ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ MLC ಸಿ.ಟಿ ರವಿ ಅವರು ಈ ಕೆಳಗಿನಂತೆ 19 ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. ಧರ್ಮಸ್ಥಳ ಕ್ಷೇತ್ರಕ್ಕೆ ಕೆಲ ಪಟ್ಟಬದ್ಧ ಹಿತಾಸಕ್ತಿಗಳು ಹಾಗೂ ಹಿಂದೂ ವಿರೋಧಿ ಶಕ್ತಿಗಳು ವ್ಯಾಪಕವಾಗಿ ಅಪಪ್ರಚಾರವೆಸಗುತ್ತಾ ಕ್ಷೇತ್ರದ ಗೌರವ ಹಾಗೂ ಘನತೆಗೆ ಕೆಸರೆರೆಚಲು ಪ್ರಯತ್ನ ಮಾಡುತ್ತಿರುವುದು ಅಕ್ಷಮ್ಯ ಅಪರಾಧ. ಷಡ್ಯಂತ್ರದಂತೆ ತೋರುವ ಈ ಎಲ್ಲಾ ಬೆಳವಣಿಗೆಗಳನ್ನು ನೋಡಿದಾಗ ಹಲವು ಪ್ರಶ್ನೆಗಳು ಮೂಡುತ್ತವೆ ಎಂದಿದ್ದಾರೆ.
- ಮುಖ್ಯಮಂತ್ರಿಗಳೇ, ನೀವು SIT ರಚನೆ ಮಾಡುವುದಿಲ್ಲ ಎಂದ ಮರುದಿನವೇ ರಚನೆ ಮಾಡುವಂತಾದದ್ದು ಯಾಕೆ?
- SIT ರಚಿಸಲು ಒತ್ತಡ ಹೇರಿದವರುಯಾರು? ಎಡಪಂಥೀಯರು? ಕಮ್ಯುನಿಸ್ಟ್‌ಗಳು? ಜಿಹಾದಿಗಳು ಅಥವಾ ನಿಮ್ಮ ಸರ್ಕಾರದ ಒಳಗಿನ ಹಿಂದುವಿರೋಧಿ ನಾಸ್ತಿಕರೇ?
- SIT ತನಿಖೆಯ ನಿಜವಾದ ಗುರಿ – ಸತ್ಯ ಹೊರ ತರುವುದುನಾ? ಅಥವಾ ಶ್ರೀಕ್ಷೇತ್ರ ಧರ್ಮಸ್ಥಳದ ಹೆಸರಿಗೆ ಮಸಿಬಳೆಯುವುದಾ?
- SIT ಜನರ ನಂಬಿಕೆಯನ್ನು ಉಳಿಸಲು ಮಧ್ಯಂತರ ವರದಿ ಬಿಡುಗಡೆ ಮಾಡದಿರುವುದು ಏಕೆ?
- ಈಗ ಅನಾಮದೇಯನೊಬ್ಬ ಮಾಡಿದ ಹೇಳಿಕೆಯ ಸತ್ಯಾಸತ್ಯತೆಯನ್ನು ಪರಿಶೀಲನೆ ಮಾಡದೆ, ಹಲವು ಹಿಂದು ವಿರೋಧಿ ಸಂಘಟನೆಗಳ ಒತ್ತಾಯಕ್ಕೆ (ದಿನೇಶ್ ಗುಂಡೂರಾವ್ ಹೇಳಿಕೆಯಂತೆ), ಸರ್ಕಾರ ಯಾವುದೇ ಆಧಾರ ಇಲ್ಲದಿದ್ದರೂ SIT ರಚಿಸಿದ್ದು ಯಾಕೆ?
- ದೂರು ನೀಡುವವರ ಪ್ರಾಮಾಣಿಕತೆ ಮತ್ತು ಹೇಳಿಕೆಗಳನ್ನು ಪ್ರಾಥಮಿಕವಾಗಿ ಪರಿಶೀಲನೆ ಮಾಡದೆ ಹೇಗೆ ಸ್ವೀಕರಿಸುತ್ತಿದ್ದೀರಿ?
- ಈ “ಭೀಮ” ಎಂಬ ಮುಖ ಮುಚ್ಚಿದ ‘ಮಾಸ್ಕ್ ಮ್ಯಾನ್’ ಯಾರು?
- ಇಷ್ಟು ವರ್ಷ ಎಲ್ಲಿದ್ದ? ಅವನನ್ನು ಯಾರು ರಕ್ಷಿಸುತ್ತಿದ್ದರು?
- ಹದಿಮೂರು ಸ್ಥಳ ಗುರುತಿಸಿದ್ದೇನೆ ಎಂದವನು ಈಗ ತನಗೆ ಮನಬಂದಲ್ಲಿ, ದಿನಕ್ಕೊಂದು ಜಾಗ ತೋರಿಸುತ್ತಿವುದು ಯಾಕೆ?
- ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿಯವರೇ ಮುಸುಕುಧಾರಿಯ ಮಂಪರು ಪರೀಕ್ಷೆ ಆಗಬೇಕು ಎಂದರು, ಅದಕ್ಕೆ ಅನುಮತಿ ಕೊಡದಿರಲು ಕಾರಣ ಏನು? ಪರೀಕ್ಷೆ ನಡೆಯದಂತೆ ಒತ್ತಾಯ ಹೇಳಿದವರು ಯಾರು?
- “ನೂರಾರು ಹೆಣ ಹೂಳಿದ್ದೇನೆ” ಎಂದು ಹೇಳಿ ತಲೆ ಬುರುಡೆ ತಂದು ಪೊಲೀಸರಿಗೆ ಒಪ್ಪಿಸಿದ ಆ ತಲೆ ಬುರುಡೆ ಯಾರದ್ದು? , ಎಲ್ಲಿ ಸಿಕ್ಕಿತು, ಅವನು ಹೇಗೆ ತಂದ?
- ಇಲ್ಲಿಯವರೆಗೆ ಯಾವ ಸಾಕ್ಷ್ಯಾಧಾರ ದೊರೆಯದಿದ್ದರೂ ಆತ ಹೇಳಿದ ಜಾಗವನ್ನೇಲ್ಲಾ, ಮರು ಪ್ರಶ್ನಿಸದೆ SIT ಅಧಿಕಾರಿಗಳು ಅಗೆಯುತ್ತಿರುವುದರ ಹಿಂದಿನ ಮರ್ಮ ಏನು?
- ಶ್ರೀ ಕ್ಷೇತ್ರದ ವಿರುದ್ಧ ಯಾರೇ ಬಂದು ಹೇಳಿದರು ದೂರು ಸ್ವೀಕರಿಸುವ “ಓಪನ್ ಡೋರ್ ” ನೀತಿಯ ಹಿಂದೆ ಯಾವ ರಾಜಕೀಯ ಲಾಭದ ಯೋಜನೆ ಇದೆ?
- ಧರ್ಮಸ್ಥಳದ ಭಕ್ತರ ಭಾವನೆಗಳಿಗೆ ಘಾಸಿಯಾಗದಂತೆ ಯಾವ ಕ್ರಮಗಳನ್ನು ತೆಗೆದುಕೊಂಡಿದ್ದೀರಿ?
- ಯಾವುದೇ ಆಧಾರಗಳು ಇಲ್ಲದೆ ಇದ್ದರೂ ರಾಷ್ಟ್ರೀಯ ಅಂತರಾಷ್ಟ್ರೀಯ ಸುದ್ದಿವಾಹಿನಿಗಳಲ್ಲಿ ಧರ್ಮಸ್ಥಳದ ಬಗ್ಗೆ ಕಪೋಲಕಲ್ಪಿತ ಸುದ್ದಿಯನ್ನು ಭಿತ್ತರಿಸತ್ತಿರುವುದು ಷಡ್ಯಂತ್ರದ ಭಾಗವಲ್ಲವೇ?
- ಘನ ನ್ಯಾಯಾಲಯಕ್ಕೆ ಸಾಕ್ಷ್ಯ ಕೊಡಲು ಭಯವಿದ್ದವರು ಸೋಶಿಯಲ್ ಮೀಡಿಯಾದಲ್ಲಿ ಮುಕ್ತವಾಗಿ ಆರೋಪ ಮಾಡುವ ಧೈರ್ಯವನ್ನು ಹೇಗೆ ತೋರಿಸುತಿದ್ದಾರೆ?
- ಒಬ್ಬ ಮುಸ್ಲಿಂ ಯೂ ಟ್ಯೂಬರ್ ಜೊತೆಗೆ ಕೆಲವು ಹಿಂದು ವಿರೋಧಿ ಯುಟ್ಯೂಬರ್ಗಳು SIT ತನಿಖೆಯ ಕುರಿತು ನಿರಂತರವಾಗಿ “ನಿಖರ ಮಾಹಿತಿ” ನೀಡುವ ವಿಡಿಯೋಗಳ ಸತ್ಯಾಸತ್ಯತೆ ಏನು?
- ಈ ಮಾಹಿತಿಯನ್ನು ಅವರಿಗೆ ಯಾರು ನೀಡಿದ್ದು? SIT ಇದುವರೆಗೂ ಯಾರಿಗಾದರೂ ಅಧಿಕೃತ ಮಾಹಿತಿ ನೀಡಿದೆಯ?
- SIT ಯಾವುದೇ ಆಧಿಕೃತ ಮಾಹಿತಿ ನೀಡದೆ ಇದ್ದರೆ ಸುಳ್ಳು ಸುದ್ದಿ ಹರಡುತ್ತಿರುವ ಈ ಸೊ ಕಾಲ್ಡ್ ಯು ಟ್ಯೂಬರ್ ಗಳ ಮೇಲೆ SIT ಯಾವ ಕ್ರಮ ತೆಗೆದುಕೊಂಡಿದೆ?
ಸನ್ಮಾನ್ಯ ಮುಖ್ಯಮಂತ್ರಿಗಳೇ, ಮಾನ್ಯ ಗ್ರಹಸಚಿವರೆ, ಸರ್ಕಾರ ಈ ಕೂಡಲೇ ನೂರಾರು ಆಸ್ತಿಕ ಬಂಧುಗಳ, ಶ್ರೀ ಕ್ಷೇತ್ರಧರ್ಮಸ್ಥಳದ ಆರಾಧ್ಯ ದೈವ ಶ್ರೀ ಮಂಜುನಾಥ ಸ್ವಾಮಿಯ ಭಕ್ತರ ಮನದಲ್ಲಿರುವ ಮೇಲಿನ ಪ್ರಶ್ನೆಗಳಿಗೆ ಸಮರ್ಪಕವಾದ ಉತ್ತರ ನೀಡಿ.
ಹಾಗೆಯೇ,
ಶ್ರೀ ಕ್ಷೇತ್ರದ ಬಗ್ಗೆ, ಧರ್ಮಧಿಕಾರಿಯವರ ಬಗ್ಗೆ ಸುಳ್ಳು ಹಾಗು ಗೌರವಕ್ಕೆ ಚ್ಯುತಿ ತರುವಂತಹ ಸುದ್ದಿ ಹರಡುತ್ತಿರುವ ಇನ್ಫ್ಲುಯೆನ್ಸರ್/ಯುಟ್ಯೂಬರ್’ಗಳ ವಿರುದ್ಧ ಏನು ಕ್ರಮ ಕೈಗೊಳ್ಳುತ್ತಿರಿ?
“ಭೀಮ” ಎಂದು ಕರೆಸಿಕೊಳ್ಳುತ್ತಿರುವ ಅನಾಮದೇಯನ ಮಂಪರು ಪರೀಕ್ಷೆ ಯಾವಾಗ ಮಾಡುತ್ತೀರಿ? ಎಂಬುದನ್ನು ಸ್ಪಷ್ಟಪಡಿಸಿ ಎಂಬುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಆಗ್ರಹಿಸಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


