Sunday, November 1, 2026
spot_img
More
    spot_img
    Homescrolling newsನನ್ನನ್ನು ಟ್ರಂಪ್​ ಡೇಟಿಂಗ್​ಗೆ ಕರೆದಿದ್ದರು ಎಂದ ಖ್ಯಾತ ಹಾಲಿವುಡ್ ನಟಿ

    ನನ್ನನ್ನು ಟ್ರಂಪ್​ ಡೇಟಿಂಗ್​ಗೆ ಕರೆದಿದ್ದರು ಎಂದ ಖ್ಯಾತ ಹಾಲಿವುಡ್ ನಟಿ

    ಹ್ಯಾರಿ ಪಾಟರ್’ ಖ್ಯಾತಿಯ ಎಮ್ಮಾ ಥಾಂಪ್ಸನ್ ಇತ್ತೀಚೆಗೆ ಲೊಕಾರ್ನೊ ಚಲನಚಿತ್ರೋತ್ಸವದಲ್ಲಿ ಭಾಗವಹಿಸಿದ್ದರು. ಅಲ್ಲಿ ಅವರು ತಮ್ಮ  ಅನೇಕ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ, ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮಗೆ ಕರೆ ಮಾಡಿದ್ದನ್ನು ಬಹಿರಂಗಪಡಿಸಿದ್ದಾರೆ!

    ‘ಪ್ರೈಮರಿ ಕಲರ್ಸ್’ ಚಿತ್ರದ ಚಿತ್ರೀಕರಣದಲ್ಲಿದ್ದಾಗ ಡೊನಾಲ್ಡ್ ಟ್ರಂಪ್ ತಮಗೆ ಕರೆ ಮಾಡಿದ್ದರು ಮತ್ತು ಆ ಸಮಯದಲ್ಲಿ ಅವರು ಕೆನ್ನೆತ್ ಬ್ರಾನಾಗ್‌ನಿಂದ ವಿಚ್ಛೇದನ ಪಡೆದಿದ್ದರು ಎಂದು ಬಹಿರಂಗಪಡಿಸಿದ್ದಾರೆ. “ನಾನು ನನ್ನ ವ್ಯಾನ್‌ನಲ್ಲಿ ಕುಳಿತಿದ್ದಾಗ, ಫೋನ್ ರಿಂಗಾಯಿತು. ಇನ್ನೊಂದು ಕಡೆಯಿಂದ ಒಂದು ಧ್ವನಿ ಬಂದಿತು, ಹಲೋ, ನಾನು ಡೊನಾಲ್ಡ್ ಟ್ರಂಪ್, ಆದರೆ ಅದು ತಮಾಷೆ ಎಂದು ನಾನು ಭಾವಿಸಿದೆ.” “ನಾನು ನಿಮಗೆ ಹೇಗೆ ಸಹಾಯ ಮಾಡಲಿ ಎಂದು ಕೇಳಿದೆ. ಆಗ ಅವರು, ನೀವು ನನ್ನ ಐಷಾರಾಮಿ ಸ್ಥಳಗಳಲ್ಲಿ ಒಂದಕ್ಕೆ ಬಂದು ತಂಗಬೇಕೆಂದು ನಾನು ಬಯಸುತ್ತೇನೆ. ಬಹುಶಃ ನಾವು ಒಟ್ಟಿಗೆ ಊಟ ಮಾಡಬಹುದು” ಎಂದರು. ಆದರೆ ನಾನು ಯಾವುದೇ ಹಿಂಜರಿಕೆಯಿಲ್ಲದೆ “ಇದು ತುಂಬಾ ಚೆನ್ನಾಗಿದೆ. ತುಂಬಾ ಧನ್ಯವಾದಗಳು. ನಾನು ನಿಮ್ಮನ್ನು ಮತ್ತೆ ಸಂಪರ್ಕಿಸುತ್ತೇನೆ” ಎಂದು ಕರೆ ಕಟ್​ ಮಾಡಿದೆ ಎಂದಿದ್ದಾರೆ.


    ನಂತರ, ಟ್ರಂಪ್​ (Donald Trump) ಅವರು, ತಮ್ಮ ಮೊದಲ ಪತ್ನಿ ಮಾರ್ಲಾ ಮೇಪಲ್ಸ್‌ನಿಂದ ಬೇರ್ಪಟ್ಟಿದ್ದು ವಾಸ್ತವವಾಗಿ ಬೇರ್ಪಟ್ಟ ವಿಷಯ ತಿಳಿಯಿತು. ಅವರ ತಂಡವು ಬಹುಶಃ ಅವರಿಗೆ ಒಳ್ಳೆಯ ಸಂಗಾತಿಯನ್ನು ಹುಡುಕುತ್ತಿತ್ತು. ಆಗ ನಾನು ಸಿಕ್ಕಿರಬಹುದು. ನನ್ನ ಮಾಹಿತಿಯನ್ನು ಟ್ರಂಪ್​ಗೆ ಅವರು ನೀಡಿದ್ದಾರೆ. ಆದ್ದರಿಂದ ಅವರು ನೇರವಾಗಿ ನನಗೆ ಕರೆ ಮಾಡಿದ್ದರು ಎಂದು ಎಮ್ಮಾ ಥಾಂಪ್ಸನ್ ಹೇಳಿದ್ದಾರೆ. ಒಂದು ವೇಳೆ, ನಾನು ಡೊನಾಲ್ಡ್ ಟ್ರಂಪ್ ಜೊತೆ ಡೇಟಿಂಗ್‌ಗೆ ಹೋಗಿದ್ದರೆ, ನಾನು ಅಮೆರಿಕದ ಇತಿಹಾಸವೇ ಬದಲದಾಗುತ್ತಿತ್ತು ಎಂದಿದ್ದಾರೆ ನಟಿ.

    ,ಈ ದಿನಾಂಕದಿಂದ ಫಾಸ್ಟ್‌ಟ್ಯಾಗ್‌ ವಾರ್ಷಿಕ ಪಾಸ್‌ ವಿತರಣೆ ಪ್ರಾರಂಭ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search