅಥವಾ ಟಿವಿ? ಎಂದು ಕೇಳಿದ್ದಾರೆ ಆಗ ವಿದ್ಯಾರ್ಥಿಗಳು ಉಳಿದ ಸಮಯದಲ್ಲಿ ಓದುತ್ತೇವೆ, ರೀಲ್ಸ್ ಅಥವಾ ಟಿವಿ ನೋಡುವುದಿಲ್ಲ ಎಂದಿದ್ದಾರೆ.
ರೀಲ್ಸ್ ಮತ್ತು ಟಿವಿ ನೋಡಲೇಬಾರದು ಅಂತಲ್ಲ. ಆದರೆ, ಅದು ಗೀಳಾಗದಿರಲಿಕ್ರೀಡೆ ಮತ್ತು ವಿಜ್ಞಾನಕ್ಕೆ ಹೆಚ್ಚು ಒತ್ತು ಕೊಡಿಯೋಗ, ಧ್ಯಾನದಿಂದ ಏಕಾಗ್ರತೆ ಹೆಚ್ಚುತ್ತದೆ.ಆರೋಗ್ಯದ ಕಡೆ ಹೆಚ್ಚು ಗಮನಹರಿಸಿ, ಪೌಷ್ಟಿಕ ಆಹಾರ ಸೇವಿಸಿ.ಓದಿಗೆ ಟೈಮ್ ಟೇಬಲ್ ಸಹಿತ ಪ್ಲಾನ್ ಮಾಡಿಕೊಂಡು ಓದಿ, ಆಗ ಯಶಸ್ಸು ಸಾಧ್ಯ. ಎಂದು ವಿದ್ಯಾರ್ಥಿಗಳಿಗೆ ಮೋದಿ ಟಿಪ್ಸ್ ನೀಡಿದ್ದಾರೆ.
,ವಂದೇ ಭಾರತ್ ಎಕ್ಸ್ಪ್ರೆಸ್ ಬೆಂಗಳೂರು–ಬೆಳಗಾವಿ: ನಿಲ್ದಾಣಗಳು, ಸಮಯ ಹಾಗೂ ದರಗಳ ಸಂಪೂರ್ಣ ಮಾಹಿತಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


