Monday, August 31, 2026
spot_img
More
    spot_img
    HomeLatest newsವಂದೇ ಭಾರತ್ ಎಕ್ಸ್‌ಪ್ರೆಸ್ ಬೆಂಗಳೂರು–ಬೆಳಗಾವಿ: ನಿಲ್ದಾಣಗಳು, ಸಮಯ ಹಾಗೂ ದರಗಳ ಸಂಪೂರ್ಣ ಮಾಹಿತಿ

    ವಂದೇ ಭಾರತ್ ಎಕ್ಸ್‌ಪ್ರೆಸ್ ಬೆಂಗಳೂರು–ಬೆಳಗಾವಿ: ನಿಲ್ದಾಣಗಳು, ಸಮಯ ಹಾಗೂ ದರಗಳ ಸಂಪೂರ್ಣ ಮಾಹಿತಿ

    ಕರ್ನಾಟಕದ ರಾಜಧಾನಿ ಬೆಂಗಳೂರು ಮತ್ತು ಉತ್ತರ ಕರ್ನಾಟಕದ ಕುಂದಾನಗರಿ ಬೆಳಗಾವಿಯೊಂದಿಗೆ ಸಂಪರ್ಕಿಸುವ ಹೊಸ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸೇವೆ ಆಗಸ್ಟ್ 11, 2025ರಿಂದ ಪ್ರಾರಂಭವಾಗುತ್ತಿದೆ. ಈ ಬಹುನಿರೀಕ್ಷಿತ ರೈಲಿಗೆ ಆಗಸ್ಟ್ 10ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬೆಂಗಳೂರಿನ ಕೆಎಸ್ಆರ್ ರೈಲ್ವೆ ನಿಲ್ದಾಣದಲ್ಲಿ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು.ಕರ್ನಾಟಕದಲ್ಲಿ ಇದೀಗ ಆರಂಭವಾಗುತ್ತಿರುವ ಇದು 11ನೇ ವಂದೇ ಭಾರತ್ ರೈಲು ಸೇವೆಯಾಗಿದ್ದು,ಈ ರೈಲು 8 ಜಿಲ್ಲೆಗಳ ಮೂಲಕ ಹಾದು ಹೋಗಲಿದ್ದು, ವಾರದಲ್ಲಿ ಆರು ದಿನಗಳು (ಬುಧವಾರ ಹೊರತು) ಸಂಚಾರ ನಡೆಸಲಿದೆ.

    Advertisement

    ರೈಲು 611 ಕಿಲೋಮೀಟರ್ ದೂರವನ್ನು ಕೇವಲ 8 ಗಂಟೆ 50 ನಿಮಿಷಗಳಲ್ಲಿ ಪೂರೈಸಿ, ಪ್ರಯಾಣಿಕರಿಗೆ ವೇಗದ ಮತ್ತು ಆರಾಮದಾಯಕ ಸೇವೆಯನ್ನು ಒದಗಿಸಲಿದೆ.ಈ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಒಟ್ಟು 8 ಜಿಲ್ಲೆಗಳ ಮೂಲಕ ಹಾದು ಹೋಗಲಿದ್ದು, ಉತ್ತರ ಕರ್ನಾಟಕದ ಜನರ ಬಹುಕಾಲದ ಕನಸಾದ ವೇಗದ ರೈಲು ಸಂಪರ್ಕವನ್ನು ಸಾಧ್ಯವಾಗಿಸುತ್ತದೆ. ಇದರಿಂದ ರಾಜ್ಯ ರಾಜಧಾನಿ ಹಾಗೂ ಉತ್ತರ ಕರ್ನಾಟಕದ ನಡುವಿನ ಪ್ರಯಾಣದ ಅವಧಿ ಗಣನೀಯವಾಗಿ ಕಡಿಮೆಯಾಗಲಿದೆ.ಉತ್ತರ ಕರ್ನಾಟಕದ ಜನರಿಗೆ ರಾಜ್ಯ ರಾಜಧಾನಿಯೊಂದಿಗೆ ವೇಗದ ಮತ್ತು ಆರಾಮದಾಯಕ ಸಂಪರ್ಕವನ್ನು ಒದಗಿಸಲಿದೆ.ವಂದೇ ಭಾರತ್ ರೈಲು ಉತ್ತರ ಕರ್ನಾಟಕದ ಮಂದಿಯ ಬಹುದಿನದ ಕನಸಾಗಿತ್ತು.ಬೆಳಗಾವಿ ಮತ್ತು ಬೆಂಗಳೂರು ನಡುವಿನ ಸಂಪರ್ಕ ಸುಲಭವಾಗಲಿದೆ.ಹಾಗಿದ್ರೆ ಈ ರೈಲುಗಳ ಟಿಕೆಟ್‌ ದರ ಎಷ್ಟಿರುತ್ತೆ,ವಿಶೇಷತೆಗಳು,ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ವೇಳಾಪಟ್ಟಿ ಗೊತ್ತಾ?

    ಹೊಸ ಬೆಂಗಳೂರು ಬೆಳಗಾವಿ ವಂದೇ ಭಾರತ್ ರೈಲಿನ ಪ್ರಮುಖ ವಿಶೇಷತೆಗಳು ಇಲ್ಲಿವೆ:

    ಬೋಗಿಗಳ ವಿವರ: ಈ ರೈಲಿನಲ್ಲಿ ಒಟ್ಟು 8 ಬೋಗಿಗಳಿದ್ದು, ಅವುಗಳಲ್ಲಿ 4 ಮೋಟರ್ ಕಾರ್‌ಗಳು, 1 ಟ್ರೈಲಿಂಗ್ ಕಾರ್, 1 ಎಕ್ಸಿಕ್ಯೂಟಿವ್ ಕ್ಲಾಸ್ ಮತ್ತು 2 ಡ್ರೈವಿಂಗ್ ಟ್ರೈಲರ್ ಕಾರ್‌ಗಳಿವೆ.

    ಪ್ರಯಾಣಿಕರ ಸೌಲಭ್ಯಗಳು: ಈ ರೈಲು ವಿಶ್ವ ದರ್ಜೆಯ ಸೌಲಭ್ಯಗಳಾದ ಆರಾಮದಾಯಕ ಆಸನಗಳು, ಆಧುನಿಕ ತಂತ್ರಜ್ಞಾನ ಮತ್ತು ಅತ್ಯುತ್ತಮ ಸುರಕ್ಷತಾ ಕ್ರಮಗಳನ್ನು ಒಳಗೊಂಡಿದೆ.

    ಪ್ರಯೋಜನಗಳು: ಈ ರೈಲು ಉತ್ತರ ಕರ್ನಾಟಕ ಮತ್ತು ರಾಜಧಾನಿ ಬೆಂಗಳೂರಿನ ನಡುವೆ ಸುಲಭ ಸಂಪರ್ಕ ಕಲ್ಪಿಸಲಿದ್ದು, ವ್ಯಾಪಾರಸ್ಥರು, ವಿದ್ಯಾರ್ಥಿಗಳು ಮತ್ತು ಪ್ರವಾಸಿಗರಿಗೆ ಹೆಚ್ಚಿನ ಅನುಕೂಲವಾಗಲಿದೆ.

    ಬೆಂಗಳೂರು-ಬೆಳಗಾವಿ ವಂದೇ ಭಾರತ್ ವೇಳಾಪಟ್ಟಿ

    ಇಂದಿನಿಂದ ಈ ರೈಲು ಸಂಚಾರ ಪ್ರಾರಂಭವಾಗಲಿದೆ.ರೈಲು ಸಂಖ್ಯೆ 26751 ಬೆಳಗಾವಿಯಿಂದ ಬೆಳಿಗ್ಗೆ 5:20ಕ್ಕೆ ಹೊರಟು, ಮಧ್ಯಾಹ್ನ 1:50ಕ್ಕೆ ಕೆಎಸ್‌ಆರ್ ಬೆಂಗಳೂರಿಗೆ ತಲುಪಲಿದೆ. ವಾಪಸ್, ರೈಲು ಸಂಖ್ಯೆ 26752 ಬೆಂಗಳೂರಿನಿಂದ ಮಧ್ಯಾಹ್ನ 2:20ಕ್ಕೆ ಆರಂಭವಾಗಿ, ರಾತ್ರಿ 10:40ಕ್ಕೆ ಬೆಳಗಾವಿಗೆ ಆಗಮಿಸಲಿದೆ. ಈ ರೈಲು ಧಾರವಾಡ (7:08/8:25), ಹುಬ್ಬಳ್ಳಿ (7:30/8:00), ಹಾವೇರಿ (8:35/6:48), ದಾವಣಗೆರೆ (9:25/5:48), ತುಮಕೂರು (12:15/3:03), ಮತ್ತು ಯಶವಂತಪುರ (1:03/2:28) ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.

    ಬೆಳಗಾವಿ ಬೆಂಗಳೂರು ವಂದೇ ಭಾರತ್ ರೈಲಿನ (BEL to SBC) ವೇಳಾಪಟ್ಟಿ ಇಲ್ಲಿದೆ:

    ಬೆಳಗಾವಿ: ಬೆಳಿಗ್ಗೆ 5:20 (ಪ್ರಾರಂಭ)

    ಧಾರವಾಡ: ಬೆಳಿಗ್ಗೆ 7:08

    ಹುಬ್ಬಳ್ಳಿ: ಬೆಳಿಗ್ಗೆ 7:30

    ಹಾವೇರಿ: ಬೆಳಿಗ್ಗೆ 8:35

    ದಾವಣಗೆರೆ: ಬೆಳಿಗ್ಗೆ 9:25

    ತುಮಕೂರು: ಮಧ್ಯಾಹ್ನ 12:15

    ಯಶವಂತಪುರ: ಮಧ್ಯಾಹ್ನ 1:03

    ಬೆಂಗಳೂರು (ಕೆಎಸ್‌ಆರ್): ಮಧ್ಯಾಹ್ನ 1:50 (ಮುಕ್ತಾಯ)

    ಬೆಂಗಳೂರು-ಬೆಳಗಾವಿ ವಂದೇ ಭಾರತ್ ರೈಲಿನ (SBC to BEL) ವೇಳಾಪಟ್ಟಿ ಇಲ್ಲಿದೆ:

    ಬೆಂಗಳೂರು (ಕೆಎಸ್‌ಆರ್): ಮಧ್ಯಾಹ್ನ 2:20 (ಪ್ರಾರಂಭ)

    ಯಶವಂತಪುರ: ಮಧ್ಯಾಹ್ನ 2:28

    ತುಮಕೂರು: ಮಧ್ಯಾಹ್ನ 3:03

    ದಾವಣಗೆರೆ: ಸಂಜೆ 5:48

    ಹಾವೇರಿ: ಸಂಜೆ 6:48

    ಹುಬ್ಬಳ್ಳಿ: ರಾತ್ರಿ 8:00

    ಧಾರವಾಡ: ರಾತ್ರಿ 8:25

    ಬೆಳಗಾವಿ: ರಾತ್ರಿ 10:40 (ಮುಕ್ತಾಯ)

    ಬೆಂಗಳೂರು-ಬೆಳಗಾವಿ ವಂದೇ ಭಾರತ್ ರೈಲಿನ ಟಿಕೆಟ್ ದರಗಳ ವಿವರ ಇಲ್ಲಿದೆ:

    ಬೆಂಗಳೂರು-ಬೆಳಗಾವಿ:

    ಚೇರ್‌ಕಾರ್ (CC): ₹1,118

    ಎಕ್ಸಿಕ್ಯೂಟಿವ್ ಚೇರ್‌ಕಾರ್ (EC): ₹2,279

    ಬೆಂಗಳೂರು-ಧಾರವಾಡ:

    ಚೇರ್‌ಕಾರ್ (CC): ₹914

    ಎಕ್ಸಿಕ್ಯೂಟಿವ್ ಚೇರ್‌ಕಾರ್ (EC): ₹1,863

    ಬೆಂಗಳೂರು-ಹುಬ್ಬಳ್ಳಿ:

    ಚೇರ್‌ಕಾರ್ (CC): ₹885

    ಎಕ್ಸಿಕ್ಯೂಟಿವ್ ಚೇರ್‌ಕಾರ್ (EC): ₹1,802

    ಬೆಂಗಳೂರು-ಹಾವೇರಿ:

    ಚೇರ್‌ಕಾರ್ (CC): ₹778

    ಎಕ್ಸಿಕ್ಯೂಟಿವ್ ಚೇರ್‌ಕಾರ್ (EC): ₹1,588

    ಬೆಂಗಳೂರು-ದಾವಣಗೆರೆ:

    ಚೇರ್‌ಕಾರ್ (CC): ₹676

    ಎಕ್ಸಿಕ್ಯೂಟಿವ್ ಚೇರ್‌ಕಾರ್ (EC): ₹1,379

    ಬೆಂಗಳೂರು-ತುಮಕೂರು:

    ಚೇರ್‌ಕಾರ್ (CC): ₹298

    ಎಕ್ಸಿಕ್ಯೂಟಿವ್ ಚೇರ್‌ಕಾರ್ (EC): ₹615

    ಬೆಂಗಳೂರು-ಯಶವಂತಪುರ:

    ಚೇರ್‌ಕಾರ್ (CC): ₹242

    ಎಕ್ಸಿಕ್ಯೂಟಿವ್ ಚೇರ್‌ಕಾರ್ (EC): ₹503

    ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ನಿಂದ ‘ಫ್ರೀಡಂ ಸೇಲ್’; ₹1,279ರಿಂದ ವಿಮಾನ ಟಿಕೆಟ್‌ ಲಭ್ಯ

    ಕೃಷಿ ಎಐ ಕನ್ನಡ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ

    ಎಐ ಅಡ್ವೋಕೇಟ್‌ ಅಸಿಸ್ಟೆಂಟ್‌ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading